ಪೆಟ್ರೋಲ್ ಡಿಸೇಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾದ ಬೆನ್ನಲ್ಲೇ ತರಕಾರಿಗಳು ಕೂಡ ಸಿಕ್ಕಾಪಟ್ಟೆ ದುಬಾರಿಯಾಗ್ತಿವೆ. ಬಿರು ಬೇಸಿಗೆಯಲ್ಲಿ ಬೇಯುತ್ತಿರೋ ಜನಸಾಮಾನ್ಯರು ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ಕೆಲವು ತರಕಾರಿಗಳ ಬೆಲೆಯಂತೂ ಗಗನಕ್ಕೇರಿದೆ.
ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಹಸಿರು ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಅಂಗಡಿಗಳಲ್ಲಿ ತರಕಾರಿಗಳು ಮೊದಲಿನಂತೆ ರಾಶಿ ರಾಶಿಯಾಗಿ ಕಾಣುತ್ತಿಲ್ಲ. ತರಕಾರಿ ದುಬಾರಿಯಾಗಿರೋದ್ರಿಂದ ಊಟದ ತಟ್ಟೆಯ ರುಚಿಯೂ ಹದಗೆಟ್ಟಿದೆ. ದೆಹಲಿಯಲ್ಲಿ ಪಾಲಕ್ ಸೊಪ್ಪಿನ ಬೆಲೆ ಕೆಜಿಗೆ 40 ರೂಪಾಯಿಗಿಂತ್ಲೂ ಹೆಚ್ಚಾಗಿದೆ.
ಸೋರೆಕಾಯಿ, ಬೆಂಡೆಕಾಯಿ ಸೇರಿದಂತೆ ಇನ್ನೂ ಹಲವು ತರಕಾರಿಗಳ ದರ ವಿಪರೀತ ಏರಿಕೆಯಾಗಿದೆ. ಬೇಸಿಗೆಯಲ್ಲಿ ತಂಪಾಗಿ ಜ್ಯೂಸ್ ಕುಡಿಯೋಣ ಅಂದ್ರೆ ಒಂದು ನಿಂಬೆ ಹಣ್ಣಿನ ಬೆಲೆ 10 ರೂಪಾಯಿ ಆಗಿದೆ. ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ಮಂಡಿಗಳಲ್ಲಿ ತರಕಾರಿಗಳ ಬೆಲೆ ಗಗನ ಮುಟ್ಟುತ್ತಿದೆ. ಕೆಲವೆಡೆ ಸಾಕಷ್ಟು ತರಕಾರಿ ಕೂಡ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ.
ನಿಂಬೆ ಹಣ್ಣು – 200-250 ರೂ./ಕೆಜಿ
ಬೆಂಡೆಕಾಯಿ – 100-120 ರೂ./ಕೆಜಿ
ಸೋರೆಕಾಯಿ – 120-130 ರೂ./ಕೆಜಿ
ಹೂಕೋಸು – 40-60 ರೂ./ಕೆಜಿ
ಶುಂಠಿ – 60-70 ರೂ./ಕೆಜಿ
ಕ್ಯಾರೆಟ್ – 40-50 ರೂ./ಕೆಜಿ
ಕ್ಯಾಪ್ಸಿಕಂ – 70-90 ರೂ./ಕೆಜಿ
ಈರುಳ್ಳಿ – 25-30 ರೂ./ಕೆಜಿ
ರಷ್ಯಾದಿಂದ ಭೀಕರ ಹತ್ಯಾಕಾಂಡ ಬೆನ್ನಲ್ಲೇ ಉಕ್ರೇನ್ನಲ್ಲಿ ʻ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ ʼ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ