ಮಹಿಳಾ ವಿಶ್ವಕಪ್​​ನಲ್ಲೇ ಅತ್ಯಂತ ದೊಡ್ಡ ಸಿಕ್ಸ್: ದಾಖಲೆ ಬರೆದ ಸ್ಫೋಟಕ ಬ್ಯಾಟರ್ ಪೂಜಾ

 ನಾಯಕಿ ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಮತ್ತು ಹರ್ಮನ್​ಪ್ರೀತ್ ಕೌರ್ ಅವರ ಅಮೋಘ ಅರ್ಧಶತಕದ ಜೊತೆ ಪೂಜಾ ವಸ್ತ್ರಾಕರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ 277 ರನ್ ಸಿಡಿಸಿದೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವನಿತೆಯರ  ವಿರುದ್ಧ ಸೆಣೆಸಾಟ ನಡೆಸುತ್ತಿದ್ದು ಸವಾಲಿನ ಟಾರ್ಗೆಟ್ ನೀಡಿದೆ. ನಾಯಕಿ ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಮತ್ತು ಹರ್ಮನ್​ಪ್ರೀತ್ ಕೌರ್  ಅವರ ಅಮೋಘ ಅರ್ಧಶತಕದ ಜೊತೆ ಪೂಜಾ ವಸ್ತ್ರಾಕರ್  ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ 277 ರನ್ ಸಿಡಿಸಿದೆ.

ಶಾಲಾ ಪಠ್ಯದಲ್ಲಿ ನಟ ಪುನೀತ್ ಜೀವನಗಾಥೆ: ಪ್ರಾಥಮಿಕ ತರಗತಿ ಪುಸ್ತಕದಲ್ಲಿ ದೊಡ್ಮನೆ ಹುಡುಗನ ಯಶೋಗಾಥೆ!

ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಕೂಡ ಬಿರುಸಿನ ಆರಂಭ ಪಡೆದುಕೊಂಡಿದೆ. ಮುಖ್ಯವಾಗಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಭಾರತ ಎದುರಾಳಿಗೆ ಕಠಿಣ ಟಾರ್ಗೆಟ್ ನೀಡಲು ಪ್ರಮುಖ ಕಾರಣ ಕೊನೇ ಹಂತದಲ್ಲಿ ಪೂಜಾ ವಸ್ತ್ರಾಕರ್ ನೀಡಿದ ಸ್ಫೋಟಕ ಪ್ರದರ್ಶನ. ಕೇವಲ 28 ಎಸೆತಗಳಲ್ಲಿ 1 ಫೋರ್ ಮತ್ತು 2 ಭರ್ಜರಿ ಸಿಕ್ಸರ್ ಸಿಡಿಸಿ 34 ರನ್ ಗಳಿಸಿ ಇನ್ನಿಂಗ್ಸ್​ನ ಕೊನೇ ಎಸೆತದಲ್ಲಿ ರನೌಟ್​ಗೆ ಬಲಿಯಾದರು.

ಕಾಂಗರೂ ಪಡೆಯ ಬೌಲರ್​​ಗಳನ್ನು ಕಾಡಿದ ಪೂಜಾ ಎರಡು ಬೊಂಬಾಟ್ ಸಿಕ್ಸರ್​​ಗಳ ಮೂಲಕ ಗಮನ ಸೆಳೆದರು. ಅದರಲ್ಲೂ ಇವರು ಸಿಡಿಸಿದ ಒಂದು ಸಿಕ್ಸ್ ದಾಖಲೆಯನ್ನೇ ಬರೆಯಿತು. ಹೌದು, ಮೆಘನ್ ಶೂಟ್ ಅವರ 49ನೇ ಓವರ್​​ನ 5ನೇ ಎಸೆತದಲ್ಲಿ ಪೂಜಾ ಅವರು ಲೆಂತ್ ವಾಲ್ ಅನ್ನು ಲಾಂಗ್ ಆನ್ ಮೂಲಕ ಸಿಕ್ಸರ್​ಗೆ ಅಟ್ಟಿದರು. ಈ 81 ಮೀಟರ್​ನ ಸಿಕ್ಸ್ ನೂತನ ದಾಖಲೆ ಬರೆದಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ರಲ್ಲಿ ದಾಖಲಾದ ಅತ್ಯಂತ ದೊಡ್ಡದಾದ ಸಿಕ್ಸ್​ ಇದಾಗಿದೆ.

ವಿದ್ಯಾರ್ಥಿನಿಯರು `ಹಿಜಾಬ್’ ಧರಿಸಿ ಪರೀಕ್ಷೆ, ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ : ಸಚಿವ ಬಿ.ಸಿ.ನಾಗೇಶ್

ಈಡನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆರಂಭದಲ್ಲಿ ಮೆಗ್‌ ಲ್ಯಾನಿಂಗ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆಸ್ಟ್ರೇಲಿಯಾದ ಬೌಲರ್​​​ಗಳು ಯಶಸ್ವಿಯಾದರು. ಭರ್ಜರಿ ಫಾರ್ಮ್​​ನಲ್ಲಿದ್ದ ಸ್ಮೃತಿ ಮಂದಾನ ಕೇವಲ 11 ಎಸೆತಗಳಲ್ಲಿ 10 ರನ್​ಗೆ ಔಟಾದರೆ, ಶಫಾಲಿ 16 ಎಸೆತಗಳಲ್ಲಿ ತಲಾ 1 ಫೋರ್, ಸಿಕ್ಸರ್​​ನೊಂದಿಗೆ 12 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು.

ಕೇವಲ 28 ರನ್‌ಗಳಿಗೆ ಆರಂಭಿಕ ಇಬ್ಬರು ಬ್ಯಾಟರ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್ ಹಾಗೂ ಯಾಶ್ತಿಕಾ ಭಾಟಿಯಾ ಮೂರನೇ ವಿಕೆಟ್‌ಗೆ 130 ರನ್‌ಗಳ ಸಮಯೋಚಿತ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ವೃತ್ತಿಜೀವನದ ಎರಡನೇ ಅರ್ಧಶತಕ ಚಚ್ಚಿದ ಯಾಶ್ತಿಕಾ ಭಾಟಿಯಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಿದರು. ಯಾಶ್ತಿಕಾ ಭಾಟಿಯಾ 83 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 59 ರನ್‌ ಬಾರಿಸಿ ಡಾರ್ಸಿ ಬ್ರೌನ್‌ಗೆ ವಿಕೆಟ್ ಒಪ್ಪಿಸಿದರು. ಮಿಥಾಲಿ 96 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 68 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ

ಇವರಿಬ್ಬರ ನಿರ್ಗಮನದ ಬಳಿಕ ರಿಚ್ಚಾ ಘೋಷ್ (8) ಹಾಗೂ ಸ್ನೇಹ್ ರಾಣ (0) ಬೇಗನೆ ಔಟಾದರು. ಆದರೆ, ನಿಂತು ಆಡಿದ ಹರ್ಮನ್​ಪ್ರೀತ್ ಕೌರ್ ಕೊನೇ ಹಂತದಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಕೇವಲ 47 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 57 ರನ್ ಚಚ್ಚಿದರು. ಇವರ ಜೊತೆ ಸೇರಿದ ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 34 ರನ್ ಗಳಿಸಿದರು. ಭಾರತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿತು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link