ಸಿದ್ಧಗಂಗಾ ಶ್ರೀ ಗಳಿಗೆ ಭಾರತರತ್ನ ಕೊಡಬೇಕಿತ್ತು: ಪ್ರಭಾಕರ ಕೋರೆ

ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ116ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ

ತುಮಕೂರು

     ಸಿದ್ಧ ಗಂಗೆಯ ಲಿಂಗೈಕ್ಯ ಪೂಜ್ಯ ಡಾ. ಶ್ರೀ. ಶ್ರೀ.ಶಿವಕುಮಾರ ಮಹಾ ಸ್ವಾಮೀಜಿ ಅವರು ಭಾರತರತ್ನಕ್ಕೂ ಮಿಗಿಲಾದ ರತ್ನ. ಅವರಿಗೆ ಎಂದೋ ಭಾರತರತ್ನ ಬರಬೇಕಿತ್ತು. ಆದರೆ ಅವರನ್ನು ಸರ್ಕಾರ ಗುರುತಿಸದೇ ಹೋದದ್ದು ನಮ್ಮೆಲ್ಲರ, ಕರ್ನಾಟಕ ದ ದುರ್ದೈವ ಎಂದು ಕೆಎಲ್ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜ್ಯ ಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

    ಅವರು ಸಿದ್ಧಗಂಗಾ ಮಠದಲ್ಲಿ ಶನಿವಾರ ನಡೆದ ಡಾ. ಶ್ರೀ ಶ್ರೀ. ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಡಾ. ಶಿವಕುಮಾರ ಸ್ವಾಮೀಜಿ ಅವರು ಭರತಖಂಡದ ಮಹಾಬೆಳಗು. ಜಾತಿ ಕುಲಮೀರಿದ ಮಹಾನ್ ಮಾನವತಾವಾದಿ ಮೌನ ದಾಸೋಹ ದಿಂದಲೇ ಸಾಮಾಜಿಕ ಕ್ರಾಂತಿ ಮಾಡಿ ಯುಗ ಪ್ರವರ್ತಕ ರೆನಿಸಿದವರು. ಇಂತಹ ಶ್ರೀ ಗಳ ಜನ್ಮ ಜಯಂತಿ ಸಂದರ್ಭದಲ್ಲಿ ನನ್ನನ್ನು ಗೌರವಿಸಿ ಆಶೀರ್ವದಿಸಿರುವುದು ಸಾಮಾಜಿಕ ವಾಗಿ ನನ್ನ ಜವಾಬ್ದಾರಿ ಹೆಚ್ಟಿಸಿದೆ ಎಂದರು.

     ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ರಾಜ್ಯ ಕ್ಕೆ ವೀರಶೈವ ಮಠ ಮಾನ್ಯಗಳ ಕೊಟ್ಟಿರುವ ಕೊಡುಗೆ ಅಪಾರ. ಕರ್ನಾಟಕ ವನ್ನು ಶಿಕ್ಷಣ ಕಾಶಿಯಾಗಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹಾನಗಲ್ ಕುಮಾರಶಿವಯೋಗಿಗಳ ಕೃಪಾಶೀರ್ವಾದದಿಂದ ಶಿಕ್ಷಣ ಸಂಸ್ಥೆಗಳು ಸ್ಥಾಪನೆ ಯಾದರೆ ದಕ್ಷಿಣ ದಲ್ಲಿ ಸಿದ್ಧಗಂಗೆ, ಸುತ್ತೂರು ಇತರ ಮಠಗಳು ಶಿಕ್ಷಣ ದಾಸೋಹ ವನ್ನು ವರ್ಗರಹಿತ, ವರ್ಣರಹಿತ ವಾಗಿ ಸಮಾಜಕ್ಕೆ ನೀಡಿವೆ ಎಂದು ನುಡಿದರು.

    ಕೆರಗೋಡಿ ರಂಗಾಪುರದ ಶ್ರೀ ಗಿರುಪರದೇಶಿ ಕೇಂದ್ರ ಸ್ವಾಮೀಜಿ, ಸಿದ್ಧಗಂಗೆಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಸುತ್ತೂರಿನ ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸೇವಾ ಪಥವನ್ನು ಸ್ಮರಿಸಿ ಶ್ರೀ ಗಳ ಸೇವೆ ಸಂತರೆಲ್ಲರಿಗೂ ಮಾದರಿ ಎಂದರು.
ವಿವಿಧ ವಮಠದ ಶ್ರೀ ಗಳು, ಆಶಾಕೋರೆ, ಎಸ್ಐಟಿ ನಿರ್ದೇಶಕ ಡಾ. ಎಂ. ಎನ್. ಚನ್ನಬಸಪ್ಪ, ನಿವೃತ್ತ ಡಿಜಿಪಿ ರೇವಣಸಿದ್ದಯ್ಯ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಸ್ಪೂರ್ತಿ ಚಿದಾನಂದ್, ಎಸ್ಐಟಿ ಸಿಇಓ ಡಾ. ಶಿವಕುಮಾರ ಯ್ಯ, ಆಡಳಿತಾಧಿಕಾರಿ ಎಸ್. ವಿಶ್ವ ನಾಥಯ್ಯ, ಜಿ. ಎಸ್. ರೇಣುಕಪ್ಪ, ದೀಪಕ್ ಮತ್ತಿತರರು ಹಾಜರಿದ್ದರು.

    ಗುರುವಂದನಾ ವೇದಿಕೆ ಗೆ ಶ್ರೀ ಗಳು ಗಣ್ಯರನ್ನು ಕುಂಬ ಕಳಸ ಮೆರವಣಿಗೆಯೊಂದಿಗೆ ಕರೆತರಲಾಯಿತು. ಸಾವಿರಾರು ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಗದ್ದುಗೆ ಗೆ ವಿಶೇಷ ಪೂಜೆ:

     ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ116ನೇ ವರ್ಷ ದ ಜಯಂತಿ ಪ್ರಯುಕ್ತ ಪೂಜ್ಯರ ಲಿಂಗೈಕ್ಯ ಗದ್ದುಗೆ ಗೆ ವಿಶೇಷ ಪೂಜೆ ಅಭಿಷೇಕ ನೆರವೇರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ