ರೈತರ ಜೊತೆ ಅನುಚಿತ ವರ್ತನೆ ಹಿನ್ನಲೆ : ಕೃಷಿ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ

ಚಿತ್ರದುರ್ಗ

    ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಕಚೇರಿಗೆ ಕಾರ್ಯನಿರ್ವಹಿಸುತ್ತಿರುವ ದಿನಗಳಿಂದ ರೈತರ ಬಗ್ಗೆ ಅನೋಕ್ಷಿತ ವರ್ತನೆ ಮತ್ತು ಬೀಜ ಗೊಬ್ಬರ ಕಳೆಪೆ ಬಗ್ಗೆ ದೂರು ನೀಡಿ ಕಚೇರಿಗೆ ಹೋದಾಗ ಅಸಭ್ಯವಾಗಿ ಒಪ್ಪಿಸಿದ್ದು ಇವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು

    ಕಳೆದ 19-06-2025 ರಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಮುಂದೆ ಚಳುವಳಿಯನ್ನು ಮಾಡಲಾಗಿತ್ತು ಆದರೆ ಕೆಲವೇ ಕೆಲವು ಸಂಘಟನೆಗಳು ಚಳುವಳಿ ಮಾಡಿದವರನ್ನು ಗೂಂಡಾಗಳು ಎಂದು ಹೇಳಿದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು ಇದೆ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರು ಜಿಲ್ಲೆಯಲ್ಲಿ ಪಾದ ಗ್ರಹಣ ಮಾಡಿದಾಗ ಒಂದೇ ಒಂದು ಗೊಬ್ಬರದ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಿಲ್ಲ

   ಗೊಬ್ಬರ ಅಂಗಡಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ತಿಳಿಸಿದರು ಸಭೆಯಲ್ಲಿ ಭಾಗವಹಿಸಿದ ಮುಖಂಡರು ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಜಿಲ್ಲಾಧ್ಯಕ್ಷರಾದ ಡಿ ಎಸ್ ಹಳ್ಳಿ ಮಲ್ಲಿಕಾರ್ಜುನ್ ಕಾರ್ಯದರ್ಶಿಗಳಾದ ಮಲ್ಲಹಳ್ಳಿ ರವಿಕುಮಾರ್ ಬಾಗೇನಾಳ್ ತಿಪ್ಪೇಸ್ವಾಮಿ ಎಸ್ ಆರ್ ತಿಮ್ಮಯ್ಯ ಭದ್ರಾ ಮೇಲ್ದಂಡೆ ಜಿಲ್ಲಾಧ್ಯಕ್ಷರು ಚಿಕ್ಕಪ್ ಗೆರೆ ನಾಗರಾಜ್ ಮುದ್ದಾಪುರ ನಾಗಣ್ಣ ಎಲ್ ಬಸವರಾಜಪ್ಪ ಅಳಿಯೂರು ಸಿದ್ದಣ್ಣ ರಾಮರೆಡ್ಡಿ ಚಿಕ್ಕಪ್ ಗೆರೆ ರಾಜಣ್ಣಬಾಗೇನಾಳ್ ಬಸಪ್ಪ ಲಕ್ಷ್ಮಿಕಾಂತ್ ಸೂರಪ್ಪ ನಾಯಕ ಟಿ ವೆಂಕಟೇಶ್ ತಿಮ್ಮೇಶ್ ತಿರುಮಲಾಪುರ ಸಿದ್ದರಾಮಣ್ಣ ಹೊಳಲ್ಕೆರೆ ಹಾಡನೂರು ಶಿವಕುಮಾರ್ ವೀರಣ್ಣ ಹೊಸಳ್ಳಿ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು

Recent Articles

spot_img

Related Stories

Share via
Copy link