ಶಿವಣ್ಣ ಆಯ್ತು ಈಗ ಮತ್ತೋರ್ವ ಸೂಪರ್​ಸ್ಟಾರ್​ಗೆ ಕ್ಯಾನ್ಸರ್? ಸಿಕ್ಕಿತು ಸ್ಪಷ್ಟನೆ

ಬೆಂಗಳೂರು :

     ಶಿವರಾಜ್​ಕುಮಾರ್ ಅವರಿಗೆ ಕ್ಯಾನ್ಸರ್ ಇರೋ ವಿಚಾರ ತಿಳಿದ ಬಳಿಕ ಫ್ಯಾನ್ಸ್ ಆತಂಕಗೊಂಡಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದ ಅವರು, ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಕ್ಯಾನ್ಸರ್​ನಿಂದ ಚೇತರಿಸಿಕೊಂಡು ಅವರು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಹೀಗಿರುವಾಗಲೇ ಸ್ಟಾರ್ ಹೀರೋ ಒಬ್ಬರಿಗೆ ಕ್ಯಾನ್ಸರ್ ಇರೋ ಬಗ್ಗೆ ಸುದ್ದಿ ಹರಿದಾಡಿತ್ತು.

    ಈ ವಿಚಾರ ಕೇಳಿ ಅವರ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು. ಅಷ್ಟಕ್ಕೂ ಕ್ಯಾನ್ಸರ್ ಇದೆ ಎಂದು ಸುದ್ದಿ ಹಬ್ಬಿದ್ದು ಯಾರ ಬಗ್ಗೆ? ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ  ಬಗ್ಗೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಸುದ್ದಿ ಒಂದು ಹರಿದಾಡಿತ್ತು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ನೀಡೋ ಕೆಲಸ ಆಗಿದೆ.

   ‘ಮಮ್ಮುಟ್ಟಿ ಸದ್ಯ ವೆಕೇಶನ್​ನಲ್ಲಿ ಇದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಕ್ಯಾನ್ಸರ್ ಇದೆ ಎಂಬ ವಿಚಾರದಲ್ಲಿ ಸತ್ಯ ಇಲ್ಲ’ ಎಂದು ತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ರಂಜಾನ್ ಕಾರಣಕ್ಕೆ ಮಮ್ಮುಟ್ಟಿ ಅವರು ಉಪವಾಸ ಮಾಡುತ್ತಿದ್ದಾರೆ. ಇದಕ್ಕಾಗಿ ಬ್ರೇಕ್ ಪಡೆದಿದ್ದಾರೆ. ಅವರು ವೆಕೇಶನ್ ತೆರಳಿದ್ದು, ಶೀಘ್ರವೇ ಶೂಟ್​ಗೆ ಮರಳಲಿದ್ದಾರೆ’ ಎಂದು ಮಮ್ಮುಟ್ಟಿ ತಂಡದವರು ಹೇಳಿದ್ದಾರೆ.