ವಾಮಾಚಾರಕ್ಕಾಗಿ ಸಾಕಿದ ನಾಯಿ ಕತ್ತು ಕತ್ತರಿಸಿ ಅಪಾರ್ಟ್‌ಮೆಂಟ್‌ನಲ್ಲೇ ಬಚ್ಚಿಟ್ಟ ಮಹಿಳೆ!

ಬೆಂಗಳೂರು:

    ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಒಂದು  ಅಮಾನವೀಯ ಘಟನೆ ನಡೆದಿದೆ. ಪಶ್ಚಿಮ ಬಂಗಾಳ  ಮೂಲದ ಮಹಿಳೆಯೊಬ್ಬರು ತಾನಿದ್ದ ಅಪಾರ್ಟ್​​ಮೆಂಟ್​ನಲ್ಲೇ ತಾವು ಸಾಕಿದ ನಾಯಿಯನ್ನೇ ಕೊಂದು ಬಚ್ಚಿಟ್ಟಿದ್ದಾರೆ. ಮಹದೇವಪುರದ ಚಿನ್ನಪ್ಪ ಲೇಔಟ್ ಅಪಾರ್ಟ್​ಮೆಂಟ್​​ನಲ್ಲಿ ಈ ಘಟನೆ ನಡೆದಿದೆ. ವಾಮಾಚಾರಕ್ಕಾಗಿ ಆಚರಣೆಗಾಗಿ ನಾಯಿಯನ್ನೇ ಬಲಿಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

   ನಾಲ್ಕು ದಿನಗಳ ಹಿಂದೆಯೇ ಈ ಮಹಿಳೆ ತಾನೇ ಸಾಕಿದ ನಾಯಿಯನ್ನು ಹತ್ಯೆ ಮಾಡಿ ಬಚ್ಚಿಟ್ಟಿದ್ದಳು ಎನ್ನಲಾಗುತ್ತಿದೆ. ಮಹದೇವಪುರದ ಚಿನ್ನಪ್ಪ ಲೇಔಟ್ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಾಗಿದ್ದ ಮಹಿಳೆ, ನಾಯಿಯ ಕತ್ತು ಕೊಯ್ದು ಹತ್ಯೆಗೈದಿದ್ದಾರೆ. ಹತ್ಯೆ ನಂತರ ನಾಯಿಯನ್ನು ಬಟ್ಟೆಯಲ್ಲಿ ಸುತ್ತಿಟ್ಟಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಈ ಮಹಿಳೆ 4 ಲ್ಯಾಬ್ರೋಡರ್ ನಾಯಿಗಳನ್ನ ಸಾಕಿದ್ದು, ಒಂದು ನಾಯಿಯನ್ನು ಕೊಂದಿದ್ದಾರೆ ಎನ್ನಲಾಗುತ್ತಿದೆ. ನಾಯಿ ಕಳೇಬರದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

   ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಕಳೇಬರ ಸಿಕ್ಕಿದೆ. ಇದನ್ನು ಮರಣೋತ್ತರ ‌ಪರೀಕ್ಷೆಗೆಂದು ಕಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಹತ್ಯೆ ಮಾಡಿದ್ದು, ಬ್ಲ್ಯಾಕ್ ಮ್ಯಾಜಿಕ್​ಗಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಮಹದೇವಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಫ್ಲ್ಯಾಟ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link