ಲಡಾಖ್​ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧ ಸಾವು

ಬೆಳಗಾವಿ:

     ಲಡಾಖ್​ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧರೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಮಹೇಶ್​ ಅವರು ಡಿ. 14ರಂದು ಲಡಾಖ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗುಡ್ಡ ಕುಸಿದು ಕೊನೆಯುಸಿರೆಳೆದಿದ್ದರು. ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದರು.

   ಸೈನಿಕ ಮಹೇಶ್ ಅವರ ಪಾರ್ಥಿವ ಶರೀರ ಮಂಗಳವಾರ ಸಂಜೆ ಇರಣಟ್ಟಿ ಗ್ರಾಮಕ್ಕೆ ಆಗಮಿಸಿತು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಗೌರವ ಸಮರ್ಪಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಮಹೇಶ್ ಅವರ ಅಂತ್ಯಸಂಸ್ಕಾರ ನೆರವೇರಿದೆ. ಎರಡು ತಿಂಗಳ ಹಿಂದೆಯಷ್ಟೇ ಸೈನಿಕ ಮಹೇಶ್ ಅವರ ನಿಶ್ಚಿತಾರ್ಥ ಕೂಡ ಆಗಿದ್ದು, ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಲಡಾಖ್‌ನಲ್ಲಿ ನಡೆದ ದುರಂತದಲ್ಲಿ ಮಹೇಶ್​ ಪ್ರಾಣ ತೆತ್ತಿದ್ದಾರೆ.

Recent Articles

spot_img

Related Stories

Share via
Copy link