ಪಾಕಿಸ್ತಾನದ ಖ್ಯಾತ ಹಿರಿಯ ನಟಿ ಅಯೇಷಾ ಖಾನ್ ನಿಗೂಢ ಸಾವು

ಇಸ್ಲಮಾಬಾದ್‌: 

   ಬಾಲಿವುಡ್‌ನಲ್ಲೂ ನಟಿಸಿ ಖ್ಯಾತಿ ಗಳಿಸಿದ್ದ ಪಾಕಿಸ್ತಾನದ ಪ್ರಸಿದ್ಧ ನಟಿ ಆಯೇಷಾ ಖಾನ್ ನಿಗೂಢವಾಗಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ರಂದು ಕರಾಚಿಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರ ಮೃತದೇಹವು ಅವರ ಮರಣದ ಒಂದು ವಾರದ ನಂತರ ಪತ್ತೆಯಾಗಿದೆ. ಇನ್ನು ಅವರ ಸಾವಿಗೆ ಕಾರಣ ಏನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆರೆಹೊರೆಯವರು ಮತ್ತು ಸಂಬಂಧಿಕರಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

   ಕಳೆದ ಹಲವು ವರ್ಷಗಳಿಂದ ಒಂಟಿಯಾಗಿಯೇ ಬದುಕುತ್ತಿರುವ ಆಯೇಷಾ ಅವರು, ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರು. ಅವರ ಸಾವಿನ ಕಾರಣವನ್ನು ತನಿಖೆ ಮಾಡಲು ಅವರ ದೇಹವನ್ನು ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

   ಪ್ರಾಥಮಿಕ ವರದಿ ಪ್ರಕಾರ ಆಯೇಷಾ ಕೆಲವು ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಅವರ ದೇಹ ನಿಧಾನವಾಗಿ ಕೊಳೆಯುತ್ತಾ ಬಂದಿದೆ. ಅಕ್ಕ-ಪಕ್ಕದವರಿಗೆ ಗಬ್ಬು ವಾಸನೆ ಬಂದಿತ್ತು. ಹೀಗಾಗಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಾಗಿಲು ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಆಯೇಷಾ ಮೃತದೇಹ ಸಿಕ್ಕಿದೆ.

   ಆಯೇಷಾ ಖಾನ್ 22 ನವೆಂಬರ್ 1948 ರಂದು ರೋಸಿ ಝಾಲಾದಲ್ಲಿ ಜನಿಸಿದರು. ‘ಆಖ್ರಿ ಛತ್ತನ್’, ‘ಟಿಪ್ಪು ಸುಲ್ತಾನ್: ದಿ ಟೈಗರ್ ಲಾರ್ಡ್’, ‘ದಹ್ಲೀಜ್’, ‘ಬೋಲ್ ಮೇರಿ ಮಚ್ಲಿ’ ಮತ್ತು ‘ಏಕ್ ಔರ್ ಆಸ್ಮಾನ್’ ಅಥವಾ ಮಲಿಕ್ ಚಿತ್ರಗಳಲ್ಲಿ ಅವರ ನಟನೆಯನ್ನು ಹೆಚ್ಚು ಮೆಚ್ಚುಗೆ ಗಳಿಸಿತ್ತು. ನಂತರ ‘ಮುಸ್ಕಾನ್’, ‘ಫಾತಿಮಾ’ ಮತ್ತು ಭಾರತೀಯ ಚಲನಚಿತ್ರ ‘ರಾಜು ಬನ್ ಗಯಾ ಜಂಟಲ್‌ಮನ್’ ಚಿತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದರು. ಅವರು ಪಾಕಿಸ್ತಾನಿ ಟಿವಿ ಉದ್ಯಮದಲ್ಲಿ ದೊಡ್ಡ ಹೆಸರಾಗಿದ್ದ ದಿವಂಗತ ನಟಿ ಖಲೀದಾ ರಿಯಾಸತ್ ಅವರ ಅಕ್ಕ.

Recent Articles

spot_img

Related Stories

Share via
Copy link