ಪಟ್ಟು ಸಡಿಲಿಸಿದ ಡಿಕೆಶಿ : ಕೊನೆಗೂ ಬಿಜೆಪಿ ಶಾಸಕನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ

ಬೆಂಗಳೂರು: 

   ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿಗೆ ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್ ಅನುದಾನ ಬಿಡುಗಡೆ ಮಾಡಿದ್ದಾರೆ. ಶಾಸಕರ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಡಿಕೆ ಶಿವಕುಮಾರ್, ತಗ್ಗಿ ಬಗ್ಗಿ ನಡೆದುಕೊಳ್ಳಬೇಕು ಎಂದು ಗರಂ ಆಗಿದ್ದರು.  ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ಡಿಕೆ ಶಿವಕುಮಾರ್

   ವಹಿಸಿಕೊಂಡ ಬಳಿಕ ಬೆಂಗಳೂರು ಅದೋಗತಿ ಆಗಿದೆ ಎಂದು ಜಯನಗರ ಶಾಸಕ ಸಿಕೆ ರಾಮಮೂರ್ತಿ ಹೇಳಿಕೆ ನೀಡಿದ್ದರು. ಇದು ಡಿಕೆ ಶಿವಕುಮಾರ್ ಆಕ್ರೋಶಕ್ಕೆ ಕಾರಣವಾಗಿತ್ತು.ನಾನು ಉಸ್ತುವಾರಿ ಸಚಿವನಾದ ಬಳಿಕ ಬೆಂಗಳೂರಿನಲ್ಲಿ ಏನು ಅದೋಗತಿ ಆಗಿದೆ ಎಂದು ಶಾಸಕರು ಹೇಳಲಿ ಆಗ ನಾನು ಅನುದಾನ ಬಿಡುಗಡೆ ಮಾಡ್ತೀನಿ ಎಂದು ಅನುದಾನ ತಡೆಹಿಡೆಯಲಾಗಿತ್ತು. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.

   ಬೆಂಗಳೂರಿನಲ್ಲಿ ನಡೆದ ವಕ್ಫ್ ವಿರೋಧಿ ಹೋರಾಟದಲ್ಲೂ ಈ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದ ಶಾಸಕ ಮುನಿರತ್ನ ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದರು. ಆದರೆ ಇದೀಗ ಕೊನೆಗೂ ಡಿಕೆ ಶಿವಕುಮಾರ್ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ‌.ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಲ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.ಆದರೆ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನುದಾನ ತಡೆಹಿಡಿಯಲಾಗಿತ್ತು.

   ಜಯನಗರ ಕ್ಷೇತ್ರದ ಅನುದಾನ ತಡೆಹಿಡಿದಿದ್ದಕ್ಕೆ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಡಿಸಿಎಂ ಈ ನಡೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

   10 ಕೋಟಿ ಅನುದಾನ ಬಿಡುಗಡೆ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಶಾಸಕರ ಜೊತೆ ಚರ್ಚೆಸಿ ಬಿಡುಗಡೆ ಮಾಡಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

   ಜಯನಗರ ವಿಧಾನಸಭಾ ಕ್ಷೇತ್ರದ ಮಹತ್ವಪೂರ್ಣ ಹಾಗೂ ಅತೀ ಅವಶ್ಯಕತೆ ಇರುವ ಯೋಜನೆ ಗಳ ಕ್ರಿಯ ಯೋಜನೆ ರೂಪಿಸಿ ಯೋಜನೆ ಕೈಗೆತ್ತುಕೊಳ್ಳಲು ಬಿಬಿಎಂಪಿ ಆಯುಕ್ತರಿಗೆ ಪತ್ರ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

Recent Articles

spot_img

Related Stories

Share via
Copy link