ತುಮಕೂರು:
ಡಿ.29 ಶಿವಮೊಗ್ಗದಲ್ಲಿ ರಾಜ್ಯಮಟ್ಟದ ವ್ಶೆಜ್ಞಾನಿಕ ಸಮ್ಮೇಳನ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಸಮಾಜದಲ್ಲಿ ವ್ಶೆಜ್ಞಾನಿಕ ವಿಷಯವಾಗಿ ಸಾಧನೆ ಮಾಡಿರುವ ಸಾಧಕರನ್ನು ಗುರ್ತಿಸಿ ಡಿಸೆಂಬರ್ 29 ರಂದು ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಸನ್ಮಾನಿಸಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಖ್ಯಾತ ವಿಜ್ಞಾನಿ ಇಸ್ರೋದ ಮಾಜಿ ಅಧ್ಯಕ್ಷ ಕಿರಣ್‍ಕುಮಾರ್ ಸೇರಿದಂತೆ ಇತರೆ ಗಣ್ಯರ ಸಮ್ಮುಖದಲ್ಲಿ ಎಚ್.ಎನ್.ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದ್ದು,ಚಿಕ್ಕನಾಯ್ಕನಹಳ್ಳಿ ತಾಲೂಕಿನ ಗೊಡೆಕೆರೆ ಗ್ರಾಮದ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಎಂ ಸಿದ್ದರಾಮಯ್ಯ ಅವರ ವ್ಶೆಜ್ಞಾನಿಕ ಸಾಧನೆ ಗುರ್ತಿಸಿ ಎಚ್.ಎನ್. ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉತ್ತಮ ಸಾಧಕ ಪ್ರಶಸ್ತಿ:
ತಿಪಟೂರಿನ ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್, ಮತ್ತು ತುಮಕೂರಿನ ಬಿ.ಡಿ.ನಂದಿನಿ ಮೋಹನ್‍ಕುಮಾರ್ ಇವರನ್ನು ಉತ್ತಮಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತುಮಕೂರು ಜಿಲ್ಲೆಯ ವ್ಶೆಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ.ಸಿ.ಎಸ್.ಮೋಹನ್‍ಕುಮಾರ್ ತಿಳಿಸಿದರು.
ಸನ್ಮಾನಿತರ ಸಾಧನೆ:
ಜಿ.ಎಂ ಸಿದ್ದರಾಮಯ್ಯ ಅವರು ಶಿಕ್ಷ್ಷಣ ಇಲಾಖೆಯ ಉನ್ನತ ಅಧಿಕಾರಿಯಾಗಿ ಉತ್ತಮ ಸೇವೆ ಮತ್ತು ಮಕ್ಕಳಲ್ಲಿ ಹಾಗೂ ಶಿಕ್ಷಕ ಸಮುದಾಯದಲ್ಲಿ ವೈಜ್ಞಾನಿಕ ಚಿಂತನೆಗಳು ಸೇರಿದಂತೆ ಆರೋಗ್ಯ, ಪರಿಸರದ ಅರಿವು ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಇನ್ನು ಬಿ.ಡಿ.ನಂದಿನಿ ಅವರು ಸಮಾಜಮುಖಿಯಾಗಿ ಸಾಕಷ್ಟು ಕೊಡುಗೆ ನೀಡಿದರೆ ಆರೋಗ್ಯ ಸೇವೆಯ ಮೂಲಕ ಮನೆ ಮಾತಾಗಿರುವ ಶ್ರ್ರೀಧರ್ ಅವರ ವೈದ್ಯಕೀಯ ಸೇವೆ ಅಮೋಘವಾದದ್ದು.
ಟೋಲ್‍ನಲ್ಲಿ ಭವ್ಯ ಸ್ವಾಗತ:
ಡಿ.28 ರ ಮಂಗಳವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವ್ಶೆಜ್ಞಾನಿಕ ಸಮ್ಮೇಳನಕ್ಕೆ ರಸ್ತೆ ಮೂಲಕ ತೆರಳುತ್ತಿರುವ ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಸಮ್ಮೇಳನಾಧ್ಯಕ್ಷ ಕಿರಣ್‍ಕುಮಾರ್ ಅವರನ್ನು ತುಮಕೂರು ಜಿಲ್ಲಾ ಪರಿಷತ್ ವತಿಯಿಂದ ಕ್ಯಾತ್ಸಂದ್ರ ಟೋಲ್‍ನಿಂದ ಹೂಮಾಲೆ ಮೂಲಕ ಬರಮಾಡಿಕೊಂಡು ಪಟ್ಟಣದ ಟೌನ್‍ಹಾಲ್ ನಲ್ಲಿ ಸನ್ಮಾನ ನೀಡಿ ಗೌರವಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ