ತಿಪಟೂರು:
ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ತೆರೆ
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಗೆದ್ದೆನೆಂದು ಹಿಗ್ಗದೆ, ಸೋತೆನೆಂದು ಕುಗ್ಗದೆ ಸತತ ಪರಿಶ್ರಮದಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಿನುಗುವ ನಕ್ಷತ್ರವಾಗಿ ಎಂದು ರಾಷ್ಟ್ರೀಯ ಖೋ-ಖೋ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೇಂದರ್ ಸಿಂಗ್ ತ್ಯಾಗಿ ಕ್ರೀಡಾಪಟುಗಳಿಗೆ ಕರೆ ನೀಡಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕಳೆದ 3 ದಿನಗಳಿಂದ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ, ತುಮಕೂರು ಜಿಲ್ಲಾ ಖೋ-ಖೋ ಸಂಸ್ಥೆ ಹಾಗೂ ತಿಪಟೂರು ಸ್ಪೋಟ್ರ್ಸ್ ಕ್ಲಬ್ನ ಸಹಯೋಗದೊಂದಿಗೆ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಏಳು-ಬೀಳು, ಸೋಲು-ಗೆಲುವು ಸಾಮಾನ್ಯ. ಆದರೆ ನಾವು ಸತತ ಪ್ರಯತ್ನದಿಂದ ಪ್ರಯತ್ನಿಸಿದರೆ ಎಲ್ಲವನ್ನು ಸಾಧಿಸಬಹುದು ಆ ನಿಟ್ಟಿನಲ್ಲಿ ನೀವುಗಳು ಪ್ರಯತ್ನ ಪಟ್ಟು ಯಶಸ್ಸನ್ನು ಸಾಧಿಸುವಂತಾಗಬೇಕು ಎಂದರು.
ಪುರುಷರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಮತ್ತು ಬೆಂಗಳೂರಿನ ವೈಸಿಸಿ ನಡುವಿನ ಪಂದ್ಯದಲ್ಲಿ 2 ಇನ್ನಿಂಗ್ಸ್ಗಳಿಂದ ಆಳ್ವಾಸ್ 16 ಮತ್ತು ಬೆಂಗಳೂರಿನ ವೈಸಿಸಿ 14 ಅಂಗಳನ್ನು ಪಡೆದು ಆಳ್ವಾಸ್ ಪ್ರಥಮ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಹಾವೇರಿಯ ಕೆಕೆಎಸ್ಸಿ ಕುರುಬೂರು ತಂಡ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಆಲ್ರೌಂಡರ್ ಪ್ರಸ್ತಿಯನ್ನು ಕ್ರಮವಾಗಿ ಆಳ್ವಾಸ್ನ ಮರಿಯಪ್ಪ, ಕೆಕೆಎಸ್ಸಿ ಕುರುಬೂರು ತೇಜಸ್ವಿನಿ ಪಡೆದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಖೋ-ಖೋ ಸಂಸ್ಥೆಯ ಉಪಾಧ್ಯಕ್ಷ ಹಾಗೂ ತಿಪಟೂರು ಸ್ಪೋಟ್ರ್ಸ್ ಕ್ಲಬ್ನ ಗೌರವಾಧ್ಯಕ್ಷ ಲೋಕೇಶ್ವರ್ ಕ್ರೀಡಾಕೂಟ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ