75 ವರ್ಷಗಳ ಬಳಿಕ ಎಂಸಿಸಿಗೆ ಬಾಲಕರರಿಗೆ ಅವಕಾಶ…..!

ಬೆಂಗಳೂರು: 

   ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬರೊಬ್ಬರಿ 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೋ-ಎಜುಕೇಷನ್ ಗೆ ಆದ್ಯತೆ ನೀಡಿದ್ದು, ಕಾಲೇಜಿನಲ್ಲಿ ಬಾಲಕರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

   ನಗರದ ಪ್ರತಿಷ್ಠತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿದ್ದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಾಲಕರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಕೆಲವು ವರ್ಷಗಳ ಹಿಂದೆ ಪದವಿ ಕೋರ್ಸ್‌ಗಳಿಗೆ ಬಾಲಕರಿಗೂ ಪ್ರವೇಶ ನೀಡುವ ಮಹತ್ವದ ತೀರ್ಮಾನ ಮಾಡಿದ್ದ ಮೌಂಟ್‌ ಕಾರ್ಮೆಲ್‌ ಕಾಲೇಜು, ಈಗ ಪದವಿಪೂರ್ವ ಕೋರ್ಸ್‌ಗಳಿಗೂ ಬಾಲಕರಿಗೆ ಪ್ರವೇಶ ಒದಗಿಸುವ ತೀರ್ಮಾನ ಮಾಡಿದೆ. ಅದರೊಂದಿಗೆ ಲಿಂಗ ಸಮಾನತೆ ನಿಟ್ಟಿನಲ್ಲಿ ಮಹತ್ವದ ದಾಪುಗಾಲಿಟ್ಟಿದೆ. 

   ಈ ವರ್ಷದಿಂದ ಎಲ್ಲಾ ಪದವಿ ಹಾಗೂ ಪದವಿಪೂರ್ನ ಬಾಲಕ ಹಾಗೂ ಬಾಲಕಿಯರಿಗೆ  ಅಡ್ಮಿಷನ್‌ ಸಿಗಲಿದೆ ಎಂದು ನಗರದ ಪ್ರಮುಖ ಮಹಿಳಾ ಕಾಲೇಜು ಎನಿಸಿಕೊಂಡಿದ್ದ  ಮೌಂಟ್‌ ಕಾರ್ಮೆಲ್‌ ಕಾಲೇಜು ತನ್ನ ವೆಬ್‌ಸೈಟ್‌ನಲ್ಲಿಯೇ ಪ್ರಕಟಿಸಿದೆ. 2015ರಲ್ಲಿ ಪದವಿ ಕೋರ್ಸ್‌ಗಳಿಗೆ ಬಾಲಕರಿಗೆ ಪ್ರವೇಶ ನೀಡುವ ನಿರ್ಧಾರ ಮಾಡಿತ್ತು. ಈಗ ಪದವಿಪೂರ್ವ ಕೋರ್ಸ್‌ಗಳಿಗೂ ಅದನ್ನು ವಿಸ್ತರಿಸಿದೆ.

   ಮಾರ್ಚ್ 2015 ರಲ್ಲಿ, ಕಾಲೇಜು ಉನ್ನತ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಪಿಜಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿತು. ಅದೇ ವರ್ಷದ ಏಪ್ರಿಲ್‌ನಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಬೆಂಗಳೂರು ವಿವಿ ಉಪಕುಲಪತಿಗಳಿಗೆ ಕಳುಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯವು ಕೂಡ ತನ್ನ ಕೌನ್ಸಿಲ್ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿದೆ. ಜುಲೈ 1948 ರಿಂದ ನಗರದಲ್ಲಿ ಮಹಿಳಾ ಕಾಲೇಜು ಕಾರ್ಯನಿರ್ವಹಿಸುತ್ತಿದೆ.

ಕಾಲೇಜಿನ ಇತಿಹಾಸ

   ಕೇರಳದ ತ್ರಿಶೂರ್‌ನಲ್ಲಿರುವ ಕಾರ್ಮೆಲೈಟ್ ಸಿಸ್ಟರ್ಸ್ ಆಫ್ ಸಿಸ್ಟರ್ಸ್ ಆಫ್ ಸೇಂಟ್ ತೆರೇಸಾ ಮಾಲೀಕತ್ವ ಮತ್ತು ಆಡಳಿತದಲ್ಲಿರುವ ಶಿಕ್ಷಣ ಸಂಸ್ತೆಯಾಗಿತ್ತು. ಆರಂಭದಲ್ಲಿ ಇದು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿತ್ತು, 1948 ರಲ್ಲಿ ಇದನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಜುಲೈ 1948 ರಲ್ಲಿ 50 ವಿದ್ಯಾರ್ಥಿಗಳೊಂದಿಗೆ ಮೌಂಟ್‌ ಕಾರ್ಮೆಲ್‌ ತನ್ನ ತರಗತಿಗಳನ್ನು ಪ್ರಾರಂಭ ಮಾಡಿತ್ತು.  

   ಮಹಿಳಾ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿತ್ತು. ಆರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದ್ದ ಇದು, 1964ರಲ್ಲಿ ಬೆಂಗಳೂರು ವಿವಿ ವ್ಯಾಪ್ತಿಗೆ ಬಂದಿತು. 

   ಇಂದು ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸುಮಾರು 5,000ಕ್ಕೂ ಅಧಿಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು, ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ನಟಿ ದೀಪಿಕಾ ಪಡುಕೋಣೆರಂತಹ ಸ್ಟಾರ್ ನಟರೂ ಸಹ ಇದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap