RRR ಕಲೆಕ್ಷನ್​ಗೆ ದೊಡ್ಡ ಹೊಡೆತ; ‘ಬಾಹುಬಲಿ 2’ ದಾಖಲೆ ಮುರಿಯೋದು ಕಷ್ಟ?

ತಂತ್ರಜ್ಞಾನ ಮುಂದುವರಿದಂತೆ, ಇಂಟರ್​ನೆಟ್​ ಬಳಕೆ ಹೆಚ್ಚಿದಂತೆ ಪೈರಸಿ ಕಾಟ ಜೋರಾಗಿದೆ. ಸಿನಿಮಾ ರಿಲೀಸ್​ ಆಗುತ್ತಿದ್ದಂತೆ ಆನ್​ಲೈನ್​ನಲ್ಲಿ ಸಿನಿಮಾಗಳು ಲೀಕ್​ ಆಗುತ್ತವೆ. ಸಣ್ಣ ಚಿತ್ರಗಳಿಂದ ಹಿಡಿದು, ದೊಡ್ಡ ಬಜೆಟ್​ ಚಿತ್ರಗಳವರೆಗೆ ಎಲ್ಲರೂ ಪೈರಸಿ ಕಾಟದ ಸಂತ್ರಸ್ತರು.

        ಎಸ್​.ಎಸ್​. ರಾಜಮೌಳಿ  ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಇಂದು (ಮಾರ್ಚ್​ 25) ರಿಲೀಸ್ ಆಗಿ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ವಿಶ್ವಾದ್ಯಂತ 8,000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.

ಮಾ.28 ರಿಂದ `SSLC’ ಪರೀಕ್ಷೆ : ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಸಿಗಲ್ಲ : ಸಚಿವ ಬಿ.ಸಿ.ನಾಗೇಶ್

ಈ ಚಿತ್ರದಿಂದ ರಾಜಮೌಳಿ ಖಾತೆಗೆ ಮತ್ತೊಂದು ಯಶಸ್ಸು ಸೇರ್ಪಡೆ ಆಗಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಸಿನಿಮಾದ ಒಟ್ಟೂ ಕಲೆಕ್ಷನ್​ಗೆ ಹೊಡೆತ ನೀಡುವ ಘಟನೆ ಒಂದು ನಡೆದಿದೆ. ಆರ್​ಆರ್​ಆರ್​’ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್​ಲೈನ್​ನಲ್ಲಿ ಲೀಕ್​ ಆಗಿದೆ.

ತಂತ್ರಜ್ಞಾನ ಮುಂದುವರಿದಂತೆ, ಇಂಟರ್​ನೆಟ್​ ಬಳಕೆ ಹೆಚ್ಚಿದಂತೆ ಪೈರಸಿ ಕಾಟ ಜೋರಾಗಿದೆ. ಸಿನಿಮಾ ರಿಲೀಸ್​ ಆಗುತ್ತಿದ್ದಂತೆ ಆನ್​ಲೈನ್​ನಲ್ಲಿ ಸಿನಿಮಾಗಳು ಲೀಕ್​ ಆಗುತ್ತವೆ. ಸಣ್ಣ ಚಿತ್ರಗಳಿಂದ ಹಿಡಿದು, ದೊಡ್ಡ ಬಜೆಟ್​ ಚಿತ್ರಗಳವರೆಗೆ ಎಲ್ಲರೂ ಪೈರಸಿ ಕಾಟದ ಸಂತ್ರಸ್ತರು. ಈಗ ‘ಆರ್​ಆರ್​ಆರ್​’ ಚಿತ್ರ ಕೂಡ ಪೈರಸಿ ಕಾಟಕ್ಕೆ ಒಳಗಾಗಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರ ಟೊರೆಂಟ್, ಟೆಲಿಗ್ರಾಮ್​ ಮೊದಲಾದ ಕಡೆಗಳಲ್ಲಿ ಹರಿದಾಡಿದೆ. ಇದು ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪ್ರಭಾವ ಬೀರಬಹುದು.

ಇಂದಿನಿಂದ 15 ನೇ ಆವೃತ್ತಿ `ಐಪಿಎಲ್’ ಹಬ್ಬ ಆರಂಭ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಮೊದಲ ದಿನದ ಕಲೆಕ್ಷನ್​ ವಿಚಾರದಲ್ಲಿ ‘ಬಾಬುಬಲಿ 2’ ದಾಖಲೆಯನ್ನು ‘ಆರ್​ಆರ್​ಆರ್​’ ಮುರಿಯುವ ನಿರೀಕ್ಷೆ ಇದೆ. ಮೊದಲ ದಿನ ಬಹುತೇಕ ಶೋಗಳು ಸೋಲ್ಡ್​​ಔಟ್​ ಆಗಿರುವುದರಿಂದ ಚಿತ್ರದ ಗಳಿಕೆ ಹೆಚ್ಚಬಹುದು. ಆದರೆ, ಸಿನಿಮಾ ಲೀಕ್​ ಆಗಿರುವುದರಿಂದ ಒಟ್ಟಾರೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಾಣಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ, ಒಟ್ಟಾರೆ ಕಲೆಕ್ಷನ್​ ವಿಚಾರದಲ್ಲಿ ‘ಬಾಹುಬಲಿ 2’ ಚಿತ್ರವನ್ನು ‘ಆರ್​ಆರ್​ಆರ್​’ ಹಿಂದಿಕ್ಕಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಅಭಿಮಾನಿಗಳು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಕಡೆಗಳಿಂದಲೂ ಸೂಪರ್​ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ನಿರ್ದೇಶಕ ರಾಜಮೌಳಿ ಅವರ ಕೆಲಸಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಕರ್ನಾಟಕದಲ್ಲೂ ‘ಆರ್​ಆರ್​ಆರ್​’ ಸಿನಿಮಾದ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭ ಆಗಿತ್ತು.

ಮೋದಿ ವಿರುದ್ಧ ಪುಟಿನ್ ‘ಛೂ’ ಬಾಣ; ರಷ್ಯಾ ಪರವಾಗಿ ಭಾರತಕ್ಕೆ ಬಂತಾ ಚೀನಾ!?

ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮುಗಿಬಿದ್ದು ಟಿಕೆಟ್​ ಖರೀದಿಸಿ, ಮೊದಲ ಶೋ ಕಣ್ತುಂಬಿಕೊಂಡ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕಲಾವಿದರ ಅಭಿನಯ, ಮನಸೆಳೆಯುವ ಕಥೆ, ರಾಜಮೌಳಿ ಅವರ ನಿರ್ದೇಶನವನ್ನು ಜನರು ಹಾಡಿ ಹೊಗಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ಕಲಾವಿದರಾದ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಕೂಡ ನಟಿಸಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap