ಬೆಂಗಳೂರು:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಳಿಕ ಮೊದಲ ಬಾರಿ ಅವರ ತಾಯಿ ಭವಾನಿ ರೇವಣ್ಣ ಅವರು ಸಾರ್ವಜನಿಕವಾಗಿ ಇಂದು ಕಾಣಿಸಿಕೊಂಡಿದ್ದಾರೆ.ಇಂದು ಹಾಸನಾಂಬ ದರ್ಶನಕ್ಕೆ ಪತಿ ರೇವಣ್ಣ ಜತೆ ಭವಾನಿ ರೇವಣ್ಣ ಅವರು ದೇವಸ್ಥಾನಕ್ಕೆ ಬಂದಿದ್ದಾರೆ.
ವಿಐಪಿ ಟಿಕೆಟ್ ಮೂಲಕ ದೇವಿಯ ದರ್ಶನವನ್ನು ರೇವಣ್ಣ ಕುಟುಂಬ ಮಾಡಿತು.ಪ್ರತಿ ವರ್ಷವೂ ಭವಾನಿ ರೇವಣ್ಣ ಅವರು ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನವನ್ನು ಪಡೆಯುತ್ತಾರೆ. ಭವಾನಿ ಅವರು ತಮ್ಮ ಕಿರಿ ಮಗ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಾಗೂ ಅತ್ಯಾಚಾರ ಪ್ರಕರಣದ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ದೇವಿಯ ದರ್ಶನಕ್ಕೆ ದಂಪತಿ ಸಮೇತರಾಗಿ ಆಗಮಿಸಿದ್ದಾರೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.