ಕುಖ್ಯಾತ ಕಳ್ಳರ ಬಂಧನ, ಲಕ್ಷಾಂತರ ಮೌಲ್ಯದ ಆಭರಣಗಳು ಜಪ್ತಿ

ಬಾಗೇಪಲ್ಲಿ:

     ಪಟ್ಟಣದ ಪೊಲೀಸರು ಕಳ್ಳತನ ಪ್ರಕರಣಗಳನ್ನು ಬೇಧಿಸಿ ಸುಮಾರು 30 ಲಕ್ಷ ರೂಪಾಯಿಗಳು ಬೆಲೆಬಾಳುವಂತಹ ಚಿನ್ನಾಭರಣಗಳನ್ನು ಹಾಗೂ 3 ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಬಗ್ಗೆ ಶುಕ್ರವಾರ ಎಸ್ಪಿ ಕುಶಾಲ್ ಚೌಕ್ಸೆಯವರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿ ತಿಮಾಕಲಹಳ್ಳಿಯಲ್ಲಿ 2023ರ ಏಪ್ರಿಲ್ 27ರಂದು ನರಸಿಂಹಮೂರ್ತಿ ಮತ್ತು 28 ರಂದು ಸುಧಾಕರ್ ಎಂಬುವವರ ಮನೆಗಳಲ್ಲಿ ಕಳ್ಳತನಗಳಾಗಿವೆ ಎಂದು ಪೊಲೀಸರಿಗೆ ದೂರು ನೀಡಲಾಗಿರುತ್ತದೆ. ಈ ಪ್ರಕರಣಗಳನ್ನು ಭೇದಿಸಲು ಪೊಲೀಸರು ತಂಡಗಳನ್ನು ರಚನೆ ಮಾಡಿ, ಆರೋಪಿಗಳಿಗಾಗಿ ಪತ್ತೆ ಹಚ್ಚಲಾಗಿದ್ದು, ಕಳುವಾದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಉಮಾಶಂಕರ್ (27), ಜಗನ್ನಾಥ (33) ಎಂದು ತಿಳಿಸಿದರು.

Recent Articles

spot_img

Related Stories

Share via
Copy link