ಬಳ್ಳಾರಿ :
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟು ಸ್ವಗ್ರಾಮಕ್ಕೆ ಹೊರಟಿದ್ದ ತಂದೆ-ಮಗ ಸೇರಿ ನಾಲ್ವರು ಇಂದು ಬೆಳಿಗ್ಗೆ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮಸಣ ಸೇರಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ನಿರೀಕ್ಷಕ ಬಸವರಾಜ ಭೀಮರಾವ ಬೆಳ್ಳೂರು(52), ಎಂಬಿಬಿಎಸ್ ವಿದ್ಯಾರ್ಥಿ ಭೀಮರಾವ ಬೆಳ್ಳೂರು(30), ಖಾಸಗಿ ಕಂಪನಿ ಉದ್ಯೋಗಿ, ಬಿಇ ಪದವೀಧರ ಸುನೀಲ ಶಿವರಾಜ ಪಾಟೀಲ(30) ಮತ್ತು ಕಾರು ಚಾಲಕ ರೇವಣಸಿದ್ದಪ್ಪ ಬಸವರಾಜ ಕೊರಡಂಪಳ್ಳಿ(30) ಮೃತ ದುರ್ದೈವಿಗಳು
ಮೃತರೆಲ್ಲರೂ ಚಿಂಚೋಳಿ ತಾಲೂಕಿನ ಚಿಮ್ಮಾದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದ ಮೂಲದವರು. ಇವರು ಬೆಂಗಳೂರಿನಲ್ಲಿ ವಾಸವಿದ್ದರು. ಲಾಕ್‌ಡೌನ್ ಹಿನ್ನೆಲೆ ಸ್ವಗ್ರಾಮಕ್ಕೆ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಸಿರಗುಪ್ಪ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈಸಂಬಂಧ ತೆಕ್ಕಲಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
