ಕೊರಟಗೆರೆ :
ಆಯುಧಪೂಜೆ ಹಬ್ಬದ ದಿನ ಬೈಕಿಗೆ ಪೂಜೆ ಮಾಡಿದ ನಂತರ ತಂದೆ ಬೈಕ್‍ನ ಕೀ ಕೊಡಲಿಲ್ಲ ಎಂದು ಬೇಸರಗೊಂಡು ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಚೀಲನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಜಗಿದ್ದು, ಗ್ರಾಮದ ಹರೀಶ್‍ಕುಮಾರ್ ಅವರ ಮಗ ನಿತೀಶ್‍ಕುಮಾರ್ (20) ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಈತನನ್ನು ಉಳಿಸಿಕೊಳ್ಳಲು ಯತ್ನಿಸಿದ ಆತನ ಸ್ನೇಹಿತ ದರ್ಶನ್‍ಗೆ ತೀವ್ರತರ ಸುಟ್ಟ ಗಾಯಗಳಾಗಿವೆ.
ಯುವಕ ನಿತೀಶ್‍ಕುಮಾರ್ ಆಯುಧ ಪೂಜೆಯ ನಂತರ ಬೈಕ್ ಓಡಿಸಲು ಬೈಕ್‍ನ ಕೀಯನ್ನು ತನ್ನ ತಂದೆ ಹರೀಶ್ ಅವರ ಬಳಿ ಕೇಳಲಾಗಿ ಆಗ ತಂದೆ ಇಂದು ಪೂಜೆ ಆಗಿರುವ ಕಾರಣ ಇಂದು ಬೇಡ ನಾಳೆ ಬೈಕ್ ಕೊಡುತ್ತೇನೆ ಎಂದಿದ್ದಕ್ಕೆ ಬೇಸರಗೊಂಡು ಮನೆಯ ಸ್ನಾನದ ಮನೆ ಒಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನನ್ನು ಉಳಿಸಿಕೊಳ್ಳಲುತನ ಸ್ನೇಹಿತ ಪರದಾಡಿ ಆತನಿಗೂ ಶೆ.25 ರಷ್ಟು ಗಾಯಗಳಾಗಿದ್ದು ನಿತೀಶ್‍ಗೆ ಶೇ.60 ರಷ್ಟು ಸುಟ್ಟ ಗಾಯಗಳಾಗಿವೆ.
ಗಾಯಾಳುವಿಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
