ನವದೆಹಲಿ :
ಇತ್ತೀಚೆಗಷ್ಟೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಮತ್ತೆ ಇಳಿಕೆಯಾಗಿದ್ದು, ಇದೀಗ ಏಕಾಏಕಿ ಮತ್ತೆ ಏರಿದೆ. ಬುಧವಾರದಂದು ಚಿನಿವಾರ ಪೇಟೆಯಲ್ಲಿ 10 ಗ್ರಾಂ ಬಂಗಾರದ ಬೆಲೆ 670 ರೂಪಾಯಿ ಏರಿಕೆಯಾಗುವ ಮೂಲಕ ಬರೋಬ್ಬರಿ 60,750 ರೂಪಾಯಿಗಳಾಗಿದೆ.ಮಂಗಳವಾರದಂದು ಚಿನ್ನದ ಬೆಲೆ 60,080 ರೂಪಾಯಿಗಳಾಗಿತ್ತು.
ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 1,150 ರೂಪಾಯಿ ಏರಿಕೆಯಾಗುವ ಮೂಲಕ 76,100 ರೂಪಾಯಿ ತಲುಪಿದೆ. ಚಿನ್ನ – ಬೆಳ್ಳಿ ಬೆಲೆಯಲ್ಲಿ ಏರಿಕೆ ಆಗಿರುವುದು ಹಬ್ಬದ ಸಂದರ್ಭದಲ್ಲಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ನಿರಾಸೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
