ಬೆಂಗಳೂರು:
ನಮ್ಮದು ಕಮಿಷನ್ ಸರ್ಕಾರ ಅಲ್ಲ, ಅದು ನೀವೇ ಅವಧಿ ಕೊಡುಗೆ,ಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲೇ ಕಮಿಷನ್‍ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು ಎನ್ನುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಚಿಕ್ಕೋಡಿ ಹಾಗೂ ಬಾಗಲಕೋಟೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರಧಾನಿ ಮೋದಿ ವಿರುದ್ಧ ಗರಂ ಆದರಲ್ಲದೆ, ಅಂಕಿ ಅಂಶ ಸಮೇತ ಇಂದು ಸುದ್ದಿಗೋಷ್ಠಿ ನಡೆಸಿದರು.
ಉತ್ತರ ಕನ್ನಡ – 182 ಕೋಟಿ, ಧಾರವಾಡಕ್ಕೆ 172, ಬೆಳಗಾವಿ- 461, ವಿಜಯಪುರಕ್ಕೆ 381 ಕೋಟಿ ರೂ. ಸಾಲಮನ್ನಾ ಹಣ ಬಿಡುಗಡೆ ಆಗಿದೆ ಎಂದು ಹೇಳುವ ಮೂಲಕ ಸಾಲಮನ್ನಾ ಮಾಡಿದ್ದೇವೆ ಎಂದು ಅಂಕಿ- ಅಂಶ ಕೊಟ್ಟರು.
ನಾವು ದೇಶ ಭಕ್ತರೇ,ನಾವು ಯಾವುದೇ ಕಾರಣಕ್ಕೂ ಯಾವ ಸೈನಿಕರನ್ನು ಅವಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ದೇವೇಗೌಡರ ಅವಧಿಯಲ್ಲಿ ಗಡಿಯಲ್ಲಿ ಒಂದೂ ಗುಂಡು ಹಾರಿಲ್ಲ, ಅಷ್ಟು ಶಾಂತಿಯುತ ಆಡಳಿತ ಕೊಟ್ಟಿದ್ದಾರೆ.ಈದ್ಗಾ ಮೈದಾನದ ಸಮಸ್ಯೆ ಬಗೆಹರಿಸಿದ್ದು, ಮಾಜಿ ಪ್ರಧಾನಿ ದೇವೇಗೌಡರು ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಸರ್ಕಾರ ಉಳಿಯಲ್ಲ ಎಂದು ಮೇ23 ಸರ್ಕಾರಕ್ಕೆ ಗಡುವು ನೀಡಿದ್ದಾರೆ.ಇಷ್ಟು ದಿನ ರಾಜ್ಯ ನಾಯಕರು ಗಡವು ಕೊಟ್ಟಿದರು.ಈಗ ಮೋದಿಯವರು ಗಡವು ಕೊಟ್ಡಿದ್ದಾರೆ.ಸಿದ್ದರಾಮಯ್ಯರ ಕಾಲದ ಕಾರ್ಯಕ್ರಮಗಳನ್ನ ಮುಂದುವರಿಸಿ,ಈಗ ನಾನು ಸಾಲಮನ್ನ ಸೇರಿ ಹಲವು ಕಾರ್ಯಕ್ರಮ ಮಾಡಿದ್ದೇನೆ ಎಂದರು.
ಇನ್ನು ಮಾಧ್ಯಮದವರ ವಿರುದ್ಧ ಮತ್ತೆ ಹರಿಹಾಯ್ದ ಕುಮಾರಸ್ವಾಮಿ, ಇಷ್ಟಕ್ಕೆಲ್ಲ ಕಾರಣ ನೀವೇ, ಎಲೆಕ್ಟ್ರಾನಿಕ್‍ಮಾಧ್ಯಮಗಳೇ ಸುಳ್ಳು ಸುದ್ದಿ ಹರಿದಾಡುತ್ತಿವೆ ಎಂದರು.ನಮ್ಮದು ನರೇಂದ್ರ ಮೋದಿ ಅವರ ಸರ್ಕಾರದಷ್ಟು ದುರ್ಬಲ ಸರ್ಕಾರ ಅಲ್ಲ. ನಮ್ಮದು ಸಬಲ ಸರ್ಕಾರ ಎಂದು ನರೇಂದ್ರ ಮೋದಿಗೆ ಟಾಂಗ್‍ಕೊಟ್ಟರು.
ನನ್ನ ತಾಯಿ ಬಗ್ಗೆ ಜಗದೀಶ್ ಶೆಟ್ಟರ್ ಲಘುವಾಗಿ ಮಾತನಾಡಿದ್ದಾರೆ.ಜಗದೀಶ ಶೆಟ್ಟರ್ ಮಾತು ನೋವು ತಂದಿದೆ.ಚನ್ನಮ್ಮ ನವರನ್ನ ರಾಜ್ಯಸಭೆಗೆ ಸೇರಿಸುತ್ತಾರೆ ಅಂತಾ ಹೇಳಿದ್ದೀರಿ.ನನ್ನತಾಯಿಯನ್ನೂ ರಾಜಕೀಯಕ್ಕೆ ಎಳೆದಿದ್ದಾರೆ.ಅವರು ರಾಜಕೀಯಕ್ಕೆ ಬರೋದಾಗಿದ್ರೆ 1980ರಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದರು ಎಂದರು.