ಬೆಂಗಳೂರು ಟೆಕ್ ಸಮ್ಮಿಟ್ 2025: ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ

ಬೆಂಗಳೂರು: 

    ಬೆಂಗಳೂರು ಟೆಕ್ ಸಮಿಟ್ 2025ರಲ್ಲಿ ಎಐ-ಚಾಲಿತ ಗ್ರಾಮೀಣಾಭಿವೃದ್ಧಿ ಮತ್ತು ಬಿಎಫ್ಎಸ್ಐ ನಾವೀನ್ಯತೆ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಎರಡು ಮಹತ್ವದ ಟಿಐಇ-ನೇತೃತ್ವದ ಸಹಯೋಗಗಳನ್ನು ಘೋಷಿ ಸಿದೆ. ಈ ಮೂಲಕ ಕರ್ನಾಟಕ ತನ್ನ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ ಕೊಳ್ಳುತ್ತಿದೆ.

    ಸ್ಟ್ರಾಟೆಜಿಕ್ ಫೆಸಿಲಿಟೇಟರ್ ಪಾತ್ರ ನಿಭಾಯಿಸುತ್ತಿರುವ ಕೆಡಿಇಎಂ ಸಂಸ್ಥೆಯು ಟಿಐಇ ನ್ಯೂಜೆರ್ಸಿ, ಟಿಐಇ ಬೆಂಗಳೂರು ಮತ್ತು ನ್ಯೂಟ್ರಿನೋಸ್ ಅನ್ನು ಒಟ್ಟುಗೂಡಿಸಿದೆ. ಈ ಮೂಲಕ ಜಾಗತಿಕ ಉದ್ಯಮ ಜಾಲಗಳನ್ನು ಎಐ-ನೇಟಿವ್ ಬಿಎಫ್ಎಸ್ಐ ತಂತ್ರಜ್ಞಾನ ಸಂಸ್ಥೆಯೊಂದಿಗೆ ಸಂಯೋಜಿಸಿ ಗ್ರಾಮೀಣ ನಾವೀನ್ಯತೆ, ಹವಾಮಾನ ಸ್ಥಿರತೆ ಮತ್ತು ಮುಂದಿನ ತಲೆಮಾರಿನ ಹಣಕಾಸು ತಂತ್ರಜ್ಞಾನಗಳನ್ನು ಆಧುನಿಕಗೊಳಿಸುವ ಉದ್ದೇಶ ಹೊಂದಿದೆ.

    ಈ ಯೋಜನೆಗಳು ಹೊಸ ಕರ್ನಾಟಕ- ಅಮೆರಿಕಾ ನಾವೀನ್ಯತಾ ಅವಕಾಶಗಳ ಬಾಗಿಲನ್ನು ತೆರೆಯಲಿದ್ದು, ಗ್ರಾಮೀಣ ಮತ್ತು ಹವಾಮಾನ ಆದ್ಯತೆಗಳಿಗೆ ಅನುಗುಣವಾಗಿ ಎಐ-ಚಾಲಿತ ಪರಿಹಾರಗಳ ಸೃಷ್ಟಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ ಮತ್ತು ಬಿಎಫ್ಎಸ್ಐ-ಕೇಂದ್ರಿತ ಉದ್ಯಮ ಸೃಷ್ಟಿಗೆ ಉತ್ತಮ ವೇದಿಕೆ ರೂಪಿಸಲಿವೆ. ರಾಜ್ಯದಾದ್ಯಂತ ಸಮುದಾಯಗಳು, ಉದ್ಯಮಗಳು ಮತ್ತು ಹೊಸ ನಾವೀನ್ಯತಾ ಕ್ಲಸ್ಟರ್‌ ಗಳಿಗೆ ಅತ್ಯುತ್ತಮ ಫಲಿತಾಂಶ ಒದಗಿ ಸುವ ತಂತ್ರಜ್ಞಾನ ಕರೂಪಿಸುವ ಜಾಗತಿಕ ಸಂಪರ್ಕ ಹೊಂದಿರುವ, ಉದ್ಯಮ-ನೇತೃತ್ವದ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಕಟ್ಟುವ ಕರ್ನಾಟಕದ ಗುರಿಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. 

  1. ಗ್ರಾಮೀಣ ಉದ್ಯಮಶೀಲತೆ ಮತ್ತು ಸಾಮಾಜಿಕ ಒಳಿತಿಗಾಗಿ ಎಐ ಬಳಸಲು ಕೆಡಿಇಎಂ ಪಾಲುದಾರಿಕೆಯಲ್ಲಿ ಟಿಐಇ ನ್ಯೂಜರ್ಸಿ – ಟಿಐಇ ಬೆಂಗಳೂರು ಸಿಸ್ಟರ್ ಚಾಪ್ಟರ್ ಒಪ್ಪಂದ

    ಇತ್ತೀಚೆಗೆ ಸ್ಥಾಪಿತವಾದ ನ್ಯೂಜೆರ್ಸಿ-ಕರ್ನಾಟಕ ಸಿಸ್ಟರ್ ಚಾಪ್ಟರ್ ಮತ್ತು ರಾಜ್ಯದ ಪಾಲು ದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಐತಿಹಾಸಿಕ ಸಿಸ್ಟರ್ ಚಾಪ್ಟರ್ ಒಪ್ಪಂದ ಔಪ ಚಾರಿಕವಾಗಿ ನಡೆದಿದೆ. ಈ ಸಹಯೋಗವು ಗಡಿಯಾಚೆಗಿನ ನಾವೀನ್ಯತಾ ಚಾನಲ್‌ ಗಳನ್ನು ಬಲಪಡಿಸುತ್ತದೆ ಮತ್ತು ಈ ಕೆಳಗಿನವುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:

● ಗ್ರಾಮೀಣ ಉದ್ಯಮಶೀಲತೆ

● ಎಐ-ಚಾಲಿತ ಹವಾಮಾನ ಸ್ಥಿರತೆ

● ಸಮುದಾಯ ಮಟ್ಟದ ಡಿಜಿಟಲ್ ಅಭಿವೃದ್ಧಿ

● ● ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮಶೀಲತೆ

● ಸ್ಟಾರ್ಟಪ್‌ಗಳಿಗೆ ದ್ವಿಪಕ್ಷೀಯ ಮಾರುಕಟ್ಟೆ ಪ್ರವೇಶ

    ಎರಡೂ ಪ್ರದೇಶಗಳ ಚಾರ್ಟರ್ ಸದಸ್ಯರೊಂದಿಗೆ 10 ಸದಸ್ಯ ಬಳಗದ ಎಐ ಫಾರ್ ಸೋಷಲ್ ಗುಡ್ ಇನ್ನೋವೇಷನ್ ಕಮಿಟಿ ರಚನೆಯಾಗಿದೆ. ಇದು ಹವಾಮಾನ ಬದಲಾ ವಣೆ, ಸುಸ್ಥಿರ ಕೃಷಿ, ಗ್ರಾಮೀಣ ಜೀವನೋಪಾಯ ಮತ್ತು ಸಮುದಾಯ ಕಲ್ಯಾಣಕ್ಕೆ ವಿಸ್ತರಿಸ ಬಹುದಾದ ಪರಿಹಾರಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ.

    ಈ ಪಾಲುದಾರಿಕೆಯ ಭಾಗವಾಗಿ ಎರಡೂ ಚಾಪ್ಟರ್‌ ಗಳು ಏಟ್ರಿಯಾ ಯೂನಿವರ್ಸಿಟಿ ಯೊಂದಿಗೆ ಕೈಜೋಡಿಸಿ ಭಾರತದಲ್ಲಿ ಜೆಎಎನ್ ಎಐ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಅನ್ನು ಬೆಂಬಲಿಸಲಿವೆ. ಇದು ಎಐ-ಸಹಾಯಕ ಹವಾಮಾನ ಬುದ್ಧಿಮತ್ತೆ, ಜೈವಿಕ ವೈವಿ ಧ್ಯತಾ ಮೇಲ್ವಿಚಾರಣೆ ಮತ್ತು ಗ್ರಾಮೀಣ ಸುಸ್ಥಿರತೆ ಪರಿಹಾರಗಳ ಮೇಲೆ ಕೇಂದ್ರೀಕೃತ ವಾಗಿರುವ ರಾಷ್ಟ್ರೀಯ ನಾವೀನ್ಯತಾ ಕೇಂದ್ರವಾಗಿದೆ.

   

Recent Articles

spot_img

Related Stories

Share via
Copy link