ಜಿಎಸ್‌ಟಿ ಕಲೆಕ್ಷನ್ ಸೋರಿಕೆ ತಡೆಯಲು ಕ್ರಮ : ಹೆಚ್‌ ಕೆ ಪಾಟೀಲ್‌

ಬೆಂಗಳೂರು: 

     ರಾಜ್ಯದಲ್ಲಿ ಜಿಎಸ್‌ಟಿ ಕಲೆಕ್ಷನ್ ಗೆ ಸಂಬಂಧಿಸಿದಂತೆ ಸೋರಿಕೆ ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇ- ಕಾಮರ್ಸ್ ಮಾರಾಟಗಾರರ ಪರಿಶೋಧನೆ ಮತ್ತು ತಪಾಸಣೆಯನ್ನು ಹೆಚ್ಚಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ ಶುಕ್ರವಾರ ಹೇಳಿದ್ದಾರೆ.

    ವಿಧಾನಸಭೆಯಲ್ಲಿ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ವಿಧೇಯಕ 2023ನ್ನು ಪರಿಗಣನೆಗೆ ಪ್ರಾಯೋಗಿಕವಾಗಿ ಮಂಡಿಸುವ ವೇಳೆ ಸಚಿವರು ಈ ವಿಷಯ ತಿಳಿಸಿದರು. ನಂತರ ವಿಧೇಯಕವನ್ನು ಅಂಗೀಕರಿಸಲಾಯಿತು. ವ್ಯಾಟ್ ಯುಗದಲ್ಲಿ ರಾಜ್ಯದಲ್ಲಿ 5,80,000 ತೆರಿಗೆ ಪಾವತಿದಾರರಿದ್ದರು. ಇಂದು ಜಿಎಸ್‌ಟಿ ಅವಧಿಯಲ್ಲಿ ಅದು 10 ಲಕ್ಷಕ್ಕೆ ಏರಿದೆ, ಆದ್ದರಿಂದ ಸುಮಾರು 4.2ಲಕ್ಷ ತೆರಿಗೆದಾರರು ನಿವ್ವಳ ತೆರಿಗೆ ವ್ಯಾಪ್ತಿಗೆ ಬಂದಿದ್ದಾರೆ ಎಂದರು. 

    ಕರ್ನಾಟಕವು 2017-18ರಲ್ಲಿ 44,816 ಕೋಟಿ ರೂ.ಗಳಿಂದ 2022-23ರಲ್ಲಿ 81,848 ಕೋಟಿ ರೂ.ಗೆ ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ನಮ್ಮ ಬಜೆಟ್ ಗಾತ್ರ ಮತ್ತು ಆದಾಯ ಹೆಚ್ಚಳಕ್ಕೆ ಜಿಎಸ್‌ಟಿ ಅಪಾರ ಕೊಡುಗೆ ನೀಡಿದೆ ಎಂದು ಪಾಟೀಲ್ ಹೇಳಿದರು. ಸೇವಾ ವಲಯದಲ್ಲಿ ತೆರಿಗೆ ವಂಚನೆ ಹೆಚ್ಚು ಎಂಬ ಅಭಿಪ್ರಾಯವಿದೆ. ಆದರೆ, ನಮ್ಮ ಕೊಡುಗೆಯ ಶೇಕಡಾ 56 ರಷ್ಟು ಸೇವಾ ವಲಯದಿದ ಬಂದಿದೆ ಎಂದು ಅವರು ತಿಳಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ