ಬೆಳ್ತಂಗಡಿ:
ಧರ್ಮಸ್ಥಳವನ್ನು ಮಗಿಸಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ಇದರ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ ಎಂದು ಬರಹಗಾರ ಹಾಗೂ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಕರೆ ನೀಡಿದ್ದಾರೆ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಕುರಿತಂತೆ ಬೆಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳ ಮುಗಿಸಲು ಹೊರಟ ಷಡ್ಯಂತ್ರದ ಸೂತ್ರಧಾರಿ ದಕ್ಷಿಣ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್. ಈತನಿಗೂ ಕರ್ನಾಟಕಕ್ಕೂ ಏನು ಸಂಬಂಧ? ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲೇ ಅವರು ಧರ್ಮಸ್ಥಳವನ್ನು ಮುಗಿಸುವ ಷಡ್ಯಂತ್ರ ಮಾಡಿದ್ದವರು ಎಂದು ಕಿಡಿಕಾರಿದ್ದಾರೆ.
ಶಶಿಕಾಂತ್ ಸೆಂಥಿಲ್‌ಗೆ ತಮಿಳುನಾಡಿನಲ್ಲಿ ಯಾವುದೇ ಬೆಲೆ ಇಲ್ಲ. ಅಲ್ಲಿ ಅವರಿಗೆ ವಿರೋಧ ಇದೆ. ಹೀಗಿರುವಾಗ ಅವರು ಕರ್ನಾಟಕದಲ್ಲಿ ಮನೆ ಮಾಡಿಕೊಂಡು ಇಡೀ ವಿಧಾನಸೌಧವನ್ನೇ ಎಡಚರರ ಹೆಡ್ ಆಫೀಸ್ ಮಾಡಿಕೊಂಡಿದ್ದಾರೆ. ಎಸ್‌ಐಟಿ ಬಗ್ಗೆ ಸರಕಾರ ಇಂತಹ ಆತುರಾತುರ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದರೆ ಅದರ ಹಿಂದೆ ಇರುವ ಕಾಣದ ಕೈ ಈ ಸೆಂಥಿಲ್. ಈ ಸಂಚು ಇಂದು ನಿನ್ನೆಯದ್ದಲ್ಲ. ಧರ್ಮಸ್ಥಳದ ವಿರುದ್ಧ ಸಂಚು ರೂಪಿಸುವವರು ಕಾಂಗ್ರೆಸ್‌ನ ಕಚೇರಿಯಲ್ಲಿ ಸಿಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಸಂಪೂರ್ಣವಾಗಿ ಬದಲಾಗಿದೆ. ಇವತ್ತಿನ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಎಡ ಪಂಥೀಯವಾಗಿ ಬದಲಾಗಿದೆ. ಡಿಕೆಶಿ, ಲಕ್ಷ್ಮಣ್ ಸವದಿ ಸೇರಿದಂತೆ ಅನೇಕರು ಷಡ್ಯಂತ್ರ ನಡೆದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಷಡ್ಯಂತ್ರ ಮಾಡಿದವರು ಯಾರು? ಎಸ್‌ಐಟಿಯವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಅಂತಾ ಆದ್ರೆ ಮೊದಲಿಗೆ ಮಾಸ್ಕ್ ಮ್ಯಾನ್ ತನಿಖೆ ನಡೆಸಬೇಕಿತ್ತು ಎಂದಿದ್ದಾರೆ.








