ವಿಶ್ವಸಂಸ್ಥೆ:
ವಿಶ್ವಸಂಸ್ಥೆಯ ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರ ಚುನಾವಣೆ ಜೂನ್ 17 ರಂದು ನಡೆಯಲಿದೆ.
ಜೂನ್ ತಿಂಗಳಿನ 15 ರಾಷ್ಟ್ರಗಳ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಫ್ರಾನ್ಸ್ ವಹಿಸಿದ ನಂತರ ಈ ಪ್ರಕಟಣೆ ಸೋಮವಾರ ಹೊರಬಂದಿದೆ. ಈ ತಿಂಗಳ ಭದ್ರತಾ ಮಂಡಳಿಯ ಅನೌಪಚಾರಿಕ ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ, ಜೂನ್ 17 ರಂದು ಭದ್ರತಾ ಮಂಡಳಿಯ ಚುನಾವಣೆಗಳನ್ನು ನಿಗದಿಪಡಿಸಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 55 ಸದಸ್ಯರ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ಸಮೂಹ ಭಾರತದ ಉಮೇದುವಾರಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು.ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಜಾರಿಯಲ್ಲಿರುವ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಂಡು ಹೊಸ ಮತದಾನ ವ್ಯವಸ್ಥೆಗಳ ಅಡಿಯಲ್ಲಿ ಭದ್ರತಾ ಮಂಡಳಿ ಚುನಾವಣೆಗಳನ್ನು ನಡೆಸುವ ನಿರ್ಧಾರವನ್ನು ಸಾಮಾನ್ಯ ಸಭೆ ಕಳೆದ ವಾರ ಅಂಗೀಕರಿಸಿತು.
ಭಾರತದ ದೃಷ್ಟಿಕೋನದಿಂದ, ಮತದಾನವನ್ನು ಹೇಗೆ ನಡೆಸಲಾಗುತ್ತದೆ ಎಂಬುದರಲ್ಲಿ ಯಾವುದೇ ಬದಲಾವಣೆಯು ಹೆಚ್ಚು ಪರಿಣಾಮ ಬೀರುವುದಿಲ್ಲ ಏಕೆಂದರೆ ಅದು ಏಷ್ಯಾ ಪೆಸಿಫಿಕ್ ವ್ಯಾಪ್ತಿಯಲ್ಲಿನ ಏಕೈಕ ಅಭ್ಯರ್ಥಿ ರಾಷ್ಟ್ರವಾಗಿರಲಿದೆ. ಅದರ ಅವಧಿ 2021ರಿಂದ ಪ್ರಾರಂಭಗೊಳ್ಲಲಿದೆ.
ಯುಎನ್‌ಎಸ್‌ಸಿ ಚುನಾವಣೆಗಳು ಸಾಮಾನ್ಯ ಸಭೆಯ ಸಭಾಂಗಣದಲ್ಲಿ ನಡೆಯಲಿದ್ದು, 193 ಸದಸ್ಯ ರಾಷ್ಟ್ರಗಳಲ್ಲಿ ಪ್ರತಿಯೊಂದೂ ರಹಸ್ಯ ಮತಪತ್ರದಲ್ಲಿ ಮತ ಚಲಾಯಿಸುತ್ತದೆ. ಆದಾಗ್ಯೂ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವಸಂಸ್ಥೆಯ ಧಾನ ಕಚೇರಿಯಲ್ಲಿ ಪ್ರಧಾನ ವ್ಯಕ್ತಿಗಳ ಸಭೆಗಳು ಜೂನ್ ಅಂತ್ಯದವರೆಗೆ ಮುಂದೂಡಲ್ಪಟ್ಟವು.
ಇನ್ನು ಪಶ್ಚಿಮ ಯುರೋಪ್ ಮತ್ತು ಇತರ ದೇಶಗಳ ವಿಭಾಗದಲ್ಲಿ ಕೆನಡಾ, ಐರ್ಲೆಂಡ್ ಮತ್ತು ನಾರ್ವೆ ಎರಡು ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ, ಒಂದು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಸ್ಥಾನಗಳಿಗೆ ಮೆಕ್ಸಿಕೊ ಏಕೈಕ ಅಭ್ಯರ್ಥಿಯಾಗಿದೆ ಮತ್ತು ಕೀನ್ಯಾ ಮತ್ತು ಜಿಬೌಟಿ ಆಫ್ರಿಕನ್ ಗುಂಪಿಗೆ ಲಭ್ಯವಿರುವ ಸ್ಥಾನಕ್ಕೆ ಸ್ಪರ್ಧಿಸಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ