ಶಿರಸಿ :
ಶಿರಸಿಯ ಎಂ ರಮೇಶ್ ಹಾಗೂ ಡಾ. ವಿಜಯ ನಳಿನಿ ದಂಪತಿಗಳ ಪುತ್ರಿ ಪ್ರಜ್ಞಾ ಮತ್ತಿಹಳ್ಳಿ ಅವರ ಕವನ ಸಂಕಲನ ಬೆಳದಿಂಗಳ ಸೋನೆ ಮಳೆಗೆ ೨೦೨೫ರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ದೊರೆತಿದ್ದು ಅಗಷ್ಟ ೧೬ ರಂದು ಉಡುಪಿಯಲ್ಲಿ ಪ್ರದಾನ ಮಾಡಲಾಗುವುದು.
ಈ ಕವನ ಸಂಕಲನದಲ್ಲಿ ಖ್ಯಾತ ವಿಮರ್ಶಕಿ ತಾರಿಣಿ ಶುಭದಾಯಿನಿ ಮುನ್ನುಡಿ ಬರೆದಿದ್ದಾರೆ. ಹೆಸರಾಂತ ಕತೆಗಾರ ಎಸ್. ದಿವಾಕರ್ ಬೆನ್ನುಡಿ ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖ್ಯಾತ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕ್ಷರ ಪ್ರಕಾಶನ ಹೆಗ್ಗೋಡು ಪ್ರಕಟಣೆ ಮಾಡಿರುವ ಈ ಕವನ ಸಂಕಲನ ಅಂದು ಬಿಡುಗಡೆಯಾಗಲಿದೆ.
ಇದು ಪ್ರಜ್ಞಾ ಅವರ ನಾಲ್ಕನೇ ಕವನ ಸಂಕಲನ ಆಗಿದ್ದು,ಕತೆ- ಪ್ರಬಂಧ -ಪ್ರವಾಸ ಕಥನ ಸೇರಿದಂತೆ ಅವರ ಹನ್ನೆರಡು ಕೃತಿಗಳು ಪ್ರಕಟವಾಗಿವೆ. ಮಾತೋಶ್ರೀ ರತ್ನಮ್ಮ ಹೆಗ್ಗಡೆ, ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.








