ಬೆಂಗಳೂರು
ಸರ್ಕಾರಿ ವೆಬ್‍ಸೈಟ್‍ಗೆ ಸುಳ್ಳು ಐಡಿ ಸೃಷ್ಟಿಸಿಕೊಂಡು ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜ್ಯ ಅಲ್ಪಸಂಖ್ಯಾತ ನಿಗಮದಿಂದ ಕಾಲೇಜು ಶಿಕ್ಷಣಕ್ಕಾಗಿ ಸಿಗುವ ಅನುದಾನ ಮಂಜೂರು ಮಾಡಿಕೊಂಡು ಹಣ ದುರ್ಬಳಕೆ ಮಾಡಿಕೊಂಡ ನಾಲ್ವರು ಆರ್.ಟಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಇಮ್ರಾನ್ ಖಾನ್, ಮೊಹಮ್ಮದ್ ಇಕ್ಬಾಲ್, ಇಫ್ತಿಯಾರ್ ಹಾಗೂ ಸುಲ್ತಾನ್ ಪಾಷ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಮಹಿಂದ್ರಾ ಕೋಟಕ್ ಬ್ಯಾಂಕ್ ಸೀಲು ಹಾಗೂ ಆರು ಮೊಬೈಲ್ ಸೇರಿದಂತೆ ಹಲವು ದಾಖಲಾತಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ
ಆರ್.ಟಿ.ನಗರದ ಸಿಬಿಐ ಬಳಿಯ ಕಚೇರಿಯೊಂದರಲ್ಲಿ ಆರೋಪಿಗಳು ವೆಬ್‍ಸೈಟ್‍ಗೆ ಲಾಗಿನ್ ಆಗಿ, ಸುಳ್ಳು ಐಡಿ ರಚಿಸಿಕೊಂಡಿದ್ದರು. ಇದಕ್ಕಾಗಿ ನಬಿಯಾ ಇಂಜಿನಿಯರಿಂಗ್ ಕಾಲೇಜು ಹೆಸರಿನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಈವರೆಗೂ ಒಂದೂವರ ಕೋಟಿ ರೂ.ವಂಚನೆ ಮಾಡಿದ್ದರು ಎನ್ನಲಾಗಿದೆ.
ಬಂಧಿತ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಮತ್ತೋರ್ವ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
