ಬೆಂಗಳೂರು :
ಎಟಿಎಂಗೆ ತುಂಬಲು ತಂದಿದ್ದ 60 ಲಕ್ಷ ರೂ. ಹಣದ ಸಮೇತ ಪರಾರಿಯಾಗಿರುವ ಘಟನೆ ಸುಬ್ರಮಣ್ಯನಗರದ ಎಟಿಎಂ ನಲ್ಲಿ ನಡೆದಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರದ ಆಕ್ಸಿಸ್ ಬ್ಯಾಂಕ್ ಗೆ ಸೇರಿದ ಎಟಿಎಂಗೆ ಹಣ ತುಂಬಲು ಅಧಿಕಾರಿಗಳು ಮತ್ತು ಗನ್ ಮ್ಯಾನ್ ಒಳಗೆ ಹೋಗಿದ್ದ ವೇಳೆಯಲ್ಲಿ ವಾಹನದಲ್ಲಿದ್ದ ಚಾಲಕ 60 ಲಕ್ಷ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ.
ಆ ಹಣವನ್ನು ಸೆಕ್ಯೂರ್ ವ್ಯಾಲ್ಯೂ ಕಂಪನಿ ಜೀಪಿನಲ್ಲಿ ಕಂಪನಿಗೆ ತಲುಪಿಸಬೇಕಿತ್ತು. ಸುಬ್ರಮಣ್ಯನಗರದಲ್ಲಿ ಮಂಗಳವಾರ ಸಂಜೆ ಮೂರು ಗಂಟೆ ಸುಮಾರಿನಲ್ಲಿ ಎಟಿಎಂ ಗಳಿಂದ ಹಣ ಸಂಗ್ರಹಿಸಿದ್ದ ಯೋಗೀಶ್ ಹಣದ ಸಮೇತ ಪರಾರಿಯಾಗಿದ್ದಾನೆ. ಈತನಿಗಾಗಿ ಸೆಕ್ಯೂರ್ ವ್ಯಾಲ್ಯೂ ಕಂಪನಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ