ಬೆಂಗಳೂರು:
ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಸಚಿವರಿಗಾಗಿ ಉಪಹಾರ ಕೂಟವನ್ನು ತಮ್ಮ ಸರ್ಕಾರಿ ಏರ್ಪಡಿಸಿದ್ದಾರೆ.
ಈಗಾಗಲೇ ಡಾ.ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಪುಟ್ಟರಂಗಶೆಟ್ಟಿ, ಜಮೀರ್, ಆರ್.ವಿ.ದೇಶಪಾಂಡೆ, ಯು.ಟಿ ಖಾದರ್, ವೆಂಕಟರಮಣಪ್ಪ, ಕೃಷ್ಣಬೈರೇಗೌಡ, ಶಿವಾನಂದ ಪಾಟೀಲ್, ಶಂಕರ್, ಶಿವಶಂಕರರೆಡ್ಡಿ, ಜಯಮಲಾ, ಕೆ.ಜೆ ಜಾರ್ಜ್, ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಮಿಸಿ ಉಪಹಾರ ಸೇವಿಸಿದ್ದಾರೆ. ಮುಳಬಾಗಿಲು ದೊಸೆ, ಇಡ್ಲಿ-ವಡೆ ಹಾಗೂ ಕಾರಬಾತ್ ವಿಶೇಷ ತಿಂಡಿಯನ್ನು ತಯಾರಿಸಲಾಗಿತ್ತು ಎನ್ನಲಾಗಿದೆ.
ಇನ್ನು ಸಚಿವ ಡಿಕೆ ಶಿವಕುಮಾರ‍್ 16 ಮಂದಿಗಷ್ಟೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.ಐಟಿ ಕೇಸು ವಿವಾದ ಸಂದರ್ಭದಲ್ಲಿ ಕೆಲವು ಸಚಿವರು ಪರೋಕ್ಷವಾಗಿ ಬೆಂಬಲ ನೀಡಿದ ಹಿನ್ನಲೆಯಲ್ಲಿ ಸಚಿವ ಡಿಕೆ ಶಿವಕುಮಾರ‍್ 16 ಮಂದಿಗಷ್ಟೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಉಪಹಾರ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿಲ್ಲ, ಎನ್ನುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
