ಹರಾಜಿನ ಬೆನ್ನಲ್ಲೇ ಕೆಕೆಆರ್‌ ತಂಡಕ್ಕೆ ಬಾಂಗ್ಲಾ ಸ್ಟಾರ್‌ ವೇಗಿ ಅಲಭ್ಯ!

ಕೊಲ್ಕತ್ತಾ

    ಮಂಗಳವಾರ ನಡೆದಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೀಸನ್‌-19ರ ಮಿನಿ ಹರಾಜಿನಲ್ಲಿ ಮಾಜಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಬರೋಬ್ಬರಿ 9.2 ಕೋಟಿ ನೀಡಿ ಖರೀದಿಸಿದ್ದ ಬಾಂಗ್ಲಾದೇಶ ವೇಗಿ ಮುಸ್ತಫಿಜುರ್ ರೆಹಮಾನ್ ಐಪಿಎಲ್‌ ಟೂರ್ನಿ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ವರದಿಯ ಪ್ರಕಾರ ಬಾಂಗ್ಲಾದೇಶ ಏಪ್ರಿಲ್‌ 16 ರಿಂದ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಕಿವೀಸ್‌ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಮುಸ್ತಫಿಜುರ್ ಕೂಡ ಆಡುವ ಕಾರಣ ಅವರು ಕೆಲ ಐಪಿಎಲ್‌ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರನ್ನು ₹25.20 ಕೋಟಿ ಶ್ರೀಲಂಕಾದ ವೇಗಿ ಮಥೀಶ ಪತಿರನರನ್ನು 18 ಕೋಟಿ ನೀಡಿ ಕೋಲ್ಕತಾ ಖರೀದಿಸಿದೆ. ಮುಸ್ತಫಿಜುರ್ ಐಪಿಎಲ್‌ ವೃತ್ತಿ ಜೀವನದಲ್ಲಿ 60 ಪಂದ್ಯಗಳನ್ನಾಡಿದ್ದು, ಒಟ್ಟು 65 ವಿಕೆಟ್‌ ಕಬಳಿಸಿದ್ದಾರೆ. ಕೆಕೆಆರ್‌ಗಿಂತಲೂ ಮೊದಲು ಸನ್‌ರೈಸರ್ಸ್‌ ಹೈದರಾಬಾದ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದರು. 

    ಈ ಬಾರಿ ಹರಾಜಿನಲ್ಲೂ ಕೆಲ ಪ್ರಮುಖ ಆಟಗಾರರು ಯಾವುದೇ ತಂಡಕ್ಕೆ ಬಿಕರಿಯಾಗಲಿಲ್ಲ. ಭಾರತದ ತಾರಾ ಕ್ರಿಕೆಟಿಗರಾದ ಮಯಾಂಕ್‌ ಅಗರ್‌ವಾಲ್‌, ಕರ್ಣ್‌ ಶರ್ಮಾ, ತನುಶ್‌ ಕೋಟ್ಯನ್‌, ಕನ್ನಡಿಗ ಅಭಿನವ್‌ ಮನೋಹರ್‌, ನ್ಯೂಜಿಲೆಂಡ್‌ನ ಡೆವೊನ್‌ ಕಾನ್‌ವೇ, ಆಸ್ಟ್ರೇಲಿಯಾದ ಜೇಕ್‌ ಫ್ರೇಸರ್‌, ಸ್ಟೀವ್‌ ಸ್ಮಿತ್‌, ಇಂಗ್ಲೆಂಡ್‌ನ ಜೆಮೀ ಸ್ಮಿತ್‌, ಗಸ್‌ ಆಟ್ಕಿನ್ಸನ್‌ ಸೇರಿ ಪ್ರಮುಖರು ಬಿಕರಿಯಾಗಲಿಲ್ಲ. ಆದರೆ ಯಾವುದಾದರು ಆಟಗಾರರ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರೆ ಆಗ ಅನ್‌ಸೋಲ್ಡ್‌ ಆಟಗಾರರಿಗೆ ಅದೃಷ್ಟ ಒಲಿಯಲಿದೆ. 

   ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ಆಂಗ್‌ಕ್ರಿಶ್ ರಘುವಂಶಿ, ಅನುಕೂಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣ್‌ದೀಪ್ ಸಿಂಗ್, ರಿಂಕು ಸಿಂಗ್, ರೋವ್‌ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮರೂನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾನ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೀಫರ್ಟ್, ಮುಸ್ತಾಫಿಜುರ್ ರೆಹಮಾನ್, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್.

Recent Articles

spot_img

Related Stories

Share via
Copy link