ಬೆಂಗಳೂರು:
ಹದಿನೇಳು ವರ್ಷ ವಯಸ್ಸಿನ ಆದಿತ್ಯ ಸಿಂಗ್ ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈತ ತನ್ನ ನವೀನ ಬ್ರಿಡ್ಜಿಂಗ್ ದಿ ಗ್ಯಾಪ್ (ಬಿಟಿಜಿ) ಉಪಕ್ರಮದ ಮೂಲಕ ಸಂಚಲನದ ಅಲೆಗಳನ್ನು ಸೃಷ್ಟಿಸುತ್ತಿದ್ದಾನೆ. ಆಹಾರ ಪದಾರ್ಥಗಳ ಸಾರ್ವತ್ರಿಕ ಭಾಷೆಯ ಮೂಲಕ ಜಾಗತಿಕ ಯುವ ಸಮುದಾಯದಲ್ಲಿ ಅಂತರಸಾAಸ್ಕೃತಿಕ ತಿಳುವಳಿಕೆ ಪ್ರೋತ್ಸಾಹಿಸುವ ಅವರ ಭಾವೋತ್ಸಾಹವು ಪ್ರಶಂಸೆ ಗಳಿಸುವುದು ಮಾತ್ರವಲ್ಲದೇ ಹಲವರ ಗಮನ ಸೆಳೆದಿದೆ.
ಪರಸ್ಪರ ಸಂಪರ್ಕಗಳನ್ನು ಪೋಷಿಸುವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂಭ್ರಮಿಸುವವAತಹ ಬಿಟಿಜಿ ಕುರಿತ ಆದಿತ್ಯ ಅವರ ದೃಷ್ಟಿಕೋನ, ಒಂದೊAದೇ ಪಾಕಶಾಲೆಯ ಅನುಭವದೊಂದಿಗೆ ಹೆಚ್ಚು ಸಹಿಷ್ಣುತೆಯ ವಿಶ್ವವನ್ನು ಸೃಷ್ಟಿಸುತ್ತದೆ. ಆದಿತ್ಯ ಬಹುಸಂಸ್ಕೃತಿಯ ಮನೆಯಲ್ಲಿ ಬೆಳೆದು ಬಂದವರು. ಸಾಂಸ್ಕೃತಿಕ ವಿಭೇದಗಳೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಹಾನುಭೂತಿ ಹೊಂದುವ ವಿಶಿಷ್ಟ ಸಾಮರ್ಥ್ಯವನ್ನು ಈತ ಭಾರತ ಮತ್ತು ಅಮೇರಿಕ(ಯುಎಸ್‌ಎ) ಎರಡೂ ದೇಶಗಳಲ್ಲಿ ಪಡೆದ ಅನುಭವಗಳಿಂದ ಗಳಿಸಿಕೊಂಡಿದ್ದಾನೆ. ಇದೇ ಸಾಮರ್ಥ್ಯವು, ಯುವ ಪೀಳಿಗೆಯಲ್ಲಿ ಅಂತರಸಾAಸ್ಕçತಿಕ ತಿಳುವಳಿಕೆ ಪ್ರೋತ್ಸಾಹಿಸುವ ಅವರ ಉತ್ಸಾಹವನ್ನು ಹೆಚ್ಚಿಸಿದೆ.
ಹೆಚ್ಚು ಉತ್ತಮವಾದ ಜಗತ್ತನ್ನು ಸೃಷ್ಟಿಸುವಲ್ಲಿ ವಿಭಿನ್ನ ಸಂಸ್ಕೃತಿಗಳ ಬಗ್ಗೆ ಸಕಾರಾತ್ಮಕ ಶಿಕ್ಷಣದ ಸಮಗ್ರ ಪಾತ್ರ ಕುರಿತಂತೆ ತನ್ನ ನಂಬಿಕೆಯಿದ ಆದಿತ್ಯ ಪ್ರೇರಿತನಾಗಿದ್ದಾನೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಆದಿತ್ಯ ಬಿಟಿಜಿಯನ್ನು ಸ್ಥಾಪಿಸಿದ್ದಾನೆ.
ಈ ಉಪಕ್ರಮವು ಈಗಾಗಲೇ ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಿಂದ ಪ್ರಭಾವ ಹೊಂದಲು ಇದು ಅವಕಾಶ ಮಾಡಿಕೊಟ್ಟಿದೆಯಲ್ಲದೇ ಅದರ ಬೆಳೆಯುತ್ತಿರುವ ಪ್ರಭಾವವನ್ನು ಪ್ರದರ್ಶಿಸುತ್ತಿದೆ. ಅವನ ಇನ್‌ಸ್ಟಾಗ್ರಾಮ್ ಚಾನೆಲ್ ಎಲ್ಲೆಡೆ ಮಾನ್ಯತೆ ಗಳಿಸುತ್ತಿದೆ. ಈ ಚಾನೆಲ್ ಈಗ 900 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಆದಿತ್ಯ ಮತ್ತು ಬಿಟಿಜಿಯ ಸ್ವಯಂಸೇವಕರು ಪ್ರಪಂಚದ ವಿವಿಧ ಭಾಗಗಳ ಆಹಾರಗಳÀನ್ನು ಎತ್ತಿ ತೋರುವ ರೀಲ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಆದಿತ್ಯ ಸಿಂಗ್ ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಅಂತರರಾಷ್ಟಿçÃಯ ಕ್ಯಾಪ್ಟನ್ ಆಗಿರುತ್ತಾನೆ. ಈ ಅವಕಾಶವನ್ನು ಬಳಸಿಕೊಂಡು ಇತರ ಶಾಲೆಗಳೊಂದಿಗೆ ತನ್ನ ಸಂಪರ್ಕ ಹೆಚ್ಚಿಸಿಕೊಂಡಿದ್ದಾನೆ. ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವ ಬಗ್ಗೆ ಭಾವೋತ್ಸಾಹ ಹೊಂದಿರುವ ಸ್ವಯಂಸೇವಕರ ದೃಢವಾದ ಗುಂಪು ನಿರ್ಮಿಸಲು ಆದಿತ್ಯ ಕೆಲಸ ಮಾಡಿದ್ದಾರೆ.
ಈ ಗುಂಪು ತಮ್ಮ ಸಕಾರಾತ್ಮಕ ಉದ್ದೇಶಕ್ಕಾಗಿ ಒಂದಾಗಿ ಹಣ ಸಂಗ್ರಹಿಸುತ್ತದೆ ಅಲ್ಲದೇ ಮಾರಾಟವನ್ನು ಆಯೋಜಿಸುತ್ತದೆ ಜೊತೆಗೆ ನಿಧಿಸಂಗ್ರಹಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ. ಈತ ಇಂಡಸ್ ಶಾಲೆಯ ವಿದ್ಯಾರ್ಥಿ ಮಂಡಳಿಯ ಭಾಗವಾಗಿರುವುದರಿಂದ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ಉಪಕ್ರಮವನ್ನು ವಿಸ್ತರಿಸಲು ಶಾಲಾ ಮಾರ್ಗವನ್ನು ಬಳಸಲು ಅವರಿಗೆ ಅವಕಾಶ ಲಭಿಸುತ್ತದೆ.
ರಾಮಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಂತಹ ಕಾರ್ಯಕ್ರಮಗಳ ಒಂದು ಉದಾಹರಣೆ ಇಲ್ಲಿದೆ. ಅಲ್ಲಿ ಆಹಾರದಿಂದ ನೃತ್ಯದವರೆಗೆ ಕರ್ನಾಟಕ ಸಂಸ್ಕೃತಿಯ ವಿವಿಧ ಆಯಾಮಗಳನ್ನು ಕುರಿತು ಬಿಟಿಜಿ ಗಮನ ಕೇಂದ್ರೀಕರಿಸಿತು.
ಷೆಫ್ ಹರಿ ಅವರು ಕರ್ನಾಟಕದಲ್ಲಿ ಕೃಷಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಒಬ್ಬರ ಸಂಸ್ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದರ ಪ್ರಾಮುಖ್ಯತೆಯನ್ನು ಆದಿತ್ಯ ಪ್ರಸ್ತುತಪಡಿಸಿದನು. ಅಲ್ಲದೇ ಒಬ್ಬರ ಸಂಸ್ಕೃತಿ ಮತ್ತು ಇತಿಹಾಸವನ್ನು ಗೌರವಿಸುವ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದರ ಪ್ರಾಮುಖ್ಯತೆಯನ್ನು ಪುನರ್ ದೃಢೀಕರಿಸುವ ಯಕ್ಷಗಾನ ಪ್ರದರ್ಶನ ಸಾದರಪಡಿಸಲಾಯಿತು.
ಜೆ. ಡಬ್ಲ್ಯು. ಮಾರಿಯಟ್ ಹೋಟೆಲ್ ಬೆಂಗಳೂರಿನ ಯುರೋಪಿಯನ್ ರೆಸ್ಟೋರೆಂಟ್ ಆಲ್ಬಾದ ಎಕ್ಸಿಕ್ಯುಟಿವ್ ಇಟಾಲಿಯನ್ ಷೆೆಫ್ ಮ್ಯಾಟೊ ಅರ್ವೋನಿಯೊ, ಮತ್ತು ದಿ ಪಾರ್ಕ್ ಹೋಟೆಲ್ಸ್ನಲ್ಲಿ 24 ವರ್ಷಗಳ ಸುದೀರ್ಘ ವೃತ್ತಿ ಕಾಲಾವಧಿ ನಂತರ ವಿಂಡ್‌ಮಿಲ್ಸ್ಗೆ ಸೇರಿದ ಷೆಫ್ ಮಂದಾರ್ ಸುಖ್ತಂಕರ್ ಸೇರಿದಂತೆ ಪ್ರಸಿದ್ಧ ಬಾಣಸಿಗರ ಬೆಂಬಲವನ್ನು ಈ ಉಪಕ್ರಮವು ಗಳಿಸಿದೆ.
ಬಿಟಿಜಿ ವೆಬ್‌ಸೈಟ್ ಬೆಂಗಳೂರಿನ ಪ್ರಮುಖ ಷೆಫ್‌ಗಳೊಂದಿಗೆ ಒಳನೋಟಪೂರ್ವಕ ಸಂಭಾಷಣೆಗಳನ್ನು ಒಳಗೊಂಡಿದೆ, ಇದು ಈ ಪರಿಸರ ವ್ಯವಸ್ಥೆಯನ್ನು ಆದಿತ್ಯ ಹೇಗೆ ಒಂದೆಡೆ ಸೇರಿಸುತ್ತಾನೆ ಎಂಬುದನ್ನು ಎತ್ತಿ ತೋರಿಸುತ್ತದೆ. ಬಹುಸಾಂಸ್ಕೃತಿಕತೆಯನ್ನು ಮತ್ತಷ್ಟು ಹರಡಲು ಅವರು ವಿವಿಧ ಅಂತಾರಾಷ್ಟ್ರೀಯ ದೂತಾವಾಸಗಳನ್ನು ಸಂಪರ್ಕಿಸಿದ್ದನು.
ಸಾಸ್ಕೃತಿಕ ವಿಭೇದವನ್ನು ಕಡಿಮೆ ಮಾಡುವಲ್ಲಿ ತಂತ್ರಜ್ಞಾನದ ಸಕಾರಾತ್ಮಕ ಪರಿಣಾಮ ಮತ್ತು ಯುವ ಪೀಳಿಗೆಯ ಮೇಲೆ ಪ್ರಗತ್ಯಾತ್ಮಕ ಚಿಂತನೆಯ ಮಾರ್ಗಕ್ಕೆ ಆದಿತ್ಯ ಅವರ ಉಪಕ್ರಮ ನಿದರ್ಶನವಾಗಿದೆ. ಒಂದು ಸಮಯದಲ್ಲಿ ಒಂದು ಪಾಕಶಾಲೆಯ ಅನುಭವ ಜೊತೆಗೆ ಅವರು, ಬಿಟಿಜಿ ಮೂಲಕ ಹೆಚ್ಚು ಸಹಿಷ್ಣುತೆಯ ಜಗತ್ತನ್ನು ರಚಿಸುತ್ತಿದ್ದಾರೆ. ಈ ಉಪಕ್ರಮದ ಬೆಳೆಯುತ್ತಿರುವ ಪರಿಣಾಮ ಮತ್ತು ಆದಿತ್ಯ ಅವರ ಸ್ಪೂರ್ತಿದಾಯಕ ದೃಷ್ಟಿಕೋನವು ಯುವ ಪೀಳಿಗೆಯ ನವೀನ ಮತ್ತು ಎಲ್ಲರನ್ನು ಒಂದುಗೂಡಿಸುವ ಮನಸ್ಥಿತಿಯಿಂದ ಪ್ರೇರಿತವಾದ ಸಕಾರಾತ್ಮಕ ಬದಲಾವಣೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಯುವ ವ್ಯಕ್ತಿಯ ಭಾವೋತ್ಸಾಹ ಮತ್ತು ಸಮರ್ಪಣೆಯು ಸಮುದಾಯದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಹೇಗೆ ತರಬಹುದು ಎಂಬುದಕ್ಕೆ ಇದು ಹೃದಯಸ್ಪರ್ಶಿ ಉದಾಹರಣೆಯಾಗಿದೆ.








