ಒಂದೇ ಊರಿನ ಮೂವರು ಯುವತಿಯರ ಆತ್ಮಹತ್ಯೆ ಯತ್ನಕ್ಕೆ ಬಿಗ್ ಟ್ವಿಸ್ಟ್

ರಾಯಚೂರು

    ಒಂದೇ ಊರಿನ ಮೂವರು ಯುವತಿಯರು ರಾಯಚೂರು  ಜಿಲ್ಲೆ ದೇವದುರ್ಗ ತಾಲ್ಲೂಕಿನ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಕೃಷಿ ಕೆಲಸ ಮಾಡಿ ಮನೆ ಸೇರಬೇಕಿದ್ದವರು ಪೋಷಕರ‌ ನೆಮ್ಮದಿಯನ್ನೇ ಕಸಿದುಕೊಂಡಿದ್ದರು. ಈ ಪೈಕಿ 18 ವರ್ಷದ ರೇಣುಕಾ ಮೃತಪಟ್ಟಿದ್ದರೆ, ತಿಮ್ಮಕ್ಕ ಹಾಗೂ ಮತ್ತೊಬ್ಬ ಅಪ್ರಾಪ್ತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ ಎಂಬುದೇ ನಿಗೂಢವಾಗಿತ್ತು. ಸಂಚಲನ ಸೃಷ್ಟಿಸಿದ್ದ, ಪ್ರಕರಣಕ್ಕೆ ಇದೀಗ ಪೊಲೀಸ್ ತನಿಖೆ ವೇಳೆ ದೊಡ್ಡ ತಿರುವು ದೊರೆತಿದೆ.

    ದೇವದುರ್ಗ ಪೊಲೀಸರ ತನಿಖೆ ವೇಳೆ ದುರಂತದ ಹಿಂದಿನ ಲವ್ ಸ್ಟೋರಿ ಬಯಲಾಗಿದೆ. ಈ ಪ್ರೇಮ ಪ್ರಕರಣವೇ ಮೂವರು ಯುವತಿಯರ ಬಾಳಿಗೆ ಎರವಾಗಿದ್ದು, ಮೂವರೂ ಆತ್ಮಹತ್ಯೆಗೆ ಯತ್ನಿಸಲು ಕಾರಣವಾಗಿದೆ. 

   ಆತ್ಮಹತ್ಯೆಗೆ ಯತ್ನಿಸಿದ್ದ ಮೂವರ ಹಿಂದೆ ಒಂದೊಂದು ಲವ್ ಸ್ಟೋರಿ ಇತ್ತು. ಮೃತ ರೇಣುಕಾ, ತಿಮ್ಮಕ್ಕ ಹಾಗೂ ಅಪ್ರಾಪ್ತೆ ಮೂವರೂ ಸಂಬಂಧಿಕರು. ಮೂವರು ಓಬ್ಬೊಬ್ಬ ಯುವಕನ ಜೊತೆ ಪ್ರಣಯದಲ್ಲಿದ್ದರು. ಈ ಮಧ್ಯೆ ರೇಣುಕಾಗೆ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥವಿತ್ತು. ಹೀಗಾಗಿ‌ ರೇಣುಕಾ ಒಳಗೊಳಗೆ ಬೇಸರಗೊಂಡಿದ್ದಳು ಎನ್ನಲಾಗಿದೆ. ಒಂದು ವೇಳೆ, ಈ ಬಗ್ಗೆ ಹಿರಿಯರು ಪ್ರಶ್ನೆ ಮಾಡಿದರೆ ಮೂವರ ಪ್ರೇಮ ಪ್ರಕರಣವೂ ಬಯಲಾಗತ್ತದೆ ಎಂದು ಅವರು ಆತಂಕಗೊಂಡಿದ್ದರು.

 
   ಸದ್ಯ ದೇವದುರ್ಗ ಠಾಣೆಯಲ್ಲಿ ಘಟನೆ ಸಂಬಂಧ ಯುಡಿಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ವಿಷ ಸೇವಿಸಿದ್ದ ತಿಮ್ಮಕ್ಕಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪ್ರಾಪ್ತೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ರೇಣುಕಾಳ ಕುಟುಂಬಸ್ಥರ ಆಕ್ರಂದನ ಕಣ್ಣೀರು ತರಿಸುವಂತಿದೆ.

Recent Articles

spot_img

Related Stories

Share via
Copy link