ಸಾಂಸ್ಕೃತಿಕವಾಗಿ ಗ್ರಾಮ ಕಟ್ಟಲು ಸ್ವಾಮೀಜಿ ಕರೆ

ಹುಳಿಯಾರು:

    ಸಾಂಸ್ಕೃತಿಕವಾಗಿ ಗ್ರಾಮಗಳನ್ನು ಕಟ್ಟಿಲು ಸ್ಥಳಿಯರು ಮುಂದಾಗಬೇಕಿದೆ ಎಂದು ಸಾಣೆಹಳ್ಳಿ ಮಠದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಲಹೆ ನೀಡಿದರು.

    ಹುಳಿಯಾರು ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕತಿಕ ಸದನದಲ್ಲಿ ಶ್ರೀಮಾತಾ ಚಾರಿಟಬಲ್ ಟ್ರಸ್ಟ್, ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ನವರಾತ್ರಿ ಸಾಂಸ್ಕತಿಕ ಉತ್ಸವವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಸಾಂಸ್ಕತಿಕವಾಗಿ ಬೆಳೆಯುವ ಮೊದಲು ಸಾಣೇಹಳ್ಳಿ ಎಂಬ ಪುಟ್ಟ ಹಳ್ಳಿ ಯಾರಿಗೂ ತಿಳಿದಿರಲಿಲ್ಲ. ಈ ಅನಾಮದೇಯ ಪುಟ್ಟ ಗ್ರಾಮವನ್ನು ಸಾಂಸ್ಕತಿಕವಾಗಿ ಕಟ್ಟಿದ ಪರಿಣಾಮ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ನಾಟಕೋತ್ಸವ ಎಂದರೆ ರಾಜ್ಯದ ಮೂಲೆ ಮೂಲೆಗಳಿಂದ ರಂಗಾಸಕ್ತರು ಆಗಮಿಸುತ್ತಾರೆ. ದೇಶವಿದೇಶದ ಕಲಾವಿದರು ಆಗಮಿಸುತ್ತಾರೆ. ಹಾಗಾಗಿ ಸಾಂಸ್ಕøತಿಕವಾಗಿ ಕಟ್ಟಿದ ಗ್ರಾಮ ಏಳಿಗೆ ಸುಲಭಸಾಧ್ಯ. ಈ ನಿಟ್ಟಿನಲ್ಲಿ ಹುಳಿಯಾರು ಗ್ರಾಮವನ್ನು ಸಾಂಸ್ಕತಿಕವಾಗಿ ಕಟ್ಟಲು ಹೊರಟಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಸ್ಥಳೀಯರ ಸಂಪೂರ್ಣ ಸಹಕಾರ ಸಿಕ್ಕಿದಾದಲ್ಲಿ ಹುಳಿಯಾರು ಎತ್ತರೆತ್ತರಕ್ಕೆ ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದರು.

     ಹಳ್ಳಿಗಳಲ್ಲಿ ಜನಪದ ನೃತ್ಯ, ಸಂಗೀತ, ರಂಗಕಲೆ, ಕೋಲಾಟ ಮುಂತಾದ ಕಲಾಪ್ರಕಾರಗಳಿರುತ್ತವೆ. ಆದರೆ ಇವುಗಳನ್ನು ಕಂಡೂ ಕಾಣದಂತಿದ್ದು ಉಪೇಕ್ಷೆ ಮಾಡುತ್ತಿದ್ದೇವೆ. ಅವರನ್ನು ಗುರುತಿಸಿ ವೇದಿಕೆ ಕೊಟ್ಟರೆ ಅವರೂ ಹೆಸರಾಗಿ ಊರಿಗೂ ಹೆಸರು ತರುತ್ತಾರೆ. ಹಾಗಾಗಿ ಸ್ಥಳೀಯ ಕಲೆಗಳನ್ನು ಬಳಸಿಕೊಳ್ಳುವುದನ್ನು ಮೊದಲು ಎಲ್ಲರೂ ರೂಢಿಸಿಕೊಳ್ಳಬೇಕಿದೆ ಎಂದರಲ್ಲದೆ ಮನರಂಜನೆ ಎಂದರೆ ಇಮದು ಧಾರವಾಹಿಯನ್ನುವಂತಾಗಿದೆ. ಆದರೆ ಈ ಧಾರವಾಹಿಗಳು ಮನೆ ಒಡೆಯುತ್ತವೆಯೇ ವಿನಃ ಮನೋವಿಕಾಸ ಹಾಗೂ ಮನರಂಜನೆ ಎರಡನ್ನೂ ನೀಡುವುದಿಲ್ಲ. ಇನ್ನಾದರೂ ಧಾರವಾಹಿಯಿಂದ ಹೊರಬಂದು ನೃತ್ಯ, ಸಂಗೀತ, ನಾಟಕ ಅಭಿನಯಿಸುವ ಅಥವಾ ನೋಡುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

     ತಂಜಾವೂರಿನ ದಕ್ಷಿಣ ವಲಯ ಸಾಂಸ್ಕತಿಕ ಕೇಂದ್ರದ ಸದಸ್ಯರಾದ ತೊಟ್ಟವಾಡಿ ನಂಜುಂಡಸ್ವಾಮಿ, ಮಾತಾ ಟ್ರಸ್ಟ್‍ನ ಗಂಗಾಧರ್, ಪಿಎಸ್‍ಐ ಕೆ.ಸಿ.ವಿಜಯಕುಮಾರ್, ಸಾಮಾಜಿಕ ಹೋರಾಟಗಾರ್ತಿ ಜಯಲಕ್ಷ್ಮಮ್ಮ, ವರ್ತಕರ ಸಂಘದ ಅಧ್ಯಕ್ಷರಾದ ಎಂಎಸ್‍ಆರ್ ನಟರಾಜು, ದಾನಿಗಳಾದ ಬ್ಯಾಂಕ್ ಮರುಳಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap