ಪಾಟ್ನಾ:
‘ಚುನಾವಣೆ ಎಂದರೆ ಕುಸ್ತಿ ಪಂದ್ಯವಲ್ಲ ಅಥವಾ ಸೌಂದರ್ಯ ಸ್ಪರ್ಧೆಯೂ ಅಲ್ಲ, ಇನ್ಯಾವುದೇ ರೀತಿ ಸ್ಪರ್ಧೆಯೂ ಅಲ್ಲ’ ಎಂದು ಬಿಹಾರದ ಹಿರಿಯ ಮುಖಂಡ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುದ್ದಿ ಕಿವಿಗೆ ಬಿದ್ದ ತಕ್ಷಣವೇ ಬಿಜೆಪಿಯ ಹಿರಿ-ಕಿರಿ ಮುಖಂಡರಿಂದ ವೈಯಕ್ತಿಕ ವಾಗ್ದಾಳಿ ಆರಂಭವಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಚುನಾವಣೆ ಎಂದರೆ ಕುಸ್ತಿ ಪಂದ್ಯವಲ್ಲ ಅಥವಾ ಸೌಂದರ್ಯ ಸ್ಪರ್ಧೆಯೂ ಅಲ್ಲ, ಇನ್ಯಾವುದೇ ರೀತಿ ಸ್ಪರ್ಧೆಯೂ ಅಲ್ಲ’ ಜನರು ದೇಶದ ಭವಿಷ್ಯ ಮತ್ತು ಭದ್ರತೆಗಾಗಿ ತೂಗಿ ಅಳೆದು, ಹಿಂದಿನ ನಿರ್ವಹಣೆಯನ್ನು ನೋಡಿಕೊಂಡು, ದೇಶದ ಹಿತಾಸಕ್ತಿಯಲ್ಲಿ ಮತ ಹಾಕುತ್ತಾರೆ ಎಂದು ಸುಶೀಲ್ ಮೋದಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
