2 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ‘ಅಶ್ವತ್ಥಾಮ’ ಇನ್ನಿಲ್ಲ

ಮೈಸೂರು:

    ಎರಡು ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ‘ಅಶ್ವತ್ಥಾಮ’ ಆನೆ ವಿದ್ಯುತ್‌ ಸ್ವರ್ಶದಿಂದ ಸಾವನ್ನಪ್ಪಿರುವ ಘಟನೆ ಇಂದು ಜಿಲ್ಲೆಯ ಭೀಮಕಟ್ಟೆ ಆನೆ ಶಿಬಿರದ ಬಳಿ ನಡೆದಿದೆ.

    ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಭೀಮಕಟ್ಟೆ ಆನೆ ಶಿಬಿರದಲ್ಲಿದ್ದ 38 ವರ್ಷದ ಅಶ್ವತ್ಥಾಮನನ್ನು ಅರಣ್ಯ ಪ್ರದೇಶಕ್ಕೆ ಮೇಯಲು ಬಿಟ್ಟಿದ್ದಾಗ ವಿದ್ಯುತ್ ತಂತಿ ತಗುಲಿ ಅದರ ಶಾಕ್ನಿಂದ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು.

4 ವರ್ಷಗಳ ಕಾಲ ಪಳಗಿಸಿದ ಬಳಿಕ 2021 ಹಾಗೂ 2022ರಲ್ಲಿ ಮೈಸೂರು ದಸರಾದ ಗಜ ಪಯಣದಲ್ಲಿ ಹೆಜ್ಜೆ ಹಾಕಿತ್ತು. ಶಾಂತ ಹಾಗೂ ಗಾಂಭೀರ್ಯಕ್ಕೆ ಅಶ್ವತ್ಥಾಮ ಹೆಸರುವಾಸಿಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ

Recent Articles

spot_img

Related Stories

Share via
Copy link
Powered by Social Snap