ಅಥಣಿ ಬಂದ್ ಯಶಸ್ವಿ, ಜಿಲ್ಲೆಯಾಗಿ ಘೋಷಿಸಲು ಹೋರಾಟ

ಅಥಣಿ

      ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಸೋಮವಾರ ಅಥಣಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಕರೆ ಕೊಟ್ಟಿದ್ದ ಅಥಣಿ ಬಂದ್ ಅತ್ಯಂತ ಯಶಸ್ವಿಯಾಯಿತು.

     ಬೆಳಿಗ್ಗೆಯಿಂದ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟುಗಳುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ರ‍್ಯಾಲಿ ಪ್ರಾರಂಭ ಮಾಡಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಬಸವೇಶ್ಬರ ವೃತ್ತದಲ್ಲಿ ಸಮವೇಶಗೊಂಡಿತು.

    ಈ ಸಮಾವೇಶದಲ್ಲಿ ಹತ್ತಕ್ಕು ಅಧಿಕ ಸಂಖ್ಯೆಯ ಮಠಾಧೀಶರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಸಭೆಯನ್ನು ಉದ್ದೇಶಿಸಿ ಗಜಾನನ ಮಂಗಸೂಳಿ, ಷಹಜಹಾನ್ ಡೊಂಗರಗಾವ, ವಿನಾಯಕ ಬಾಗಡಿ, ಎ ಎಮ್ ಖೊಬ್ರಿ, ಅರುಣ ಯಲಗುದ್ರಿ, ಎಸ್ ಎ ಸಂಕ, ಶೇಖರ ನೇಮಗೌಡ ಮಾತನಾಡಿ ಅಥಣಿ ಜಿಲ್ಲೆಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲವಿದೆ ಎಂದರು.
ಅನಂತರ ಮಠಾಧೀಶರಾದ ಮರುಳಸಿದ್ದ ಸ್ವಾಮಿಗಳು, ಶಿವಬಸವ ಸ್ವಾಮಿಗಳು, ಪ್ರಭುಚನ್ನಬಸವ ಸ್ವಾಮಿಗಳು, ಸಿದ್ದಲಿಂಗ ಸ್ವಾಮಿಗಳು, ಅಮರೇಶ್ವರ ಸ್ವಾಮಿಗಳು, ಶಶಿಕಾಂತ ಪಡಸಲಗಿ ಹೋರಾಟಕ್ಕೆ ಬೆಂಬಲ ಸೂಚಿಸಿ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.

    ಅಥಣಿ ಜಿಲ್ಲಾ ಹೋರಾಟ ಸಮಿತಿ ಗೌರವಾಧ್ಯಕ್ಷ ಶಿವಕುಮಾರ ಸವದಿ, ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.ರಮೇಶ ಕಾಗಲೆ, ಅರುಣ ಭಾಸಿಂಗಿ, ಶಶಿಧರ ಬರ್ಲಿ, ರವಿ ಬಡಕಂಬಿ, ಪರಶುರಾಮ ಸೋನಕರ, ಅಪ್ಪು ಪೂಜಾರಿ, ಶಬ್ಬೀರ ಸಾತಬಚ್ಚೆ, ದೇವೇಂದ್ರ ಬಿಸ್ವಾಗರ, ಸಂತೋಷ ಬಡಕಂಬಿ, ದೀಪಕ ಬುರ್ಲಿ, ಮಿಥೇಶ ಪಟ್ಟಣ, ತುಕಾರಾಮ ದೇವಕಾತೆ, ಸಂಜಯ ಬಕಾರಿ, ಸಚಿನ ಬುಟಾಳಿ, ಉದಯ ಸೊಳಸಿ ಇದ್ದರು.

  ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಅಥಣಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಹೋರಾಟಗಾರರು ಹಾಗೂ ಸ್ವಾಮೀಜಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap