ಬೆಸ್ಕಾಂ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬದುಕುಳಿದ ಕಾರ್ಮಿಕ

ಹುಳಿಯಾರು:

      ವಿದ್ಯುತ್ ಅವಘಡಕ್ಕೆ ತುತ್ತಾದ ಕಾರ್ಮಿಕದ ಪ್ರಾಣಪಕ್ಷಿ ಹಾರಿಹೋಯಿತು ಎಂದು ಭಾವಿಸಲಾಗಿತ್ತಾದರೂ ಬೆಸ್ಕಾಂ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ ಘಟನೆ ಹುಳಿಯಾರಿನಲ್ಲಿ ಶುಕ್ರವಾರ ನಡೆದಿದೆ.ಕೆ.ಬಿ ಕ್ರಾಸ್ 22೦ ಕೆ.ವಿ ಸ್ವೀಕರಣಾ ಕೇಂದ್ರದ ೪ ನೇ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿಯನ್ನು  

    ಶುಕ್ರವಾರ ಹಮ್ಮಿಕೊಂಡಿರುವುದರಿAದ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಿತ್ತು. ಪರಿಣಾಮ ಹುಳಿಯಾರು ಪಟ್ಟಣದಲ್ಲೂ ಸಹ ಎಲ್‌ಸಿ ಪಡೆದು ಹಳೆಯ ವೈರ್ ಬದಲಾಯಿಸಿ ಹೊಸ ವೈರ್ ಹಾಕುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

    ವಿದ್ಯುತ್ ಗುತ್ತಿಗೆದಾರ ಯಲ್ಲಪ್ಪ ಅವರು ಈ ಕಾಮಗಾರಿಯ ಗುತ್ತಿಗೆ ಪಡೆದು ಕಾರ್ಮಿಕರಿಂದ ವೈರ್ ಬದಲಾಯಿಸುವ ಕೆಲಸ ಮಾಡಿಸುತ್ತಿದ್ದರು. ಅಚ್ಚರಿ ಎನ್ನುವಂತೆ ಕೆ.ಬಿ.ಕ್ರಾಸ್ ನಿಂದ ಮೇನ್  ತೆಗೆದ ನಂತರವೂ ಲೈನ್ ಕ್ಲಿಯರ್ ಪಡೆದುಕೊಂಡಿದ್ದರೂ ಹುಳಿಯಾರು ಟೌನ್‌ನ ಡಿಸಿಸಿ ಬ್ಯಾಂಕ್ ಬಳಿ ಕೆಲಸ ನಿರ್ವಹಿಸುತ್ತಿರುವಾಗ ಗದಗ್ ಮೂಲದ ಕೂಲಿ ಕಾರ್ಮಿಕ ಸಮೀರ್‌ಗೆ ವಿದ್ಯುತ್ ಶಾಕ್ ಹೊಡೆದು ಕಂಬದಲ್ಲಿ ನೇತಾಡುತ್ತಿದ್ದ.

   ಈ ಅವಘಡದ ಬಗ್ಗೆ ಸ್ಥಳಿಯರಲ್ಲದೆ ಬೆಸ್ಕಾಂ ಸಿಬ್ಬಂದಿಗಳೂ ಸಹ ದಿಗ್ಬçಮೆಗೊಂಡು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಕಂಬದಲ್ಲಿ ಸಮೀರ್ ನೇತಾಡುತ್ತಿರುವುದನ್ನು ಕಂಡು ಪ್ರಾಣಪಕ್ಷಿ ಹಾರಿ ಹೋಗಿರಬಹುದೆಂದು ಪ್ರಾರಂಭದಲ್ಲಿ ಊಹಿಸಲಾಗಿತ್ತು. ಅಲ್ಲೇ ಇದ್ದ ಬಿದುರಿನ ಏಣಿಯ ಮೂಲಕ ಕಂಬದಲ್ಲಿದ್ದ ಸಮೀರ್‌ಗೆ ತಿವಿದು ತಿವಿದು ಗೂಡಂಗಡಿಯ ಮೇಲೆ ಬೀಳಿಸಲಾಯಿತು. ನಂತರ ಬೆಸ್ಕಾಂ ಸಿಬ್ಬಂದಿಗಳೇ ಕೃತಕ ಉಸಿರಾಟ ಕೊಟ್ಟು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ದಿದ್ದರು.

   ಅದೃಷ್ಟವಶತ್ ಚಿಕಿತ್ಸೆ ಹಾಗೂ ಬೆಸ್ಕಾಂ ಸಿಬ್ಬಂದಿಯ ಶ್ರಮ ಫಲಕಾರಿಯಾಗಿ ಸಮೀರ್ ಪವಾಡದಂತೆ ಬದುಕುಳಿದನು. ಅಲ್ಲದೆ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹುಳಿಯಾರಿನ ತನ್ನ ಮನೆಯಲ್ಲಿ ವಿಶ್ರಾಂತಿ ಸಹ ಪಡೆಯುತ್ತಿದ್ದಾನೆ. ಈ ಘಟನೆಯಿಂದ ಸಮೀರ್‌ಗೆ ಯಾವ ಗಾಯಗಳೂ ಸಹ ಆಗದೆ ಎಲ್ಲರೊಂದಿಗೆ ಮಾತನಾಡುತ್ತ, ಊಟತಿಂಡಿ ಸೇವಿಸುತ್ತಾ ಎಂದಿನಂತಿರುವುದು ಬೆಸ್ಕಾಂ ಸಿಬ್ಬಂಧಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

 

Recent Articles

spot_img

Related Stories

Share via
Copy link
Powered by Social Snap