ಕೆ.ಎಚ್.ಬಿ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಪ್ರಶಸ್ತಿ

ಶಿರಸಿ:

    ಇಂದು ದಿನಾಂಕ 29 /07/2025 ರಂದು ಮಂಗಳವಾರ PM SHRI ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೆ ಹೆಚ್ ಬಿ ಕಾಲೋನಿ ಶಿರಸಿ ಇಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ- 2025 ,ಕಾರ್ಯಕ್ರಮವನ್ನು ವರ್ಚುಯಲ್ ಆಗಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಐದನೇ ವರ್ಷದ ಯಶಸ್ವಿ ಕಾರ್ಯಕ್ರಮದ ಅಂಗವಾಗಿ ಇಡೀ ದೇಶಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಮಕ್ಕಳ ಶೈಕ್ಷಣಿಕ ಏಳ್ಗೆಯ ಪ್ರಧಾನ ಉದ್ದೇಶದೊಂದಿಗೆ ಆರಂಭಗೊಂಡಿದ್ದ P M SHRI ಯೋಜನೆಯ ಅಡಿಯಲ್ಲಿ ಆಯ್ಕೆಗೊಂಡು ಕಾರ್ಯ ನಿರ್ವಹಿಸುತ್ತಿದ್ದ ನಗರದ ಕೆಎಚ್ ಬಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಿರಸಿ ಶೈಕ್ಷಣಿಕ ಜಿಲ್ಲಾ‌ ಮಟ್ಟದಲ್ಲಿ ಅತ್ಯುತ್ತಮ ಶಾಲೆ ಎಂದು ಕೇಂದ್ರ ಸರಕಾರ ಗುರುತಿಸಿದೆ.

    ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪ್ರವೇಶ ಪೂರ್ವ ತರಗತಿಗಳಾದ ಎಲ್ ಕೆಜಿ, ಯುಕೆಜಿಗಳಿಂದಲೇ ಗುಣಮಟ್ಟದ ಶಿಕ್ಷಣ ಆರಂಭಿಸಬೇಕು ಎಂಬ ಕಾರಣಕ್ಕೆ ೨೦೨೩-೨೪ರಲ್ಲಿ ಆರಂಭಗೊಂಡಿದ್ದ ಪಿಎಂಶ್ರೀ ಯೋಜನೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಶಾಲೆಯಾಗಿ ಇದು ಆಯ್ಕೆ ಆಗಿತ್ತು.ಅಲ್ಲಿಂದ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಷ್ಟು ಸೌಲಭ್ಯವನ್ನು ನೀಡಲಾಗುತ್ತಿದೆ.

  ಶಿಕ್ಷಣಕ್ಕೆ ಸಂಬಂಧಿಸಿ ಅನುದಾನ ಹೆಚ್ಚಳ, ಆಟದ, ಕಲಿಕೆಯ ಸಾಮಗ್ರಿ, ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ ಕ್ಲಾಸ್, ಕಂಪ್ಯೂಟರ್, ಪುಸ್ತಕಗಳು,ತರಗತಿ ಕೋಣೆಗಳ‌ ಸಿಂಗಾರ, ಉಚಿತ ಪ್ರವಾಸ , ಕರಾಟೆ, ಯೋಗ ಸಹಿತ ಹಲವು ತರಬೇತಿಗಳನ್ನೂ ನೀಡಲಾಗುತ್ತಿದೆ.
ಶಿರಸಿ ‌ಕೆಎಚ್ ಬಿ ಶಾಲೆ ಇದರ ಪರಿಣಾಮಕಾರಿ ಅನುಷ್ಠಾನ ಹಿನ್ನೆಲೆಯಲ್ಲಿ ಈ ಪುರಸ್ಕಾರ ಲಭಿಸಿದೆ ಎಂದು ಡಿಡಿಪಿಐ ಡಿ.ಆರ್.ನಾಯ್ಕ, ಬಿಇಓ ನಾಗರಾಜ್ ನಾಯ್ಕ ಸಂಭ್ರಮಿಸಿದ್ದಾರೆ.

   ಅಂತರ್ಜಾಲದ‌ ಮೂಲಕ ಈ ಪುರಸ್ಕಾರ ಪ್ರದಾನ ಸಮಾರಂಭವನ್ನು ಸಾಂಕೇತಿಕವಾಗಿ‌ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ‌ ಪ್ರಧಾನ ನಡೆಸಿದರು. ಕೆಎಚ್ ಬಿ ಶಾಲೆಯಲ್ಲಿ ನಡೆಸಲಾದ ವರ್ಚುವಲ್ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಪ್ರಮುಖರು, ಶಾಲಾ ಶಿಕ್ಷಕರು, ಪಾಲಕರು ಆಗಮಿಸಿ ಸಂತಸ ವ್ಯಕ್ತಪಡಿಸಿದರು.ಡಿಡಿಪಿಐ ಡಿ.ಆರ್.ನಾಯ್ಕ, ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ, ಬಿಇಓ ನಾಗರಾಜ ನಾಯ್ಕ, ಇಲಾಖೆಯ ಎಂ.ಎಂ.ಭಟ್ಟ, ಲೀನಾ ನಾಯ್ಕ, ಎಂ.ಎಂ.ಹೆಗಡೆ, ಜಿ.ಆರ್.ಹೆಗಡೆ, ಮುಖ್ಯಾಧ್ಯಾಪಕ ಜಿ.ಎಚ್.ನಾಯ್ಕ ಇರರರು ಇದ್ದರು.

Recent Articles

spot_img

Related Stories

Share via
Copy link