BDA ಮೂಲೆ ನಿವೇಶನಗಳ ಹರಾಜು :ಆದಾಯಗಳಿಸುವ ಭರವಸೆಯೊಂದಿಗೆ ಮರು ಹರಾಜು!

ಬೆಂಗಳೂರು: 

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹದಿನೈದು ದಿನಗಳ ಹಿಂದೆ 76 ಮೂಲೆಯ ನಿವೇಶನಗಳ ನೇರ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಆದರೆ ಬಿಡ್ಡಿಂಗ್ ಮುಕ್ತಾಯದ ಹಂತದಲ್ಲಿರುವಾಗಲೇ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು, ಹೀಗಾಗಿ ಮರು ಹರಾಜು ಪ್ರಕ್ರಿಯೆಗೆ ಮುಂದಾಗಿದೆ.

   ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಕೇಂದ್ರ ಕಚೇರಿಗೆ ದೂರುಗಳ ಸುರಿಮಳೆ ಬಂದ ಕಾರಣ ಮರು ಹರಾಜಿಗೆ ಮುಂದಾಗಿದೆ. ಇದರಿಂದ 100 ಕೋಟಿ ರೂ.ಗೂ ಅಧಿಕ ಗಳಿಸುವ ಭರವಸೆಯನ್ನು ಪ್ರಾಧಿಕಾರ ಹೊಂದಿದೆ. ಇ-ಆಡಳಿತ ಪೋರ್ಟಲ್‌ನಲ್ಲಿ ಮಂಗಳವಾರ ಬೆಳಿಗ್ಗೆ 9 ರಿಂದ ಬುಧವಾರ ಸಂಜೆ 5 ರವರೆಗೆ ಎರಡು ದಿನಗಳ ಅವಧಿಗೆ ಲೈವ್ ಬಿಡ್ ಕೈಗೊಳ್ಳಲಾಗುತ್ತದೆ. ಬನಶಂಕರಿ VI ಹಂತ, RMV 2ನೇ ಹಂತ, HRBR ಲೇಔಟ್ ಮತ್ತು HSR ಲೇಔಟ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಕಾರ್ನರ್ ಸೈಟ್‌ಗಳನ್ನು ಹರಾಜಿಗೆ ಇಡಲಾಗುವುದು.

   ಸೆಪ್ಟೆಂಬರ್ 9 ಮತ್ತು 10 ರಂದು ನಡೆದ ನಮ್ಮ ಮೊದಲ ಹಂತದಲ್ಲಿ ಈ 76 ಸೈಟುಗಳನ್ನು ಹರಾಜಿಗೆ ಇಡಲಾಗಿತ್ತು.ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ದೋಷ ಎದುರಾಯಿತು. ಬಿಡ್ಡಿಂಗ್ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ 4.30 ರ ಹೊತ್ತಿಗೆ ಸೈಟ್ ಕ್ರ್ಯಾಶ್ ಆಗಿತ್ತು. ಇದು ನೇರ ಹರಾಜಿನಲ್ಲಿ ಭಾಗವಹಿಸುವ ಅನೇಕ ಬಿಡ್ಡರ್‌ಗಳನ್ನು ಅಸಮಾಧಾನಗೊಳಿಸಿತು ಮತ್ತು ಅವರು 50 ಕ್ಕೂ ಹೆಚ್ಚು ಇಮೇಲ್ ದೂರುಗಳನ್ನು ಬಿಡಿಎಗೆ ಕಳುಹಿಸಿದ್ದಾರೆ. “ನಾವು ಮರು-ಬಿಡ್‌ಗೆ ಹೋಗಲು ನಿರ್ಧರಿಸಿದ್ದೇವೆ ಆದರೆ ಅನುಮತಿಯ ಅಗತ್ಯವಿರುವುದರಿಂದ ಅದನ್ನು ತಕ್ಷಣವೇ ಮಾಡಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 17 ಮತ್ತು 18ರಂದು ಮರು ಹರಾಜು ಮಾಡಲು ಬಿಡಿಎಗೆ ಅನುಮತಿ ನೀಡಲಾಗಿದೆ ಹಿರಿಯ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಿಡಿಎ ಆಯುಕ್ತ ಎನ್.ಜಯರಾಮ್ ಅವರು ಮಂಗಳವಾರ ಸಂಜೆ ಕೇಂದ್ರ ಕಚೇರಿಗೆ ಪ್ರವೇಶಿಸಿದಾಗ ಹಲವಾರು ಜನರು ದೂರು ನೀಡಲು ಬಂದಿದ್ದರು ಎಂದು ಹೇಳಲಾಗಿದೆ. ಬಿಡಿಎ ಕಚೇರಿಯಲ್ಲಿ ದಲ್ಲಾಳಿಗಳು ಕೂಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರು, ಕುಂದುಕೊರತೆಗಳಿರುವ ಜನರಿಗೆ ಮಾತ್ರ ಒಳಗೆ ಇರುವಂತೆ ನೋಡಿಕೊಳ್ಳಲು ಬಿಡಿಎ ಕಾರ್ಯಪಡೆಗೆ ಸೂಚಿಸಿದರು ಎಂದು ಬಿಡಿಎ ಕಾರ್ಯಪಡೆ ಎಸ್ಪಿ ಕೆ.ನಂಜುಂಡೇಗೌಡ ಹೇಳಿದರು.

Recent Articles

spot_img

Related Stories

Share via
Copy link
Powered by Social Snap