ತುಮಕೂರು
ಏ. 1ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ.ಆದರೆ ಸಿದ್ಧಗಂಗಾ ಮಠದ ಭಕ್ತರು, ನಮ್ಮೆಲ್ಲರಿಗೂ ಪವಿತ್ರ ದಿನ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.
ಇಡೀ ಜಗತ್ತಿನ ಲ್ಲಿ ಯಾರಾದರೂ ಮಠಾಧೀಶರು, 89ವರ್ಷಗಳ ಕಾಲ ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟು ಬದುಕು ಸವೆಸಿದರೆಂದರೆ ಅದು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಗಳು ಮಾತ್ರ. ಶ್ರೀ ಗಳ ಇಚ್ಛೆ ಆಶಯದನುಸಾರ ಶ್ರೀ ಮಠವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದು, ಚುನಾವಣಾ ನೀತಿ ಸಂಹಿತೆ ಯ ಕಾರಣ ರಾಜ್ಯ ಪಾಲರು, ಸಭಾಪತಿಗಳು ಬರಲಾಗಲಿಲ್ಲ, ಆದರೆ ಶ್ರೀ ಮಠ ಹಾಗೂ ಪೂಜ್ಯರ ಬಗ್ಗೆ ಅಪಾರ ಗೌರವಹೊಂದಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿ ದ್ದಾರೆಎಂದರು.
ಸಿದ್ಧಗಂಗೆ, ಸುತ್ತೂರು ಈ ಭಾಗದ ಸಮಾಜ ಕ್ಕೆ ಎರಡು ಕಣ್ಣುಗಳಿದ್ದಂತೆ, ಪೂಜ್ಯರ ಕಾಯಕಶಕ್ತಿ ಫಲ ಶ್ರೀಮಠ ಇಂದು ಎತ್ತರಕ್ಕೆ ಬೆಳೆಯಲು ಸಾಧ್ಯ ವಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
