ಜಮೀನಿನಲ್ಲಿ ಮನೆ ಕಟ್ಟುವ ಮುನ್ನ ಇದನ್ನು ಓದಿ …..!

ಬೆಂಗಳೂರು

    ತಮ್ಮದೇ ಒಂದು ಸ್ವಂತ ಸೂರನ್ನ ಹೊಂದಬೇಕು, ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತೆ . ಭಾರತದಲ್ಲಿ ಮಧ್ಯಮ ವರ್ಗದ ಜನರೇ ಅತಿ ಹೆಚ್ಚು ಇರುವುದರಿಂದ ಪ್ರತಿ ಮಧ್ಯಮ ವರ್ಗದ ಕುಟುಂಬದ ಕನಸು ಇದೆ ಆಗಿರುತ್ತೆ. ನಿಮ್ಮ ಬಳಿ ಈಗಾಗಲೇ ಸೈಟು ಅಥವಾ ಜಮೀನು ಇದ್ರೆ, ಆ ಜಾಗದಲ್ಲಿ ನೀವು ಮನೆ ಕಟ್ಟಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ.

    ನೀವು ಈಗಾಗಲೇ ಸೈಟ್ ಅಥವಾ ಜಮೀನನ್ನ ಹೊಂದಿದ್ರೆ ನಿಮ್ಮ ಜಾಗದಲ್ಲಿ ಮನೆ ಕಟ್ಟಬೇಕು ಅಂತಿದ್ರೆ ಯಾರ ಅನುಮತಿಯನ್ನು ಪಡೆಯಬೇಕಿರಲಿಲ್ಲ . ಆದರೆ ಈಗ ಸರ್ಕಾರ ಈ ನಿಯಮವನ್ನ ಕೊಂಚ ಬದಲಾಯಿಸಿದೆ. ಒಂದು ವೇಳೆ ನೀವು ಕಮರ್ಷಿಯಲ್ ಸೈಟ್ ನಲ್ಲಿ ಮನೆ ನಿರ್ಮಿಸಲಾಗ್ತಿದ್ರೆ ,ನೀವು ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಒಂದು ವೇಳೆ ಜಮೀನಿನಲ್ಲಿ ಮನೆ ಕಟ್ಟಬೇಕು ಎಂದುಕೊಂಡಿದ್ದರೆ ಸರ್ಕಾರದ ಅನುಮತಿ ಕಡ್ಡಾಯವಾಗುತ್ತೆ.

    ಜಮೀನಿನಲ್ಲಿ ಮನೆ ನಿರ್ಮಿಸಬೇಕು ಎಂಬ ಕನಸು ಕಂಡಿರುವವರು ಎರಡು ಬಗೆಯ ಮಂದಿ ಇರುತ್ತಾರೆ. ಒಂದು ತಮಗೆ ಇರುವ ಜಾಗದಲ್ಲೇ ಹೇಗೋ ಸಣ್ಣಸೂರು ನಿರ್ಮಿಸಿಕೊಳ್ಳೋಣ ಎನ್ನುವರು, ಮತ್ತೊಂದು ಒಂದು ತೋಟದ ಮನೆ ಸ್ವರೂಪದಲ್ಲಿ ಜಮೀನಿನಲ್ಲಿ ಒಂದು ಮನೆ ಇರಲಿ ಅಂತ ಮನೆ ನಿರ್ಮಾಣ ಮಾಡುವುದಕ್ಕೆ ಮುಂದಾಗುವವರು. ಆದರೆ ಇನ್ನು ಮುಂದೆ ನೀವು ನಿಮ್ಮದೇ ಜಮೀನಿನಲ್ಲಿ ಮನೆ ನಿರ್ಮಿಸಬೇಕು ಅಂದ್ರೂ, ಅದಕ್ಕೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು.

    ಫಲವತ್ತಾದ ಕೃಷಿ ಭೂಮಿಗಳನ್ನ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕೃಷಿ ಭೂಮಿಯನ್ನು ಕಮರ್ಷಿಯಲ್ ಮಾಡಿ ಸೈಟ್ಗಳನ್ನಾಗಿ ಮಾಡಿ ಅಥವಾ ಅಲ್ಲಿ ಮನೆ ನಿರ್ಮಾಣ ಮಾಡಿದ್ರೆ, ಮುಂದಕ್ಕೆ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿಬಿಡುತ್ತೆ. ಈ ಕಾರಣಕ್ಕಾಗಿ ಕೃಷಿ ಭೂಮಿಯಲ್ಲಿ ಮನೆ ಕಟ್ಟಬೇಕು ಎಂಬ ಬಯಕೆ ಇದ್ದರೆ ಮೊದಲು ಕೃಷಿ ಭೂಮಿಯನ್ನು ಕಮರ್ಷಿಯಲ್ ಲ್ಯಾಂಡ್ – ಕೃಷಿಯೇತರ ಭೂಮಿಯಾಗಿ ಬದಲಾವಣೆ ಮಾಡಿಕೊಳ್ಳಬೇಕು, ನಂತರ ಮನೆ ಕಟ್ಟಲು ಅನುಮತಿ ಸಿಗುತ್ತದೆ.

    ಕೃಷಿ ಭೂಮಿಯ ಒಂದು ಸಣ್ಣ ಭಾಗವನ್ನ ಮಾತ್ರ ಕಟ್ಟಡ ನಿರ್ಮಾಣಕ್ಕೆ ಬಳಸಬಹುದೇ ಹೊರತು ಸಂಪೂರ್ಣ ಕೃಷಿ ಭೂಮಿಯನ್ನು ಮನೆ ನಿರ್ಮಾಣದ ಬಳಕೆಗೆ ಅನುಮತಿ ನೀಡುವುದಿಲ್ಲ. ರೈತರಾಗಿದ್ದು ನಿಮ್ಮ ಸ್ವಂತ ಜಮೀನನ್ನ ಹೊಂದಿದ್ದು , ಸ್ವಂತ ಸೂರು ನಿಮಗಿಲ್ಲದಿದ್ದರೆ ಈ ಜಮೀನಿನ ಆಯ್ದ ಒಂದು ಭಾಗವನ್ನು ಮನೆ ಕಟ್ಟಲು ಬಳಕೆ ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಮುನ್ನ ನಿಮ್ಮ ಭೂಮಿಯನ್ನು ಅಗ್ರಿಕಲ್ಚರಲ್ ಲ್ಯಾಂಡ್ ವಿಭಾಗದಿಂದ ನಾನ್ ಅಗ್ರಿಕಲ್ಚರಲ್ ಲ್ಯಾಂಡ್ ವಿಭಾಗಕ್ಕೆ ಪರಿವರ್ತನೆ ಮಾಡಿಕೊಳ್ಳಬೇಕು ,ನಂತರವೇ ಮನೆ ನಿರ್ಮಾಣ ಮಾಡಲು ಅವಕಾಶವಿರುತ್ತೆ.

    ಒಮ್ಮೆ ನಿಮ್ಮ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿದ ನಂತರ ಅಲ್ಲಿ ಮನೆ ನಿರ್ಮಾಣ ಮಾಡಲು ಯಾವುದೇ ನಿಯಮಗಳ ತೊಡಕು ಎದುರಾಗುವುದಿಲ್ಲ. ಆದರೆ ಕಟ್ಟಡ ನಿರ್ಮಾಣಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿಯಿಂದ ಎನ್.ಓ.ಸಿ (NOC) ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸೋ ನೀವೇನಾದರೂ ನಿಮ್ಮ ಜಮೀನಿನಲ್ಲಿ ಒಂದು ಮನೆ ಕಟ್ಟಿಸಬೇಕು ಎಂಬ ಕನಸು ಹೊಂದಿದ್ದರೆ ಈ ನಿಯಮಗಳ ಬಗ್ಗೆ ಅರಿತು ಮುಂದುವರೆಯಿರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap