ಬೆಂಗಳೂರು:
ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗಳು ಹೆಚ್ಚು ಹೆಚ್ಚು ಮಾರಕವಾಗುತ್ತಿದ್ದು, ಇವುಗಳ ದಾಳಿಗೆ ಹಿರಿಯ ನಾಗರಿಕರೊಬ್ಬರು ಬಲಿಯಾಗಿದ್ದಾರೆ. 71 ವರ್ಷದ ಸೀತಪ್ಪ ಎನ್ನುವ ವೃದ್ಧರ ಮೇಲೆ ಬೀದಿನಾಯಿಗಳು ಬರ್ಬರವಾಗಿ ದಾಳಿಯೆಸಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಸೀತಪ್ಪ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಓಡಲಾಗದೆ ಬಿದ್ದ ವೃದ್ಧ ಸೀತಪ್ಪ ಅವರ ಕೈ ಕಾಲು ಮತ್ತು ಮುಖಕ್ಕೆ ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸೀತಪ್ಪ ಕೊನೆಯುಸಿರೆಳೆದಿದ್ದಾರೆ.
