ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌ ನೀಡಿದ ಬಿಬಿಎಂಪಿ…..!

ಬೆಂಗಳೂರು:

    ಖಾತಾ ಇಲ್ಲದ ಆಸ್ತಿ ಮಾಲೀಕರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ ಹೊಸ ಖಾತಾ ಪಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿದೆ. 

   ಕೈಬರಹದ ಖಾತಾ ಸೇರಿದಂತೆ ಯಾವುದೇ ಖಾತಾ ಹೊಂದಿಲ್ಲದ ಸಾರ್ವಜನಿಕರು ಆನ್‌ಲೈನ್‌ ಅಭಿಯಾನದಲ್ಲಿ ಪಾಲ್ಗೊಂಡು ಪಾಲಿಕೆಯ ಖಾತಾ ಪಡೆಯಬಹುದು. ಅಧಿಕೃತ ಅರ್ಜಿ ಸಲ್ಲಿಸಿ, ಹೊಸ ಪಾಲಿಕೆ ಖಾತಾ ರಚಿಸಿಕೊಳ್ಳಬಹುದು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಈಗಾಗಲೇ ಖಾತಾ ಹೊಂದಿದ್ದು, ಇ – ಖಾತಾ ಪಡೆಯಲು ಇಚ್ಛಿಸಿರುವವರು ಹೊಸ ಖಾತಾ ಪಡೆಯಲು ಪ್ರಯತ್ನಿಸಬಾರದು. ನಕಲಿ ಖಾತಾ ಪಡೆಯಲು ಪ್ರಯತ್ನಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

    ಖಾತಾ ಹೊಂದಿಲ್ಲದವರು https://BBMP.karnataka.gov.in/NewKhata ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಹೊಸ ಬಿಬಿಎಂಪಿ ಖಾತೆಯನ್ನು ರಚಿಸಬಹುದು ಎಂದು ತಿಳಿಸಿದ್ದಾರೆ.

   ಹೊಸ ಖಾತಾ ಪಡೆಯಲು ಆನ್‌ಲೈನ್‌ನಲ್ಲಿ–ಆಧಾರ್ ಸಂಖ್ಯೆ, ಮಾರಾಟ/ನೋಂದಣಿ ಪತ್ರ ಸಂಖ್ಯೆ, ಆಸ್ತಿ ಫೋಟೋ ಮತ್ತು ಮಾರಾಟ / ನೋಂದಣಿಗೆ ಕನಿಷ್ಠ ಒಂದು ದಿನ ಮೊದಲಿನ ಹಾಗೂ 2024 ರ ಅಕ್ಟೋಬರ್ 31 ಅಥವಾ ನಂತರದವರೆಗೆ ಆಸ್ತಿಯ ಋುಣಭಾರ ಪ್ರಮಾಣಪತ್ರ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

Recent Articles

spot_img

Related Stories

Share via
Copy link