ಗ್ರಾಹಕರೇ ಎಚ್ಚರ ….! : ಮಾರುಕಟ್ಟೆಗೆ ಲಗ್ಗೆ ಇಟ್ಟ ಫೇಕ್‌ ಬೆಳ್ಳುಳ್ಳಿ….!

ಮುಂಬೈ: 

      ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಮೆಂಟ್‌ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ. ಅಗತ್ಯ ಅಡುಗೆಮನೆಯ ಮುಖ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವುದರೊಂದಿಗೆ, ಕೆಲವು ಮಾರಾಟಗಾರರು ಪರಿಸ್ಥಿತಿಯ ಲಾಭವನ್ನು ಪಡೆಯಲು ಮುಂದಾಗಿದ್ದು, ಗ್ರಾಹಕರಿಗೆ ಕೊಂಚವೂ ಅನುಮಾನವೇ ಬರದಂತೆ ಸಿಮೆಂಟ್‌ ಬೆಳ್ಳುಳ್ಳಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

   ಅಕೋಲಾದ ಬಜೋರಿಯಾ ನಗರದಲ್ಲಿ ನೆಲೆಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅವರ ಪತ್ನಿ ಕೃತಕ ಬೆಳ್ಳುಳ್ಳಿ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಯಿಂದ ವಂಚನೆಗೊಳಗಾಗಿದ್ದು, ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಈ ವಂಚನೆ ಬೆಳಕಿಗೆ ಬಂದಿದೆ.

   ಇನ್ನು ಸಿಮೆಂಟ್​ ಬೆಳ್ಳುಳ್ಳಿಯನ್ನು ಬೇರ್ಪಡಿಸಲು ಪ್ರಯತ್ನಿಸಿದಾಗ ನಕಲಿ ಎಂದು ಬಯಲಾಗಿದೆ. ಚಾಕುವಿನಿಂದ ಕತ್ತರಿಸಿದಾಗ ಅದು ಸಿಮೆಂಟ್​ನಿಂದ ಮಾಡಿದ ಬೆಳ್ಳುಳ್ಳಿ ಎಂದು ಬೆಳಕಿಗೆ ಬಂದಿದೆ. ಅಕೋಲಾದಲ್ಲಿ ಬೆಳ್ಳುಳ್ಳಿ ನಕಲಿ ಮಾರಾಟಗಾರರು ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಅಕೋಲಾ ನಗರದ ಹೆಚ್ಚಿನ ಭಾಗಗಳಲ್ಲಿ, ಈ ವ್ಯಾಪಾರಿಗಳು ಪ್ರತಿದಿನ ತರಕಾರಿಗಳನ್ನು ಮಾರಾಟ ಮಾಡಲು ಬರುತ್ತಾರೆ, ಅವರಲ್ಲಿ ಕೆಲವರು ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

   ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಮೊಟ್ಟೆ, ನಕಲಿ ಅಕ್ಕಿಗಳ ಮಾರಾಟ ಹೆಚ್ಚಾಗಿದೆ. ನಕಲಿ ಮೊಟ್ಟೆ ಹಾವಳಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೇ ಅತಿ ಹೆಚ್ಚು. ಇಲ್ಲೇ ಅದನ್ನು ಮೊಟ್ಟೆ ಉತ್ಪಾದಿಸಲಾಗುತ್ತಿದೆ. ಆದರೆ ಇದರ ಗರಿಷ್ಠ ಬಳಕೆ ಕರ್ನಾಟಕದಲ್ಲಿದೆ. ವರದಿಯ ಪ್ರಕಾರ ಬೆಂಗಳೂರಿನಲ್ಲಿ ದಿನಕ್ಕೆ 75 ಲಕ್ಷ ಮೊಟ್ಟೆಗಳಿಗೆ ಬೇಡಿಕೆ ಇದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೊಟ್ಟೆ ಬೇಡಿಕೆಯಿಂದ ನಕಲಿ ಮೊಟ್ಟೆಗಳ ವ್ಯಾಪಾರ ಹೆಚ್ಚುತ್ತಿದೆ.

Recent Articles

spot_img

Related Stories

Share via
Copy link