ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಶ್ರೇಷ್ಠ : ಶಿವಾನಂದ ಶಿವಾಚಾರ್ಯ

ಕುಣಿಗಲ್:

    ಎಷ್ಟೇ ಉನ್ನತ ಅಧಿಕಾರಿಯಾದರೂ ಅಕ್ಷರ ದಾಸೋಹಿಗಳಾದ ಶಿಕ್ಷಕ ವೃತ್ತಿಗಿರುವ ಗೌರವ, ಸಂತೃಪ್ತಿ,ಸಂತೋಷ, ಸಮಾಧಾನ ಬೇರೊಂದು ವೃತ್ತಿಯಲ್ಲಿರುವ ಜನರಿಗೆ ಸಿಗಲಾರದು ಆದ್ದರಿಂದಲೇ ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ ಎಂದು ತುಮಕೂರು ಹೀರೇಮಠದ ಶ್ರೀ ಸದಾನಂದ ಶಿವಾಚಾರ್ಯಸ್ವಾಮೀಜಿಗಳು ತಿಳಿಸಿದರು.

    ಅವರು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚಾರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಹಿತವಚನ ನೀಡಿದರು. ತಾವೇಲ್ಲಾ ಭಾಗ್ಯವಂತರೂ ಇಡೀ ಪ್ರಪಂಚದಲ್ಲಿಯೇ ಇಂದು ಶಿಕ್ಷಕ ವೃತ್ತಿಗೆ ದೊರಕುತ್ತಿದ್ದು ಇದೊಂದು ಅತ್ಯಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿ ಎಂದು ಸಂಭೋಧಿಸುವ ಮೂಲಕ ಶಿಕ್ಷಕ ವೃದ್ದಕ್ಕೆ ಉತ್ತಮ ಸಂದೇಶವನ್ನ ನೀಡಿದರು.

    ತಮ್ಮಲ್ಲಿರುವ ಜ್ಞಾನ ಭಂಡಾರವನ್ನ ಮಕ್ಕಳಿಗೆ ಧಾರೆ ಎರೆಯುತ್ತಿರುವ ಶಿಕ್ಷಕರನ್ನು ಬರೀ ಪ್ರಾತಸ್ಮರಿಣೀಯರು ಅಲ್ಲ, ಸಂಧ್ಯಾ ಸ್ಮರಣೀಯರೂ ಅಲ್ಲ, ನೀವು ತ್ರಿಕಾಲ ಸ್ಮರಣೀಯರು ಎಂದು ಪ್ರಶಂಸನೀಯ ಮಾತುಗಳನ್ನೇಳುವ ಮೂಲಕ ಶಿಕ್ಷಕರು ಉತ್ತಮ ಸನ್ನಡೆಯನ್ನ ಪಾಲಿಸಿಕೊಂಡು ಹೋಗುವಂತಹ ಕಿವಿಮಾತು ಹೇಳುವ ಮೂಲಕ ಅವರನ್ನ ಪ್ರೋತ್ಸಾಹಿಸಿದರು.

    ಗುರು ಎಂದರೆ ಗುರುತರವಾದ ಜವಾಬ್ದಾರಿಗೆ ಹೆಗಲು ಕೊಟ್ಟು ಹೋರುತ್ತಾರೋ ಅವರೇ ಗುರು. ಸಿಕ್ಕಾಬಟ್ಟೆ ಇರುವವರೆಲ್ಲಾ ಶಿಕ್ಷಕರಲ್ಲಾ. ಸಿಕ್ಕಿ ಸಿಕ್ಕಿದಂಗೆ ಇರುವರೂ ಶಿಕ್ಷಕರಲ್ಲ. ಆ ನಿಟ್ಟಿನಲ್ಲಿ ನಿಮಗಿರುವ ಸೀಮಿತ ಆಧಾಯದಲ್ಲಿ ಸಂತೋಷವಾಗಿದ್ದು ತಮ್ಮ ಜ್ಞಾನ ಭಂಡಾರವನ್ನ ಸಂಪೂರ್ಣವಾಗಿ ಮಕ್ಕಳಿಗೆ ಧಾರೆಯರಿ. ಶಿಕ್ಷಕರು ತಮ್ಮ ಶಿಷ್ಯಕೋಟಿ ಸಾಧನೆ ಮಾಡಿ ಮೇಲ್ಪಂತಿಗೆ ಹೋದರೆ ಅವರ ತಂದೆ ತಾಯಿಗಳು ಸಂತೋಷ ಪಡುವಂತೆ ನಿಷ್ಕಳಂಕ ಮನಸ್ಸಿನಿಂದ ಸಂತೋಷಪಟ್ಟು ಆಶೀರ್ವದಿಸುವ ಗುಣವುಳ್ಳವರು ಈ ಶಿಕ್ಷಕರು.

    ಇಂದು ಪಪಂಚದಲ್ಲಿಯೇ ಗುರುವನ್ನ ಮಾತ್ರ ಗುರುಬ್ರಹ್ಮ,ಗುರುವಿಷ್ಠು ಗುರುದೇವೋಭವ ಎನ್ನುತ್ತಾರೆಯೇ ಹೊರೆತೂ ಬೇರೆ ವೃತ್ತಿಯಲ್ಲಿರುವವರನ್ನ ಹೇಳುವುದಿಲ್ಲ ಆದ್ದರಿಂದ ಶಿಕ್ಷಕ ವೃತ್ತಿ ಪವಿತ್ರವಾಗಿತ್ತು ಅದಕ್ಕೆ ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಕೃಷ್ಣ ಅವರು ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದು ಆತ್ಮ ವಿಶ್ವಾಸದಿಂದ ಇದ್ದಂತಹ ಮಹಾನ್ ವ್ಯಕ್ತಿಯಾಗಿದ್ದರು. ಅವರ ಜನ್ಮ ದಿನವನ್ನ ಶಿಕ್ಷಕರ ದಿನಾಚಾರಣೆಯನ್ನಾಗಿ ಮಾಡಿ ಎಂದು ಹೇಳಿದರು. ಅಂದಿನಿಂದ ಶಿಕ್ಷಕರ ದಿನಾಚಾರಣೆ ನಡೆದು ಬರುತ್ತಿದ್ದೆ. ಇಂದು ಬರೀ ಪುಸ್ತಕದ ಪಾಠ ಪ್ರವಚನವನ್ನು ಮಾಡು ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕøತಿಯನ್ನ ಕಲಿಸಿಕೊಡಿ. ಬರೀ ಶಿಕ್ಷಣ ಕಲಿತರೆ ಮುಂದೆ ದರಹಂಕಾರಿಯಾಗುತ್ತಾನೆ. ಆದರೆ ವಿದ್ಯೆಯ ಜೊತೆಗೆ ಸಂಸ್ಕಾರ ಇದ್ದರೆ ಉತ್ತಮ ಪ್ರಜೆಯಾಗುತ್ತಾನೆ ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

      ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ ತಮ್ಮ ಹಿಂದಿನ ವೃತ್ತಿ ಶಿಕ್ಷಕ ವೃತ್ತಿ ನಾನು ಕಳೆದ ಎರಡು ವರ್ಷಗಳಿಂದೆ ಶಿಕ್ಷಕನಾಗಿದ್ದಾಗ ಉನ್ನತ ಹುದ್ದೆಗಳನ್ನ ನೆನೆಯುತ್ತಲೇ ತಹಸೀಲ್ದಾರ್ ಆದೆ ಆದರೆ ಇಂದು ನನಗೆ ಶಿಕ್ಷಕ ವೃತ್ತಿಯೇ ಉತ್ತಮ ಪವಿತ್ರವಾದ ವೃತ್ತಿ ಎನ್ನಿಸುತ್ತಿದೆ ತಹಸೀಲ್ದಾರ್ ಆಗಿದ್ದುರೂ ನೆಮ್ಮದಿ ಇಲ್ಲ ಎಷ್ಟೇ ಕೆಲಸ ಮಾಡಿದರೂ ಮುಗಿಯದ ಕೆಲಸ ಅದು ಅದಕ್ಕೆ ಎಷ್ಟೋ ಬಾರಿ ಮರಳಿ ಶಿಕ್ಷಕ ವೃತ್ತಿಗೆ ವಾಪಸ್ ಹೋಗಿಬಿಡೋಣ ಎಂಬ ಚಿಂತೆಯೂ ಕಾಡಿದ್ದುಂಟು ಎಂದು ತಮ್ಮ ಅಭಿಪ್ರಾಯಗಳನ್ನ ಶಿಕ್ಷಕರ ಮುಂದೆ ಹೇಳುತ್ತಲೇ ಶಿಕ್ಷಕ ವೃತ್ತಿಯನ್ನ ಪ್ರಶಂಶಿಸಿದ ಅವರು ಇಂದಿಗೂ ಶಾಲೆಗಳಿಗೆ ಹೋದಾಗ ಮಕ್ಕಳಿಗೆ ಪಾಠ ಮಾಡುತ್ತಿದ್ದೇನೆ ಎಂದರು. ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ