ತುಮಕೂರು :
ನಗರದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ, ನಗದು ದೋಚಿದ್ದ ಹತ್ತು ಮಂದಿ ಆರೋಪಿಗಳನ್ನು ಹೊಸ ಬಡಾವಣೆ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸೆರೆಗೂ ಬಲೆ ಬೀಸಲಾಗಿದೆ. ಇಲ್ಲಿನ ವಾಲ್ಮೀಕಿನಗರದ 6ನೇ ಕ್ರಾಸ್‍ನಲ್ಲಿ ವಾಸವಿರುವ ವಿಶ್ವೇಶ್ವರ ಆರಾಧ್ಯ ಅವರ ಮನೆಗೆ ಅ.20ರಂದು ಮಧ್ಯಾಹ್ನ 3.30ರ ಸಮಯದಲ್ಲಿ ನುಗ್ಗಿದ್ದ 6ಮಂದಿ ಅಪರಿಚಿತರು ಆರಾಧ್ಯ ಹಾಗೂ ಅವರ ಪತ್ನಿ ಪ್ರೇಮಕುಮಾರಿ ಅವರನ್ನು ಮಚ್ಚು ಡ್ರ್ಯಾಗನ್, ಚಾಕುವಿನಿನಿಂದ ಬೆದರಿಸಿ ಒಟ್ಟು 5,87,000 ರೂ. ಮೌಲ್ಯದ ನಾಲ್ಕು ಚಿನ್ನದ ಬಳೆಗಳು 72 ಸಾವಿರ ನಗದು ಹಣ ಎರಡು ಮೊಬೈಲ್ ಫೋನ್ ಅನ್ನು ದರೋಡೆ ಮಾಡಿಕೊಂಡು ಹೋಗಿದ್ದರು ಈ ಸಂಬಂಧ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಪತ್ತೆ ಹಚ್ಚಲು ತಿಲಕ್‍ಪಾಕ ಸಿಪಿಐ ಮುನಿರಾಜು ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ನ.1ರಂದು ತುಮಕೂರಿನ ರೋಹಿತ, ಲೋಕೇಶ್., ಮನೋಜ್‍ಕುಮಾರ್, ಕೆ.ಆರ್.ರಾಘವೇಂದ್ರ. ವೆಂಕಟೇಶ, ಕೆ.ಭರತ್‍ಕುಮಾರ್, ಕೆ.ಎಂ.ಗಂಗಾಧರ್, ಜಿ.ಎಚ್.ಪವನ್,ಟಿ.ಜಿ.ಸಂತೋಷ್ ಹಾಗೂ ಪವನ್ ಕುಮಾರ್ ಎಂಬ ಆರೋಪಿಗಳು ಸೆರೆಸಿಕ್ಕಿದ್ದು, ಕುಖ್ಯಾತ ರೌಡಿ ಅಸಾಮಿ ರೋಹಿತ ಬಿನ್ ರೇಣುಕಾಪ್ರಸಾದ್ ಜತೆ ಸೇರಿ ಡಕಾಯಿತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 2.90 ಲಕ್ಷ ಮೌಲ್ಯದ ಆಟೊರಿಕ್ಷಾ, ಎರಡು ದ್ವಿಚಕ್ರವಾಹನ , ದ್ವಿಚಕ್ರವಾಹನ ಹಾಗೂ 20 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಸೆರೆ ಹಿಡಿಯಲು ಎಎಸ್ಪಿ ಟಿ.ಜೆ.ಉದೇಶ, ಡಿವೈಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ತಿಲಕ್‍ಪಾರ್ಕ್ ಸಿಪಿಐ ಮುನಿರಾಜು, ನಗರ ಸಿಪಿಐ ನವೀನ್ ನೇತೃತ್ವದಲ್ಲಿ ಎಎಸ್‍ಐ ಪರಮೇಶ್, ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ಮುನಾವರ್‍ಪಾಷ, ಹನುಮರಂಗಯ್ಯ, ಲೋಕೇಶ್, ರೇಣುಕಾ ಪ್ರಸನ್ನ, ವಿಠಲ್ ವಾಳಿಖಿಂಡಿ, ನವೀನ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಪಿ.ಸಿ.ರಮೇಶ್, ಜಗದೀಶ್ ರವರ ತಂಡ ಶ್ರಮಿಸಿದ್ದು, ಎಸ್ಪಿ ಡಾ.ಕೆ.ವಂಸಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ