ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು

ನಮ್ಮ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ರಾಜ್ಯದ ಜನರ ಸೇವೆ ಮಾಡಲು ನನಗೆ ಅವರು ದೊಡ್ಡ ಶಕ್ತಿ ತುಂಬಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಾವು ಏನೆಲ್ಲ ಕೆಲಸ ಮಾಡಿದ್ದೇವೋ ಅದು ಕೇವಲ ಡಿ.ಕೆ. ಶಿವಕುಮಾರ್ ನಿಂದ ಮಾತ್ರ ಸಾಧ್ಯವಾಗಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ಶ್ರಮಿಸಿದ ಕಾರಣಕ್ಕೆ ನಾವು ಪ್ರಗತಿಯತ್ತ ಹೆಜ್ಜೆ ಇಟ್ಟಿದ್ದೇವೆ. ಇಂದು ಇಲ್ಲಿ ನಾನೊಬ್ಬ ಮಾತ್ರ ಕೂತಿಲ್ಲ, ಮನೆ, ಮನೆಗೆ ಹೋಗಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ 60 ಲಕ್ಷ ಸದಸ್ಯರ ನೋಂದಣಿ ಮಾಡಿರುವ ಸುಮಾರು 70 ಸಾವಿರ ಕಾರ್ಯಕರ್ತರು ಕೂಡ ಜೂಮ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಶ್ರೀ ಗಳ ಚರಿತ್ರೆ ಯನ್ನು ಪಠ್ಯ ದಲ್ಲಿ ಅಳವಡಿಸಬೇಕೆಂದು ಸಿಎಂ ರಲ್ಲಿ ಮನವಿ ಮಾಡಿದ ಮಾಜಿ ಸಿಎಂ ಬಿಎಸ್ ವೈ

ಇದೊಂದು ಸುದಿನ. ರಾಜ್ಯದಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯ ರಾಜಕೀಯಕ್ಕೆ ಒಂದು ಸರಿಯಾದ ಸಂದೇಶ ರವಾನಿಸಿದ್ದಾರೆ.

ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಕೂಡ ಮಠ ಮಾನ್ಯಗಳಿಗೆ ಈ ಹಿಂದೆಯೂ ಗೌರವ ಸಮರ್ಪಿಸಿದ್ದಾರೆ.

ಬಹಳ ಕಷ್ಟ ಕಾಲದಲ್ಲಿ ನನಗೆ ಪಕ್ಷದ ಜವಾಬ್ದಾರಿ ಕೊಡಲಾಯಿತು. ಇದೊಂದು ಅವಕಾಶ. ನಾನು ಅಧಿಕಾರ ವಹಿಸಿಕೊಳ್ಳುವ ಸಮಾರಂಭವನ್ನು ತಡೆಯಲು ಸಾಕಷ್ಟು ಪ್ರಯತ್ನಪಟ್ಟರು. ಆದರೂ ನನ್ನ ಜತೆ ಪಂಚಾಯ್ತಿ ಮಟ್ಟದಲ್ಲಿ 1.25 ಲಕ್ಷ ಜನ ನನ್ನ ಜತೆ ಸಂವಿಧಾನದ ಹೆಸರಲ್ಲಿ ಪ್ರತಿಜ್ಞೆ ತೆಗೆದುಕೊಂಡರು.

ತುಮಕೂರಿನಲ್ಲಿ ಪರಮೇಶ್ವರ್ – ಸಿಎಂ ಆಪ್ತ ಸಮಾಲೋಚನೆ

ನೀವೆಲ್ಲರೂ ನನಗೆ ತೋರಿದ ಪ್ರೀತಿ ವಿಶ್ವಾಸ, ಕೊಟ್ಟ ಶಕ್ತಿ ಮರೆಯಲು ಸಾಧ್ಯವಿಲ್ಲ. ನಾನು ಎಂದಿಗೂ ವ್ಯಕ್ತಿ ಪೂಜೆ ಮಾಡಿಲ್ಲ. ನಾನು ಪಕ್ಷ ಪೂಜೆಯನ್ನು ಮಾಡಿದ್ದೇನೆ. ಪಕ್ಷ ಇದ್ದರೆ ನಾವು ಎಂದು ನಂಬಿದ್ದೇನೆ.

ಕೋವಿಡ್ ಸಮಯದಲ್ಲಿ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಸರ್ಕಾರ ನಮ್ಮ ಎಲ್ಲ ನಾಯಕರ ಮೇಲೆ ಕೇಸ್ ದಾಖಲಿಸಿದೆ. ನಾವು ಅವರ ಕೇಸು, ಬೆದರಿಕೆಗೆ ಹೆದರದೇ, ರಾಜ್ಯದ ಜನರ ಹಿತ, ರೈತರ ಹಿತ ಹಾಗೂ ಬೆಂಗಳೂರು ನಾಗರೀಕರ ಕುಡಿಯುವ ನೀರಿಗೆ 150 ಕಿ.ಮೀ ಹೆಜ್ಜೆ ಹಾಕಿದ್ದೇವೆ. ಇದಕ್ಕೆ ನೀವೆಲ್ಲರೂ ಬೆಂಬಲ ನೀಡಿದ್ದೀರಿ. ನಿಮಗೆ ನಮಿಸುತ್ತೇನೆ.

ಇದು ಕೇವಲ ನನ್ನ ಹಾಗೂ ಸಿದ್ದರಾಮಯ್ಯನವರ ಹೆಜ್ಜೆ ಮಾತ್ರ ಅಲ್ಲ. ಸರ್ಕಾರ ನಮ್ಮ ಹೋರಾಟ ನಿಯಂತ್ರಿಸಲು ಸಾಕಷ್ಟು ಪ್ರಯತ್ನಪಟ್ಟಿತು. ನಾವು ಅದಕ್ಕೆ ಅವಕಾಶ ಕೊಡದೆ ಹೋರಾಟ ಮಾಡಿದೆವು. ನಮ್ಮ 150 ಕ್ಕೂ ಹೆಚ್ಚು ನಾಯಕರ ಮೇಲೆ ಸರ್ಕಾರ ಪ್ರಕರಣ ದಾಖಲಿಸಿದೆ.

ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ

ಕೋವಿಡ್ ಸಮಯದಲ್ಲಿ ನೀವು ಮಾಡಿದ ಹೋರಾಟ, ಜನಸೇವೆಯನ್ನು ಸರ್ಕಾರದಿಂದಲೂ ಮಾಡಲು ಸಾಧ್ಯವಾಗಲಿಲ್ಲ. ನೀವು ಆಹಾರ ಕಿಟ್ ಹಂಚಿದಿರಿ, ಲಸಿಕೆ ಕೊಟ್ಟಿದ್ದೀರಿ. ಕಾರ್ಮಿಕರ ಉಚಿತ ಪ್ರಯಾಣಕ್ಕೆ ನೆರವಾಗಿದ್ದೀರಿ. ಸರಕಾರ ನಮ್ಮ ಹೋರಾಟಕ್ಕೆ ತಲೆಬಾಗಬೇಕಾಯಿತು. ಕಾರ್ಮಿಕರು ಕೇವಲ ಕಾರ್ಮಿಕರಲ್ಲ, ದೇಶ ಹಾಗೂ ರಾಜ್ಯದ ನಿರ್ಮಾಣಕತೃಗಳು. ನಾವು ಅವರ ಜತೆ ನಿಲ್ಲಲು ಸಾಧ್ಯವಾಗಿದ್ದು ನಿಮ್ಮ ಸಹಕಾರದಿಂದ. ಕೋವಿಡ್ ವಿವಿಧ ಅಲೆಗಳಲ್ಲಿ ನೀವೆಲ್ಲರು ಜನರ ಪರವಾಗಿ ನಿಂತಿರಿ.

ರಾಜ್ಯದಲ್ಲಿ ಹಲವು ಉಪಚುನಾವಣೆಗಳು ಎದುರಾದವು. ನಾವು ಹೋರಾಟ ಮಾಡಿದೆವು. ನಾವು ಸರ್ಕಾರಕ್ಕೆ ಸರಿಸಮಾನಾಗಿ ಗೆಲ್ಲುವಲ್ಲಿ ಯಶಸ್ವಿಯಾದೆವು. ಅವರು ಸ್ಥಳೀಯ ಸಂಸ್ಥೆಗಳಲ್ಲಿ ನಾವೇ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ತೋರಿ ಅವರ ಮಾತನ್ನು ಸುಳ್ಳಾಗಿಸಿದ್ದಾರೆ.

ರಾಜೀವ್ ಗಾಂಧಿ ಅವರು ನಾನು ಪದವಿ ವ್ಯಾಸಂಗ ಮಾಡುವಾಗಲೇ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಯುವಕರ ಮೇಲೆ ಅವರು ಅಪಾರ ನಂಬಿಕೆ ಇಟ್ಟಿದ್ದರು. ಯಾರು ನಾಯಕರನ್ನು ಬೆಳೆಸುತ್ತಾನೋ ಅವನೇ ನಿಜವಾದ ನಾಯಕ ಎಂಬ ತತ್ವವನ್ನು ರಾಜೀವ್ ಗಾಂಧಿ ಅವರಿಂದ ಕಲಿತಿದ್ದೇನೆ. ನಾನು ದೇಶ ಹಾಗೂ ರಾಜ್ಯದ ಹಿತಕ್ಕಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ಮಾತು ಕೊಡುತ್ತೇನೆ. ರಾಜ್ಯದ ಮೂಲಕ ದೇಶದಲ್ಲಿ ಕಾಂಗ್ರೆಸ್ ಮತ್ತೆ ಎದ್ದು ನಿಲ್ಲಬೇಕು ಅದಕ್ಕಾಗಿ ನಾನು ಶ್ರಮಿಸುತ್ತೇನೆ.

ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ

ಎಐಸಿಸಿ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ಅವರು ನಮ್ಮ ಜತೆ ಸಭೆ ಮಾಡುವಾಗ ಈ ದೇಶದಲ್ಲಿ 18-25 ವರ್ಷದೊಳಗಿನ ವಯೋಮಾನದವರು ಶೇ.62ರಷ್ಟಿದ್ದಾರೆ ಎಂದು ಹೇಳಿದರು. ನಾನು ಆ ವಯೋಮಾನದವರಿಗಿಂತ 40 ವರ್ಷ ಮುಂದಿದ್ದೇನೆ, ಖರ್ಗೆ ಅವರು 50 ವರ್ಷ ಗಳಷ್ಟು ಮುಂದಿದ್ದಾರೆ. ಸಿದ್ದರಾಮಯ್ಯ ಅವರು ನನಗಿಂತ 5 ವರ್ಷ ಮುಂದಿದ್ದಾರೆ. ನಮ್ಮ ಬಳಿ ಇರುವ ಈ ತಲೆಮಾರುಗಳ ಅಂತರ ಏನು ಎಂಬುದನ್ನು ಅರಿಯಬೇಕು.

ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ನಾನು ಅಧಿಕಾರ ಸ್ವೀಕಾರ ಸಮಯದಲ್ಲಿ ಒಂದು ಮಾತು ಹೇಳಿದ್ದೆ. ಅದೇನೆಂದರೆ ಒಟ್ಟಾಗಿ ಸೇರುವುದು ಆರಂಭ, ಒಟ್ಟಾಗಿ ಆಲೋಚಿಸುವುದು ಪ್ರಗತಿ, ಒಟ್ಟಾಗಿ ಕೆಲಸ ಮಾಡುವುದು ಯಶಸ್ಸು. ನಾವೆಲ್ಲರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮಾತು ನೀಡುತ್ತೇನೆ.

12 ವರ್ಷಗಳ ಬಳಿಕ ಪಕ್ಷದ ಸದಸ್ಯತ್ವ ನೋಂದಣಿ ಅವಕಾಶ ನೀಡಲಾಗಿದೆ. ಈ ಸದಸ್ಯತ್ವದ ಮಹತ್ವ ಏನು ಎಂಬುದು ನನಗೆ ಗೊತ್ತಿದೆ. ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂತ್ ಇರಬೇಕು, ಎಲ್ಲ ಬೂತ್ ನಲ್ಲಿ ವಾಟ್ಸಪ್ ಗ್ರೂಪ್ ಗಳಿರಬೇಕು. ಇದನ್ನು ನನ್ನ ಕ್ಷೇತ್ರದಲ್ಲಿ ಮಾಡಲಾಗಿದೆ.

ನಾವು ಎಲ್ಲ ವರ್ಗದ ಜತೆ ಸಂಪರ್ಕ ಬೆಳೆಸಬೇಕು, ಸಾಮಾಜಿಕ ನ್ಯಾಯವನ್ನು ನೀಡಬೇಕು. ಈ ದೇಶವನ್ನು ಕಾಂಗ್ರೆಸ್ ಪಕ್ಷದಿಂದ ಮಾತ್ರ ಒಗ್ಗೂಡಿಸಲು ಸಾಧ್ಯ. ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ.

ರಷ್ಯಾದಿಂದ ಇಂಧನ ಖರೀದಿಸುವ ಭಾರತದ ನಿರ್ಧಾರವನ್ನು ಗೌರವಿಸುತ್ತೇವೆ: ಬ್ರಿಟನ್‌

ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಈ ದೇಶವನ್ನು ಕಟ್ಟಿ ಬೆಳೆಸಿದೆ. ಕಳೆದ ಎರಡು ವರ್ಷಗಳಿಂದ ನೀವೆಲ್ಲ ಸಾಕಷ್ಟು ಪರಿಶ್ರಮ ಹಾಕಿದ್ದೀರಿ. ಸಹಕಾರ ಕೊಟ್ಟಿದ್ದೀರಿ. ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಸಮಯದಲ್ಲಿ ನಾವು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಮಾತು ನೀಡಬೇಕು.

ರಾಹುಲ್ ಗಾಂಧಿ ಅವರು ಇಂದು ಹಲವು ನಾಯಕರ ಜತೆ, ವಿವಿಧ ವರ್ಗದವರ ಜತೆ ಸಭೆ ನಡೆಸಲಿದ್ದು, ನಾವು ಮಹಿಳೆಯರಿಗೆ ಶಕ್ತಿ ತುಂಬಬೇಕಿದೆ. ರೈತರ ವಿಚಾರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅವರ ಆದಾಯ ಡಬಲ್ ಮಾಡುತ್ತೇವೆ ಎಂದರು ಆದರೆ ಏನಾಯ್ತು? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದರು? ಆದರೆ ಸಾಧ್ಯವಾಗಲಿಲ್ಲ.

ಯುವ ಕಾಂಗ್ರೆಸ್ ನಾಯಕರು ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆ ಎಂದು ಸಮೀಕ್ಷೆ ಮಾಡಬೇಕು. ಅವರ ಪರವಾಗಿ ಹೋರಾಟ ಮಾಡಬೇಕು. ಮಹಿಳೆಯರಿಗೆ ರಾಜಕೀಯ ಶಕ್ತಿ ತುಂಬಲು ನಾ ನಾಯಕಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಆಡಿಟೋರಿಯಂನ ರಾಜೀವ್ ಭವನದಲ್ಲಿ ರಾಹುಲ್ ಗಾಂಧಿ

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ತಿಂಗಳಲ್ಲಿ 15 ದಿನ ರಾಜ್ಯದಲ್ಲಿ ಮೀಸಲಿಡುವುದಾಗಿ ತಿಳಿಸಿದ್ದಾರೆ. ಅವರು ಪ್ರತಿ ಕ್ಷೇತ್ರವನ್ನು ಪರಿಶೀಲನೆ ಮಾಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂದು ನಾನು ನಿರ್ಧರಿಸುವುದಿಲ್ಲ, ಆ ನಿರ್ಧಾರ ಮಾಡುವುದು ಸ್ಥಳೀಯ ಕಾರ್ಯಕರ್ತರಾಗಿದ್ದಾರೆ. ಕಾರ್ಯಕರ್ತರ ಧ್ವನಿ ಕಾಂಗ್ರೆಸ್ ಅಧ್ಯಕ್ಷರ ಧ್ವನಿ ಆಗಲಿದೆ.

ಬಾಬು ಜಗಜೀವನರಾಮ್ ಹಾಗೂ ಅಂಬೇಡ್ಕರ್ ಅವರ ಕಾರ್ಯಕ್ರಮ ನಂತರ ಚಿಂತನ-ಮಂಥನ ಕಾರ್ಯಕ್ರಮ ಮಾಡಲು ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ತೀರ್ಮಾನಿಸಿದ್ದೇವೆ.

ಕರ್ನಾಟಕದ ಬಿಜೆಪಿ ಸರಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಧಾನಿಗೆ ಪತ್ರ ಬರೆದು ಶೇ.40ರಷ್ಟು ಲಂಚ ನೀಡಬೇಕಾಗಿದೆ ಎಂದು ದೂರು ನೀಡಿದ್ದಾರೆ. ಇದರಿಂದ ಜನ ಬೇಸತ್ತಿದ್ದಾರೆ. 60 ಲಕ್ಷ ಹೊಸ ಸದಸ್ಯರಲ್ಲಿ ಶೇ.15 ರಷ್ಟು ಜನ ಬೇರೆ ಪಕ್ಷದಿಂದ ಬಂದಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷವೇ ಭವಿಷ್ಯ ಎಂದು ನಂಬಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುತ್ತೇವೆ ಎಂದು ಭರವಸೆ ನೀಡುತ್ತಾ ನಾನು ಅವರೆಲ್ಲರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap