ಕಿರುತೆರೆ ನಗುವಿನ ಗಣಿ ಅನುಪಮಾ ಗೌಡ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ಸಂಗತಿಗಳು ….!

ಬೆಂಗಳೂರು : 

   ಕಷ್ಟದ ಹಾದಿಯಲ್ಲಿ ಸಾಗಿ ಬಂದ ಅನುಪಮಾ ಗೌಡ ಈಗ ತಮ್ಮದೇ ಆದ ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೊದಲು ತಮ್ಮ ನಟನೆಯಿಂದ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಅನುಪಮಾ ಗೌಡ ಬಳಿಕ ನಿರೂಪಕಿಯಾಗಿ ಕೂಡ ಸೈ ಎನಿಸಿಕೊಂಡರು. ಇನ್ನು ಬಿಗ್‌ಬಾಸ್‌ ಅವಕಾಶ ಮಿಸ್‌ ಮಾಡಿಕೊಳ್ಳದ ಅವರು, ಬಿಗ್‌ಬಾಸ್‌ ಸೀಜನ್ 5 ಸ್ಪರ್ಧಿಯಾಗಿ ಬಂದು ಜನರಿಗೆ ಮತ್ತಷ್ಟು ಹತ್ತಿರವಾದರು.

    ಸದ್ಯ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿರುವ ಅನುಪಮಾ ಗೌಡ, ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟೀವ್‌. ಹೆಚ್ಚೆಚ್ಚು ಟ್ರಾವೆಲ್‌ ಮಾಡುತ್ತಾ ತಮ್ಮ ಸುಂದರ ಅನುಭವಗಳನ್ನು ಹಂಚಿಕೊಳ್ಳುವ ಅವರು, ಆಗಾಗ ಸಖತ್‌ ಲುಕ್‌ನಲ್ಲಿ ಫೋಟೋಶೂಟ್‌ ಹಾಗೂ ರೀಲ್ಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಸದಾ ನಗು, ಮುಖದಲ್ಲೊಂದು ಪಾಸಿಟಿವ್‌ ವೈಬ್‌ ಇರುವ ಅನುಪಮಾ ಗೌಡ ತಮ್ಮ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ.

    ನಟನೆ ಆರಂಭಿಸುವ ಮೊದಲಲ್ಲ, ನಟಿಯಾದ ಮೇಲೂ ಅನುಪಮಾ ಗೌಡ ಮಾನಸಿಕ ಖಿನ್ನತೆಗೊಳಾಗಿದ್ದರು ಎನ್ನುವ ವಿಚಾರವನ್ನು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪ್ರಸ್ತುತ ನಾವು ಕಾಣುತ್ತಿರುವ ಅನುಪಮಾ ಅವರನ್ನು ಕಂಡರೆ ಇದು ಸುಳ್ಳು ಎನ್ನಬಹುದು ಯಾಕೆಂದರೆ ಅಷ್ಟರ ಮಟ್ಟಿಗೆ ಅವರು ಹಸನ್ಮುಖಿ. ಆದರೆ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಸ್ವತಃ ಅನುಪಮಾ ಗೌಡ ಅವರೇ ಆ ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

    ‘ಸುಮಾರು 7-8 ವರ್ಷಗಳ ಹಿಂದೆ ನಾನು ಖಿನ್ನತೆಗೆ ಒಳಗಾಗಿದ್ದೆ. ಆಗ ನಾನು ಆತ್ಮಹತ್ಯೆ ಯೋಚಿಸಿದ್ದೆ. ಆ ಸಮಯದಲ್ಲಿ ಬದುಕಿನ ಬಗ್ಗೆ ಹೋಪ್‌ ಇರಲಿಲ್ಲ. ನನಗೆ ಇಂಡಸ್ಟ್ರಿ, ಫ್ಯಾಮಿಲಿ ವೈಯಕ್ತಿಕ ಜೀವನ ಇದನ್ನೆಲ್ಲಾ ಧೈರ್ಯವಾಗಿ ಹೇಗೆ ನೋಡಬೇಕು ಅಂತಾ ಗೊತ್ತಿರಲಿಲ್ಲ. ಅಂತಹ ಸಂದರ್ಭ ಬಂದಿದ್ದಕ್ಕೆ, ಅದೇ ವೇಳೆ ನನ್ನ ಸ್ನೇಹಿತರು ನನ್ನ ಜೊತೆ ನಿಂತಿದ್ದಕ್ಕೆ, ಕೆಲವೊಂದು ಶೋಗಳು ನನಗೆ ಸಿಕ್ಕಿದ್ದಕ್ಕೆ ಬಹುಶಃ ನಾನು ಸ್ಟ್ರಾಂಗ್ ಆಗಿಬಿಟ್ಟೆ. ಮುಂದೆ ಹೋಗುತ್ತಾ ಹೋಗುತ್ತಾ.

    ಒಂದೊಂದು ಹಂತದಲ್ಲಿ ಒಬ್ಬರನ್ನು ಭೇಟಿಯಾಗುತ್ತಾ ಹೋಗುತ್ತೇವೆ. ಅವರಿಂದ ಒಂದೊಂದು ಪಾಠವನ್ನು ಕಲಿಯುತ್ತಾ ಹೋಗುತ್ತೇವೆ. ಆ ಪಾಠನೇ ನಮ್ಮನ್ನು ಇನ್ನಷ್ಟು ಸ್ಟ್ರಾಂಗ್ ಆಗಿ ಮಾಡಿಬಿಡುತ್ತದೆ. ನಾವು ಹೇಳಬಹುದು ನಾವು ದುಡಿಯುತ್ತೇವೆ, ನಾವು ಇಂಡಿಪೆಂಡೆಂಟ್‌ ಅದಕ್ಕೆ ನಾನು ಸ್ಟ್ರಾಂಗ್ ಅನ್ನಬಹುದು. ಆದರೆ ಸಮಯ ಸಂದರ್ಭಗಳು ನಮ್ಮನ್ನು ಗಟ್ಟಿ ಮಾಡುತ್ತವೆ ಎನ್ನುವ ಮಾತುಗಳನ್ನು ಅನುಪಮಾ ಗೌಡ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap