ರಾಯಚೂರು:
ನಗರದಲ್ಲಿ ನೂತನ ಶಾಪಿಂಗ್ ಮಾಲೊಂದರ ಉದ್ಘಾಟನೆಗೆ ಬಂದ ನಟಿ ಆಶಿಕಾ ರಂಗನಾಥ್‌ರನ್ನು ನೋಡಲು ಜನ ಮುಗಿಬಿದ್ದ ಹಿನ್ನೆಲೆ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಅಂಬುಲೆನ್ಸ್ ಸಿಕ್ಕಿಬಿದ್ದಿದ್ದರಿಂದ ರೋಗಿ ಪರದಾಡಬೇಕಾಯಿತು.
ನಗರದ ರಾಯಚೂರು-ಲಿಂಗಸುಗೂರು ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಶಾಪಿಂಗ್ ಮಾಲ್‌ನ ಮಾಲೀಕರು ಶಾಪಿಂಗ್ ಮಾಲ್ ಹೊರಗಡೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸಿನಿಮಾ ನಟಿಯನ್ನ ನೋಡಲು ಜನ ಮುಗಿಬಿದ್ದು, ಟ್ರಾಫಿಕ್ ಜಾಮ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಲಾಠಿ ಬಿಸಿ ತೋರಿಸಿ ಜನರನ್ನು ಚದುರಿಸಿ ಅಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.
ಶಾಪಿಂಗ್ ಮಾಲ್ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದ ಜನರನ್ನ ರಂಜಿಸಿದರು. ಈ ವೇಳೆ ಕಿಕ್ಕಿರಿದು ಜನ ಸೇರಿದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯೂ ಕಿರಿದಾಗಿರುವುದರಿಂದ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.