‘ಸಾರಿಗೆ ನೌಕರ’ರಿಗೆ ಬಿಗ್ ಶಾಕ್: ‘ಸರ್ಕಾರಿ ನೌಕರ’ರೆಂದು ಪರಿಗಣಿಸೋ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ – ಸಚಿವ ಬಿ.ಶ್ರೀರಾಮುಲು

ಬೆಂಗಳೂರು:

ರಾಜ್ಯದ ಸಾರಿಗೆ ಇಲಾಖೆಯ ನೌಕರರನ್ನು  ಸರ್ಕಾರಿ ನೌಕರರೆಂದು ಪರಿಗಣಿಸೋ ಪ್ರಸ್ತಾವನೆಯೇ ರಾಜ್ಯ ಸರ್ಕಾರದ ಮುಂದೆ ಇರೋದಿಲ್ಲ ಎಂಬುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲುಎಂಬುದಾಗಿ ತಿಳಿಸಿದ್ದಾರೆ.ಈ ಮೂಲಕ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಿದ್ದಾರೆ.

ಈ ಬಗ್ಗೆ ವಿಧಾನಸಭೆಯ ಸದಸ್ಯ ರಾಮಪ್ಪ ಎಸ್ ಅವರು ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂದಿದ್ದಾರೆ. ಇದ್ದಕ್ಕೆ ಉತ್ತರಿಸಿರುವಂತ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಪ್ರಸ್ತಾವನೆ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ.

IPL 2022 : ಕಡಿಮೆ ರನ್​ ಟಾರ್ಗೆಟ್​ಗೂ ತಿಣುಕಾಡಿ ಗೆದ್ದ ಆರ್​ಸಿಬಿ

ಇನ್ನೂ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ನೀಡಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದ ಪ್ರಶ್ನೆಗೆ, ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ 1950ರಡಿ ಅಸ್ತಿತ್ವಕ್ಕೆ ಬಂದಿರುವಂತ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ.

ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ, ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ತನ್ನ ಆಂತರಿಕ ಮೂಲಗಳಿಂದಲೇ ಭರಿಸಬೇಕಿದೆ. ಆದ್ದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಮತ್ತು ವೇತನವನ್ನು ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಶ್ರೇಣಿ ಮತ್ತು ವೇತನಕ್ಕೆ ಹೊಲಿಸಲು ಬರೋದಿಲ್ಲ ಎಂದು ತಿಳಿಸಿದ್ದಾರೆ.

 ಹೊಸ ಹಣಕಾಸು ವರ್ಷದ ಆರಂಭ : ನಾಳೆಯಿಂದ ಬದಲಾಗಲಿವೆ ಈ ನಿಯಮಗಳು

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap