ಮಧುಗಿರಿ :
ತಾಲೂಕಿನ ಅತ್ಯಂತ ದೊಡ್ಡ ಕೆರೆ ಎನಿಸಿಕೊಂಡಿರುವ ಬಿಜವರದ ಕೆರೆ ಕೋಡಿಯು ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ಹಾಳಾಗಿದ್ದರು ಸಹ ಇದರ ದುರಸ್ತಿಗೆ ಯಾರೂ ಮುಂದಾಗದಿರುವುದು ಬೇಸರದ ಸಂಗತಿ ಯಾಗಿದೆ.ತಾಲೂಕಿನ ಕಸಬ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿರುವ ಹಾಗೂ ಸುಮಾರು 10 ಗ್ರಾಮಗಳಿಗೆ ನೀರನ್ನೊದಗಿಸುವ ಗಂಗಾ ನದಿ ಎಂದು ಕರೆಯಲ್ಪಡುವ ಈ ಕೆರೆಗೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ನೀರು ಶೇಖರಣೆ ಯಾಗ ತೊಡಗಿದೆ.
ಈಗಾಗಲೇ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಬಾರಿ ಮಳೆಗೆ ಕೆರೆಯ ಕೊಡಿಯು ಶಿಥಿಲವಾಗಿದ್ದು ಅಂದಿನಿಂದ ಇಂದಿನ ವರೆವಿಗೂ ಈ ಕೆರೆಯ ಕೊಡಿ ದುರಸ್ತಿ ಗೆ ಸಂಬಂಧಪಟ್ಟವರು ಮುಂದಾಗಿಲ್ಲ.ದೊಡ್ಡ ಕೆರೆ ಇದಾಗಿರುವುದರಿಂದ ಹೆಚ್ಚು ನೀರು ಸಂಗ್ರಹವಾಗಿ ಹರಿದರೆ ಕೆರೆಯ ಕೋಡಿಯು ಹೊಡೆದು ಹೋಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಆದ್ದರಿಂದ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಾತ್ಕಲಿಕವಾಗಿ ಯಾದರೂ ಕೆರೆಯ ಕೋಡಿಯ ದುರಸ್ತಿಗೆ ಮುಂದಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
