ಬೆಂಗಳೂರು:
ಅಕ್ಷಯ ತೃತೀಯ ಹತ್ತಿರವಾಗುತ್ತಿದ್ದಂತೆ ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಬೆಳ್ಳಿ ಬೆಲೆ ಹೆಚ್ಚಾಗುತ್ತಲೇ ಇದ್ದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಅಕ್ಷಯ ತೃತೀಯ ಹಬ್ಬಕ್ಕೆಂದು ಚಿನ್ನ ಬೆಳ್ಳಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇದಕ್ಕಾಗಿ ಕೆಲ ದಿನಗಳ ಮುಂಚಿತವಾಗಿ ಜನ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಆದರೆ ನಿತ್ಯ ಬಂಗಾರದ ಬೆಲೆ ಏರಿಕೆಯಿಂದಾಗಿ ಹಣ ಹೊಂದಿಸಿಕೊಳ್ಳುವುದು ಗ್ರಾಹಕರಿಗೆ ಬಿಸಿ ತುಪ್ಪವಾಗಿದೆ.
ಸಾಮಾನ್ಯವಾಗಿ ಅಕ್ಷಯ ತೃತೀಯ ಬಂತೆಂದರೆ ಜನ ಚಿನ್ನ ಬೆಳ್ಳಿ ಖರೀದಿಗೆ ಆಭರಣ ಅಂಗಡಿಗಳತ್ತ ಮುಖ ಮಾಡುತ್ತಾರೆ. ಈ ಸಂದರ್ಭದಲ್ಲಿ ಆಭರಣಗಳ ಬೆಲೆ ಎಷ್ಟು ಕಡಿಮೆ ಇದ್ದರೂ ಸಾಲದು. ಆದರೆ ಬೆಲೆ ಹೆಚ್ಚಾದರೆ ಆಭರಣ ಖರೀದಿಗೆ ಈ ಬಾರಿ ಜನ ಹಿಂದೇಟು ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ. ಅಂದಹಾಗೆ ಮೇ 10ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಇದು ಆರಂಭಕ್ಕೂ ಮುನ್ನ ಬಂಗಾರದ ಬೆಲೆ ಹೆಚ್ಚಾಗುತ್ತಲೇ ಇದ್ದು ಗ್ರಾಹಕರ ಜೇಬಿಗೆ ಈ ಬಾರಿ ಕತ್ತರಿ ಗ್ಯಾರಂಟಿ ಎನ್ನುವಂತಾಗಿದೆ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.
ಇಂದು (ಮೇ8) ಬಂಗಾರದ ಬೆಲೆ ಗ್ರಾಂಗೆ 30ರೂಪಾಯಿನಷ್ಟು ಏರಿಕೆಯಾಗಿದೆ. ಬೆಳ್ಳಿ ಬೆಲೆ ಒಂದು ರೂಪಾಯಿ ಹೆಚ್ಚಾಗಿದೆ. ಹಲವು ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,350ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,380 ರೂಪಾಯಿ ಆಗಿದೆ. ಇನ್ನೂ 100 ಗ್ರಾಂ ಬೆಳ್ಳಿ ಬೆಲೆ 8500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,350 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 8400 ರೂಪಾಯಿಯಲ್ಲಿ ಇದೆ. ಹಾಗಾದರೆ ಬೆಂಗಳೂರು ಸೇರಿದಂತೆ ಎಲ್ಲೆಲ್ಲಿ ಚಿನ್ನದ ಬೆಲೆ ಇಂದು (ಮೇ8) ಹೇಗಿದೆ ಎಂದು ತಿಳಿಯೋಣ.
ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,350 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,380 ರೂಪಾಯಿ ಇದೆ. ಜೊತೆಗೆ ಬೆಳ್ಳಿ ಬೆಲೆ 10 ಗ್ರಾಂಗೆ 840 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,350 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,380 ರೂಪಾಯಿ ಇದೆ. ಜೊತೆಗೆ ಬೆಳ್ಳಿ ಬೆಲೆ 10 ಗ್ರಾಂಗೆ 850 ರೂಪಾಯಿ ಇದೆ.
ಜೈಪುರ್ ದಲ್ಲಿ 66,500 ರೂಪಾಯಿ ಇದೆ. ಚೆನ್ನೈ ದಲ್ಲಿ 66,400 ರೂಪಾಯಿ, ಭುವನೇಶ್ವರ್ ದಲ್ಲಿ 66,350 ರೂ, ಬೆಂಗಳೂರಿನಲ್ಲಿ 66,350 ರೂಪಾಯಿ, ಕೋಲ್ಕತಾದಲ್ಲಿ 66,350 ರೂಪಾಯಿ ಇದೆ.
ಇನ್ನೂ ಕೇರಳದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,350 ರೂಪಾಯಿ ಇದ್ದರೆ, ಅಹ್ಮದಾಬಾದ್ ದಲ್ಲಿ 66,400 ರೂಪಾಯಿ, ಮುಂಬೈನಲ್ಲಿ 66,350ರೂ, ದೆಹಲಿನಲ್ಲಿ 66,500 ರೂ, ಲಕ್ನೋದಲ್ಲಿ 66,500 ರೂಪಾಯಿ ಇದೆ.
ಕತಾರ್: 2,650 ಕತಾರಿ ರಿಯಾಲ್ (60,691 ರೂ), ಅಮೆರಿಕ: 705 ಡಾಲರ್ (58,869 ರುಪಾಯಿ), ಸಿಂಗಾಪುರ: 978 ಸಿಂಗಾಪುರ್ ಡಾಲರ್ (60,343 ರುಪಾಯಿ) ಸೌದಿ ಅರೇಬಿಯಾ: 2,660 ಸೌದಿ ರಿಯಾಲ್ (59,222 ರುಪಾಯಿ), ಮಲೇಷ್ಯಾ: 3,380 ರಿಂಗಿಟ್ (59,544 ರುಪಾಯಿ), ದುಬೈ: 2,595 ಡಿರಾಮ್ (58,992 ರುಪಾಯಿ), ಕುವೇತ್: 220.50 ಕುವೇತಿ ದಿನಾರ್ (59,895 ರುಪಾಯಿ), ಓಮನ್: 281 ಒಮಾನಿ ರಿಯಾಲ್ (60,962 ರುಪಾಯಿ) ಇದೆ.
ವಿವಿಧ ನಗರಗಳಲ್ಲಿರುವ 100 ಗ್ರಾಮ್ ಬೆಳ್ಳಿ ಬೆಲೆ ಕೋಲ್ಕತಾದಲ್ಲಿ 8,500 ರೂಪಾಯಿ ಇದೆ. ಕೇರಳದಲ್ಲಿ 8,850 ರೂ, ಅಹ್ಮದಾಬಾದ್ 8,500 ರೂಪಾಯಿ, ಜೈಪುರ್ದಲ್ಲಿ 8,500 ರೂಪಾಯಿ ಇದೆ. ಇನ್ನೂ ಬೆಂಗಳೂರಿನಲ್ಲಿ 8,400 ರೂಪಾಯಿ, ಚೆನ್ನೈ: 8,850 ರೂಪಾಯಿ, ಮುಂಬೈನಲ್ಲಿ 8,500 ರೂಪಾಯಿ ಇದ್ದು, ದೆಹಲಿದಲ್ಲಿ 8,500 ರೂಪಾಯಿ ಇದ್ದರೆ ಲಕ್ನೋದಲ್ಲಿ 8,500 ರೂಪಾಯಿ ಭುವನೇಶ್ವರ್ದಲ್ಲಿ 8,850 ರೂಪಾಯಿ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ